ಇಂದು ವಿದ್ಯುತ್ ವ್ಯತ್ಯಯ

 

ಚಿತ್ರದುರ್ಗ:
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗ ವಿ.ವಿ. ಕೇಂದ್ರದಲ್ಲಿ  ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಇದೇ ಜನವರಿ 23ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಅಪಘಾತ:ಕೃಷಿ ಇಲಾಖೆ ಅಧಿಕಾರಿ ಸ್ಥಳದಲೇ ಸಾವು

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಕಾಪರ್ ಮೇನ್ಸ್, ಕ್ಯಾದಿಗೆರೆ, ಜೆ.ಎನ್.ಕೋಟೆ, ಕಾಸವರಟ್ಟಿ, ಪಲ್ಲವಗೆರೆ, ಇಂಡಸ್ಟ್ರಿಯಲ್ ಏರಿಯಾ, ಕೋಟೆ, ಜಿಲ್ಲಾ ಪಂಚಾಯತ್, ಸಜ್ಜನಕೆರೆ, ದಂಡಿನಕುರುಬರಹಟ್ಟಿ, ಕೆನ್ನೆಡಲು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ವರ್ಗಾವಣೆ

[t4b-ticker]

You May Also Like

More From Author

+ There are no comments

Add yours