ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೂರು ತಾಲೂಕು ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕನ್ನು ಕಲ್ಯಾಣ ಕರ್ನಾಟಕ ಮಾದರಿ ೩೭೧ಜೆ ವಿಶೇಷ ಸ್ಥಾನ ನೀಡಿದೆ ಅಭಿವೃದ್ಧಿ ಅನುಕೂಲವಾಗುತ್ತದೆ ಎಂದು ಎಂದು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರು ಪೀಠದ ಶ್ರೀ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ (Sri Jagadguru Prasannanandpuri Swamiji)
ಹೇಳಿದರು.
ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ವಾಲ್ಮೀಕಿ ನಾಯಕ ನೌಕರರ ಸಮಾವೇಶ , ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನೆ ನೀಡಿದರು.
ಮೂರು ತಾಲೂಕುಗಳಿಗೆ 371 ಜೆ ಒಳಪಡಿಸಿ
ಕಲ್ಯಾಣ ಕರ್ನಾಟಕ ಜಿಲ್ಲೆಗಳಂತೆ 371 ಜೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ , ಮೊಳಕಾಲ್ಮುರು, ದಾವಣಗೆರೆ ಜಿಲ್ಲೆಯ ಜಗಳೂರನ್ನು ಸೇರ್ಪಡೆ ಮಾಡುವ ಕೆಲಸ ಆಗಬೇಕಿದೆ. ೩೭೧ಜೆ ಸ್ಥಾನದೊಂದಿಗೆ ಕೇಂದ್ರದಿಂದ ವಿಶೇಷ ಅನುದಾನ ದೊರೆತರೆ, ಈ ಜಿಲ್ಲೆಗಳ ನಾಯಕ ಸಮುದಾಯದ ಜನರ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ರಾಜನಹಳ್ಳಿ ವಾಲ್ಮೀಕಿ ಜಾತ್ರಾಮಹೋತ್ಸವದಲ್ಲಿ ಈ ಕುರಿತಂತೆ ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ ಶ್ರೀರಾಮಾಯಣ ರಚಿಸಿದ ಶ್ರೀ ಮಹರ್ಷಿ ವಾ ಲ್ಮೀಕಿ, ಬೇಡರಕಣ್ಣಪ್ಪ ಹಾಗೂ ಏಕಲವ್ಯರಿಗೆ ಈ ದೇಶದಲ್ಲಿ ಸೂಕ್ತ ಪುರಸ್ಕಾರ ಸಿಕ್ಕಿಲ್ಲ ಎಂಬ ಬೇಸರ ಹೊರ ಹಾಕಿದರು.
ರಾಜ್ಯ ಸರ್ಕಾರ ಕೆಲವು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ರಾಜವೀರ ಮದಕರಿ ನಾಯಕರ ಥೀಮ್‌ಪಾರ್ಕ್ ಆರಂಭಿಸುವುಗಿ ಕೇಂದ್ರದ ಗೃಹ ಮಂತ್ರಿಗಳಾದ ಅಮಿತ್‌ಶಾ ಅವರ ಭರವಸೆ ಈಡೇರಿಲ್ಲ ಎಂದು ಕುಟುಕಿದರು.
