ಚಿತ್ರದುರ್ಗ ಡಿಎಆರ್ ಮುಖ್ಯಪೇದೆ ಎಂ.ಎನ್.ಜಗದೀಶ್ ಕಾಣೆ

 

ಚಿತ್ರದುರ್ಗ:ಚಿತ್ರದುರ್ಗ ಡಿಎಆರ್ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎನ್.ಜಗದೀಶ್ (48) ಎಂಬ ವ್ಯಕ್ತಿಯು 2024ರ ಜನವರಿ 4ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ ಇಂತಿದೆ. ಎಂ.ಎನ್.ಜಗದೀಶ್, 48 ವರ್ಷ, ಸುಮಾರು 5 3/4 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ದೃಢವಾದ ಮೈಕಟ್ಟು ಹೊಂದಿರುತ್ತಾರೆ. ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಹಸಿರು ಬಣ್ಣದ ಟಿ.ಶರ್ಟ್,ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ.

ಇದನ್ನೂ ಓದಿ: ಜನವರಿ 23ರಂದು ವಿದ್ಯುತ್ ವ್ಯತ್ಯಯ

ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಕುರಿತು ಮಾಹಿತಿ ತಿಳಿದುಬಂದಲ್ಲಿ  ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆ ಠಾಣಾಧಿಕಾರಿಗಳು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours