ಇಂಟೆಲಿಜೆನ್ಸ್‌ ಬ್ಯರೋ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಇಂಟಲಿಜನ್ಸಿ  ಬ್ಯುರೊದಲ್ಲಿ (Intelligence Bureau)ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಯ್ಕೆಗಾಗಿ  ಅಧಿಸೂಚನೆ ಪ್ರಕಟವಾಗಿದೆ. 226 ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್ (ಎಸಿಐಒ) ಗ್ರೇಡ್‌ 2 / ಟೆಕ್‌ ಎಕ್ಸಾಮ್‌ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ಲಿಂಕ್ ನೀಡಲಾಗಿದ್ದು  ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಹದು.

ಹುದ್ದೆಗಳ ವಿವರ

ಕಂಪ್ಯೂಟರ್ ಸೈನ್ಸ್‌ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ : 79

ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯುನಿಕೇಷನ್ : 147

ವಿದ್ಯಾರ್ಹತೆ:

ಬಿಇ / ಬಿ.ಟೆಕ್ / ಪಿಜಿ ಪದವಿಗಳನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ

ಸಾಮಾನ್ಯ ಕೆಟಗರಿ, ಒಬಿಸಿ ಕೆಟಗರಿ ಅಭ್ಯರ್ಥಿಗಳಿಗೆ ರೂ.200.

ಇತರೆ ಕೆಟಗರಿ ಅಭ್ಯರ್ಥಿಗಳಿಗೆ ರೂ.100.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬೇಕು.

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 2021, 2022, 2023 ರ ಗೇಟ್‌ ಸ್ಕೋರ್ ಮತ್ತು ಸಂದರ್ಶನದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: PHD ಪ್ರಾರಂಭಿಸಿದವರಿಗೆ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ

ವೇತನ

ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್ (ಎಸಿಐಒ) ಗ್ರೇಡ್‌ 2 / ಟೆಕ್‌ ಎಕ್ಸಾಮ್‌ ಹುದ್ದೆಗೆ ಮಾಸಿಕ 44,900- 1,42,400.ರೂ. ವೇತನ ನಿಗದಿ ಮಾಡಲಾಗಿದೆ

ಸೂಚನೆ : ಆನ್‌ಲೈನ್‌ ಅರ್ಜಿಗೆ ಲಿಂಕ್‌ ಅನ್ನು ಡಿಸೆಂಬರ್ 23, 2023 ರಂದು ಬಿಡುಗಡೆ ಮಾಡಲಾಗುತ್ತದೆ.

ಹುದ್ದೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ mha.gov.in ಗೆ ಭೇಟಿ ನೀಡಬಹುದು.

[t4b-ticker]

You May Also Like

More From Author

+ There are no comments

Add yours