ನಾಯಕ ಸಮಾಜದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ನಮಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ಮೂಲಕ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದರು. ಆದರೆ ರಾಜ್ಯದಲ್ಲಿ ಅತ್ಯಧಿಕ ನಕಲಿ ಪ್ರಮಾಣ ಪತ್ರದ ಹಾವಳಿ ಹೆಚ್ಚುತ್ತಿದೆ. ಕೆಲವರು ಎಸ್‌ಸಿ, ಎಸ್‌ಟಿ ಜನರ ಸೌಲಭ್ಯಗಳನ್ನು ಕಬಳಿಕೆ ಮಾಡುತ್ತಿದ್ದು ಈ ಬಗ್ಗೆ ಸಮುದಾಯ ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿದೆ. ಮೀಸಲು ಹೆಚ್ಚಳ ಬೇಡಿಕೆಗೆ ಅಡ್ಡಿಯಾಗಿದ್ದ ಕಾನೂನು ತೊಡಕು ಅರ್ಜಿ ಹಾಕದಿದ್ದರು ಸಹ ಸಮುದಾಯಕ್ಕೆ ಶೇ 10% ಮೀಸಲು ನೀಡಲು ಯಾವುದು ಅಡ್ಡಿ ಆತಂಕಗಳು ಎದುರಾಗಲಿಲ್ಲ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀಗಳುಸಮಾಜ ಸಂಘಟಿತವಾಗ ಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಮಾತನಾಡಿ ಚಿತ್ರದುರ್ಗಕ್ಕೆ ೩೭೧ ಜೆ ಸ್ಥಾನ ಸಿಗಬೇಕಿದೆ. ಈ ನಿಟ್ಟಿ ನಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ನಡೆಯುತ್ತಿರುವ ಸಮೀಕ್ಷೆ ಚಿತ್ರದುರ್ಗ ಮತ್ತಿತರೆಡೆ ನಡೆಯ ಬೇಕು. ಬೇಡಿಕೆ ಈಡೇರಿಕೆ ಗಾಗಿ ಸರ್ಕಾರಗಳ ಮೇಲೆ ಒತ್ತಡ ಹಾಕಬೇಕು ಎಂದರು.
ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಅವರ ಪರವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅವರ ಪರವಾಗಿ ಅನು ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ರಾಜ್ಯ ಸರ್ಕಾರದ ರಾಜ್ಯ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿದ್ದ ಎನ್.ವೈ ಹನುಮಂತಪ್ಪ ಅವರಿಗೆ ಸಿಕ್ಕಿದ್ದು ಅವರ ಸೇವೆಗೆ ತಂದ ದೊಡ್ಡ ಗೌರವವಾಗಿದೆ. ಎನ್.ವೈ.ಹನುಮಂತಪ್ಪ ಅವರಿಗೆ ವಾಲ್ಮೀಕಿ ಪ್ರಶಸ್ತಿಯಿಂದ ದೊರೆತಿರುವ 5 ಲಕ್ಷ ಮೊತ್ತವನ್ನು ವಾಲ್ಮೀಕಿ ಸಮಾಜದ ವ್ಯಕ್ತಿತ್ವ ವಿಕಾಸಕ್ಕೆ ನೀಡಲಾಗುತ್ತದೆ ಎಂದರು.
ಸಚಿವ ಸತೀಶ್‌ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಮಾತನಾಡಿ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಒಂದು ಸರ್ಕಾರ ಉತ್ತಮ ಆಡಳಿತ ನಡೆಯಲು ಸರ್ಕಾರಿ ನೌಕರರು ಪಾತ್ರ ದೊಡ್ಡದು.ಸಮಾಜ ಪರ ಕಾಳಜಿಯಿಂದ ಕಳೆದ 12 ವರ್ಷಗಳಿಂದ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸಾಧಕರನ್ನು ಸನ್ಮಾನಿಸಿ ಯುವ ಸಮೂಹಕ್ಕೆ ಸ್ಪೂರ್ತಿ ತುಂಬುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.
ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿಯಿಂದ ಅಧಿಕಾರ ದೊರತಿದೆ. ಅನೇಕ ನಾಯಕರು ಸಮಾಜದ ಪರವಾಗಿ ಕೆಲಸ ಮಾಡಲು ಸಹಕಾರಿಯಾಗಿದ್ದು ಸಮಾಜದ ಪರವಾಗಿ ನಿಂತು ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತಷ್ಟು ಶ್ರಮ ಹಾಕಬೇಕು.
ಎಲ್ಲಾ ಸಮಾಜಗಳು ಸಾಮಾಜಿಕವಾಗಿ ಬಲಿಷ್ಠವಾಗಲು ಬೆಳೆಯಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ನೀಡುವ ಕೆಲಸ ಮಾಡಬೇಕು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ೩೭೧ಜೆ ಸ್ಥಾನಕ್ಕಾಗಿ ನಿರಂತರ ಪಕ್ಷಾತೀತ ಹೋರಾಟದಿಂದ ಮಾತ್ರ ಸ್ಥಾನಮಾನ ದೊರೆಯಲು ಸಾಧ್ಯವಾಗುತ್ತದೆ.
