ಬಿಜೆಪಿ ರಾಜ್ಯ ನೂತನ ಪದಾಧಿಕಾರಿಗಳ ಪಟ್ಟಿ ರಿಲೀಸ್

 

ಬೆಂಗಳೂರು:ಬಿಜೆಪಿ ಸಂಘಟನೆಗೆ ದುಡಿದು ದಣಿದು  ವಿಶ್ರಾಂತಿ ಬಯಸಿದಾಗ  ಹೊಸ ಮುಖಗಳಿಗೆ ಅವಕಾಶ ನೀಡುವ ಸೂತ್ರದಲ್ಲಿದಡಿಯಲ್ಲಿ  ಬಿಜೆಪಿ  (BJP) ರಾಜ್ಯ ನೂತನ ಪದಾಧಿಕಾರಿಗಳ ಪಟ್ಟಿ ಶನಿವಾರ ರಿಲೀಸ್ ಆಗಿದೆ, ಹೊಸ ತಂಡವು ಯುವ ಉತ್ಸಾಹಿಗಳು ಮತ್ತು ಅನುಭವದ ಜೊತೆ ಸೇರಿ ಪಕ್ಕ‌ ಎಲ್ಲಾರನ್ನೂ ಸೇರಿಸುವ ಪ್ಲಾನ್ ಬಿಜೆಪಿ ಹೈಕಮಾಂಡ್ ಎಣೆದಿದೆ.

ಮುಂದಿನ ಲೋಕಸಭೆ ಚುನಾವಣೆಗೆ ನಿಗದಿತ ಗುರಿ ಸಾಧನೆ, ಜೆಡಿಎಸ್ ಜತೆಗೆ ಮೈತ್ರಿ ಧರ್ಮ ಪಾಲನೆಗಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮಗೆ ಕ್ರೀಯಾಶೀಲ ತಂಡವನ್ನು  ಕಟ್ಟಿಕೊಂಡಿದ್ದಾರೆ. ಹಾಲಿ-ಮಾಜಿ ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಟಿಕೆಟ್ ವಂಚಿತರಿಗೂ ಮಣೆ ಹಾಕಿದ್ದು  ಪಕ್ಷ ಸಂಘಟನೆಗೆ ದುಡಿದವರನ್ನು ಸೂಕ್ತ ಸ್ಥಾನಮಾನ ಅರಸಿಕೊಂಡು ಬರುತ್ತವೆ ಎಂಬ ಸಂದೇಶವನ್ನು ವರಿಷ್ಠರನ್ನು  ಪಾಸ್ ಮಾಡಿದ್ದಾರೆ. ಹೊಸ ಮುಖಗಳು, ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗಿದೆ. ಸಂಭಾವ್ಯ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ನೇಮಕದಲ್ಲಿ ಹಿರಿಯರಿಗೆ ಮಣೆ, ಮೋರ್ಚಾಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸುವ ವೇಳೆ ಸಂಭಾವ್ಯ ಅಪಸ್ವರ ಹೋಗಲಾಡಿಸುವ ಪ್ರಯತ್ನಗಳಾಗುವ ನಿರೀಕ್ಷೆಯಿದೆ.

ನೂತನ ಪದಾಧಿಕಾರಿಗಳು

ಉಪಾಧ್ಯಕ್ಷರು

*ಮುರುಗೇಶ್ ನಿರಾಣಿ ಬಾಗಲಕೋಟೆ

* ಬೈರತಿ ಬಸವರಾಜ ಬೆಂಗಳೂರು

* ರಾಜೂಗೌಡ ನಾಯಕ್ ಯಾದಗಿರಿ

* ಎನ್. ಮಹೇಶ್ ಚಾಮರಾಜನಗರ

* ಅನಿಲ್ ಬೆನಕೆ ಬೆಳಗಾವಿ

* ಹರತಾಳು ಹಾಲಪ್ಪ ಶಿವಮೊಗ್ಗ

* ರೂಪಾಲಿ ನಾಯಕ್ ಉತ್ತರಕನ್ನಡ

* ಡಾ.ಬಸವರಾಜ ಕೇಲಗಾರ ಹಾವೇರಿ

* ಮಾಳವಿಕಾ ಅವಿನಾಶ ಬೆಂಗಳೂರು

* ಎಂ.ರಾಜೇಂದ್ರ ಮೈಸೂರು.