ಶಾಸಕ ಟಿ.ರಘುಮೂರ್ತಿ ಮಾತನಾಡಿ ನಮ್ಮ ಸಮಾಜದಲ್ಲಿ ಹುಟ್ಟಿ ಎನ್.ವೈ.ಹನುಮಂತಪ್ಪ ಅವರ ಮಾಡಿದ ಸೇವೆಯನ್ನು ನಾವು ಎಂದು ಮರೆಯಲು ಸಾಧ್ಯವಿಲ್ಲ,
ಸಮಾಜದ ಪರವಾಗಿ ಸ್ವಾಮೀಜಿ ಅವರು ನಿರಂತರ 260 ದಿನಗಳ ಮೀಸಲಾತಿ ಹೋಟದಿಂದ. 3.5% ರಿಂದ 7 % ಗೆ ಮೀಸಲಾತಿ ದೊರೆಯಲು ಸಾಧ್ಯವಾಯಿತು. ಚಿತ್ರದುರ್ಗ ಜಿಲ್ಲೆ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು ಮದಕರಿನಾಯಕ ಆಳಿದ ಜಿಲ್ಲೆಯಾಗಿದೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಕುಂಠಿತವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದಂತೆ ಚಿತ್ರದುರ್ಗ ಜಿಲ್ಲೆಯ ಮೂರು ತಾಲೂಕುಗಳಾದ ಚಿತ್ರದುರ್ಗ , ಚಳ್ಳಕೆರೆ,ಮೊಳಕಾಲ್ಮುರು, ದಾವಣಗೆರೆ ಜಿಲ್ಲೆಯ ಜಗಳೂರನ್ನು 371 ಜೆ ಗೆ ವಿಶೇಷ ಸ್ಥಾನಮಾನಕ್ಕೆ ಸೇರಿಸುವ ಕೆಲಸ ಆಗಬೇಕಿದೆ. ಅದು ನಿರಂತರವಾಗಿ ಹೋರಟದಿಂದ ಮಾತ್ರ ಸಾಧ್ಯ, ಇಂತಹ ಮಹತ್ವದ ಹೋರಟಗಳಿಗೆ ರೂಪುರೇಷೆ ರೂಪಸಿ ಮಂಡಿಸಬೇಕು ಎಂದರು.
ವಿದ್ಯಾರ್ಥಿಗಳು ಪ್ರತಿಭೆ ಗುರುತಿಸಿ ಪುರಸ್ಕಾರವನ್ನು ಮಾಡುವ ಮೂಲಕ ಮಕ್ಕಳನ್ನು ಪ್ರೋತ್ಸಹಿಸುವ ಕೆಲಸ ಆಗುತ್ತಿದೆ. ತಂದೆ ತಾಯಿಗಳು ಸಹ ನಮ್ಮ ಮಕ್ಕಳು ನಮಗಿಂತ ಹೆಚ್ಚು ಆರ್ಥಿಕವಾಗಿ ಸಬಲರನ್ನು ಮಾಡಲು ಶ್ರಮಿಸಬೇಕು. ತಾವುಗಳು ಅರ್ಥ ದಾರಿ ಸವೆಸಿದ್ದು ಗುರಿ ಮುಟ್ಟುವ ತನಕ ನಿರಂತರ ಶ್ರಮ ಇರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿ ದೇಸೆಯಲ್ಲಿ ಉನ್ನತ ಹುದ್ದೆಗಳ ಕಡೆ ಗಮನ ಹರಿಸಬೇಕು. ಆದರೆ ಉನ್ನರ ಹುದ್ದೆ ದೊರೆತ ತಕ್ಷಣ ತಂದೆ ತಾಯಿಯನ್ನು ವೃದ್ದಾಶ್ರಮ ಸೇರಿಸುವ ಪ್ರಕರಣ ಹೆಚ್ಚುತ್ತಿದ್ದು ಪೋಷಕರನ್ನು ನೋಡಿಕೊಳ್ಳುವ ಕೆಲಸ ಮಕ್ಕಳು ಮಾಡಬೇಕು. ನಮ್ಮ ಸರ್ಕಾರ ನಮ್ಮ ಸಮಾಜಕ್ಕೆ ಮೂರು ಜನರಿಗೆ ಸಚಿವ ಸ್ಥಾನಮಾನ ನೀಡಿದೆ. ಎನ್.ವೈ.ಗೋಪಾಲಕೃಷ್ಣ ಅವರಿಗೆ ಸಹ ಉನ್ನರ ಸ್ಥಾನಮಾನ ನೀಡಲಿ ಎಂದು ಬಯಸುತ್ತೇನೆ.
ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಜಿಲ್ಲೆಯನ್ನು ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌ಡಿ ಪದವಿ ಪುರಸ್ಕೃತರನ್ನು ಗೌರವಿಸಲಾಯಿತು.
ಸಮಾಜದ ಸಾಧಕರಾದ ನಿವೃತ್ತ ಡಿಐಜಿ ಎಂ.ಎನ್.ನಾ ಗರಾಜ್, ಪತ್ರಕರ್ತ ಎಂ.ಎನ್.ಅಹೋಬಲಪತಿ, ಉದ್ಯಮಿಗಳಾದ ಪಿ.ವಿ.ಅರುಣ್‌ಕುಮಾರ್, ಸನ್ನಿ ಆರ್.ರಾಜಮನೆ, ಥ್ರೋಬಾಲ್ ಆಟಗಾರ ಆರ್.ಹೊಯ್ಸಳ,ಶಿಕ್ಷಕಿ ಕೆ.ಒ.ರತ್ನಮ್ಮ, ಡಾ.ಎನ್.ಬಿ.ಪ್ರಹ್ಲಾದ್,ಡಾ.ಎಚ್.ಟಿ. ತೇಜಸ್ವಿ, ಡಾ.ಎಸ್.ಕೆ.ಮೋಹನ್,ಮುಖ್ಯಲೆಕ್ಕಾಧಿ ಕಾರಿ ಸಿ.ಜೆ.ಶ್ರೀನಿವಾಸ್,ನಾಟಕ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಎಚ್.ಗುಡ್ಡದೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ,ತಾಲೂಕು ಅಧ್ಯಕ್ಷ ಬಿ.ಕಾಂತರಾಜ್,ಎಸ್.ಸಂದೀಪ್,ನಾಗೇಂದ್ ರ ಬಾಬು, ಮುಖ್ಯ ಲೆಕ್ಕಧಿಕಾರಿ ಶ್ರೀನಿವಾಸ್, ಅಧಿಕಾರಿಗಳಾದ ಡಾ.ಎಚ್.ಪಾಲಾಕ್ಷ,ಕೆ.ಪಿ.ಮಧುಸೂ ದನ್,ಪಾಪಯ್ಯ,ಮಾರಣ್ಣ,ಮಹಾಂತೇಶ್,ದೀ ಪಕ್,ಜೆ.ವೈಶಾಲಿ,ಎಸ್.ಎಸ್.ಗಣೇಶ್,ಡಾ .ಎಸ್.ರಂಗಸ್ವಾಮಿ, ಡಾ.ಸಾಲಿಮಂಜಪ್ಪ,ತಿಪ್ಪೇ ಸ್ವಾಮಿ,ಎ.ರಮೇಶ್,ಪ್ರೊ.ಟಿ.ಎಲ್.ಸು ಧಾಕರ್,ಮಂಜುನಾಥ್,ಬಸವರಾಜ ಟಿ.ಗೊರವರ್,ಅಂಜಿನಪ್ಪ, ಕೆ.ಪಿ.ಸಂಪತ್‌ಕುಮಾರ್,ಜಿ. ಬಿ.ಮಹಂತೇಶ್,ಎಸ್.ಮಂಜುನಾಥ್,ಎನ್.ಪಿ .ರವಿ,ಎಚ್.ಮಹೇಶ್, ಪೋಲಿಸ್ ರವಿ ಮತ್ತಿತರ ಅಧಿಕಾರಿ,ನೌಕರರು,ಸಮುದಾಯದ ಹಾಗೂ ಸಂಘದ ಪ್ರಮುಖರು ಇದ್ದರು.
+ There are no comments
Add yours