ಇದನ್ನೂ ಓದಿ: ಒಂದೇ ದಿನ 104 ಜನಕ್ಕೆ ಕೋವಿಡ್ ಪಾಸಿಟಿವ್

ಪ್ರಧಾನ ಕಾರ್ಯದರ್ಶಿಗಳು

* ವಿ. ಸುನೀಲ್​ಕುಮಾರ್ ಉಡುಪಿ

* ಪಿ.ರಾಜೀವ್ ಬೆಳಗಾವಿ

* ಎನ್.ಎಸ್.ನಂದೀಶರೆಡ್ಡಿ ಬೆಂಗಳೂರು

* ಜೆ.ಪ್ರೀತಮ್ ಗೌಡ ಹಾಸನ.

ಕಾರ್ಯದರ್ಶಿಗಳು

* ಶೈಲೇಂದ್ರ ಬೆಲ್ದಾಳೆ ಬೀದರ್

* ಡಿ.ಎಸ್. ಅರುಣ್ ಶಿವಮೊಗ್ಗ

* ಬಸವರಾಜ ಮತ್ತೀಮೋಡ್ ಕಲಬುರ್ಗಿ

* ಸಿ. ಮುನಿರಾಜು ಚಿಕ್ಕಬಳ್ಳಾಪುರ

* ವಿನಯ್ ಬಿದರೆ ತುಮಕೂರು

* ಕ್ಯಾಪ್ಟನ್ ರಾಜೇಶ್ ಚೌಟ ದಕ್ಷಿಣಕನ್ನಡ

* ಶರಣು ತಳ್ಳಿಕೇರಿ ಕೊಪ್ಪಳ

* ಲಲಿತಾ ಅನಾಪುರ ಯಾದಗಿರಿ

* ಡಾ.ಲಕ್ಷ್ಮೀ ಅಶ್ವಿನ್ ಗೌಡ ಮಂಡ್ಯ

* ಅಂಬಿಕಾ ಹುಲಿನಾಯ್ಕರ್ ತುಮಕೂರು.

* ಖಜಾಂಚಿ- ಸುಬ್ಬನರಸಿಂಹ ಬೆಂಗಳೂರು

ಮೋರ್ಚಾಗಳ ರಾಜ್ಯ ಅಧ್ಯಕ್ಷರು

* ಮಹಿಳಾ ಮೋರ್ಚಾ- ಸಿ.ಮಂಜುಳಾ ಶಿವಮೊಗ್ಗ

* ಯುವ ಮೋರ್ಚಾ- ಧೀರಜ್ ಮುನಿರಾಜು ಬೆಂಗಳೂರು ಗ್ರಾಮಾಂತರ

* ಎಸ್​ಟಿ ಮೋರ್ಚಾ- ಬಂಗಾರು ಹನುಮಂತು ಬಳ್ಳಾರಿ

* ಎಸ್​ಸಿ ಮೋರ್ಚಾ- ಎಸ್. ಮಂಜುನಾಥ್ (ಸಿಮೆಂಟ್ ಮಂಜು) ಹಾಸನ

* ಹಿಂದುಳಿದ ವರ್ಗಗಳ ಮೋರ್ಚಾ- ರಘು ಕೌಟಿಲ್ಯ ಮೈಸೂರು

* ರೈತ ಮೋರ್ಚಾ- ಎ.ಎಸ್. ಪಾಟೀಲ್ ನಡಹಳ್ಳಿ ವಿಜಯಪುರ

* ಅಲ್ಪಸಂಖ್ಯಾತ ಮೋರ್ಚಾ- ಅನಿಲ್ ಥಾಮಸ್.

ಗುರುತರ ಹೊಣೆಗಾರಿಕೆ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಸ್ಥಾನಗಳ ಹಂಚಿಕೆ ಮತ್ತು ಕ್ಷೇತ್ರಗಳ ಹೊಂದಾಣಿಕೆ ನಿರ್ಧಾರವನ್ನು ವರಿಷ್ಠರು ತಮ್ಮ ವಿವೇಚನೆಗೆ ಕಾದಿಟ್ಟು ಕೊಂಡಿದ್ದಾರೆ. ಆ ಮೂಲಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಹೆಗಲಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಗುರುತಲ ರಿಯನ್ನು ವರಿಷ್ಠರು ಒಪ್ಪಿಸಿರುವುದು ನಿಚ್ಚಳವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

[t4b-ticker]

You May Also Like

More From Author

+ There are no comments

Add yours