ದೇಶದಲ್ಲಿ ದಾಖಲೆ ಬರೆದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ : ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

 

ಚಿತ್ರದುರ್ಗ:ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯರೇ ಸಾಟಿ ಎಂಬುದನ್ನು ತಮ್ಮ 15ನೇ ಬಜೆಟ್‌ನಲ್ಲಿ ಜನಪರ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ಮಾಜಿ ಸಂಸದ ಶ್ರೀ ಬಿ.ಎನ್.ಚಂದ್ರಪ್ಪ ಹೇಳಿದ್ದಾರೆ.

ಮನಸ್ಸಿದ್ದರೆ, ಜೀವಪರ ಕಾಳಜಿ ಇದ್ದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಜನಪರ ಬಜೆಟ್ ಮಂಡಿಸಬಹುದು ಎಂಬುದಕ್ಕೆ ಈ ಬಜೆಟ್ ಉತ್ತಮ ಉದಾಹರಣೆ ಆಗಿದೆ ಎಂದಿದ್ದಾರೆ.

ರಾಜ್ಯ, ದೇಶದಲ್ಲಿಯೇ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಖ್ಯಾತಿ ಗಳಿಸಿರುವ ಸಿದ್ದರಾಮಯ್ಯ ಅವರ ಈ ಬಾರಿಯ ಬಜೆಟ್‌ನತ್ತ ಇಡೀ ದೇಶವೇ ಚಿತ್ತ ಹರಿಸಿತ್ತು. ಕಾರಣ ಅಂದಾಜು 60 ಸಾವಿರ ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟು, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಹಣ ಹೊಂದಿಸುತ್ತಾರೆ ಎಂಬ ಕುತೂಹಲ ಆರ್ಥಿಕ ತಜ್ಞರಲ್ಲಿ ಇತ್ತು. ಆದರೆ, ಆರ್ಥಿಕ ಚಿಂತಕರು, ವಿಪಕ್ಷ ನಾಯಕರೇ ನಿಬ್ಬೇರಾಗಾಗುವ ರೀತಿ ಉದ್ಯೋಗ, ಆರೋಗ್ಯ, ಶಿಕ್ಷಣ, ಕೃಷಿ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ ತಿಳಿಸಿದ್ದಾರೆ.

ಜೊತೆಗೆ ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಮೇತ ಬಜೆಟ್‌ನಲ್ಲಿ ಲಿಖಿತವಾಗಿ ಹೇಳುವ ಮೂಲಕ ಸುಳ್ಳು ಮಾತುಗಳಿಗೆ ಸಂಪೂರ್ಣ ಕಡಿವಾಣ ಹಾಕಿ, ರಾಜ್ಯದ ಜನರ ಪರ ಧ್ವನಿಯೆತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಜನರ ದಶಕದ ಕನಸು ಮೆಡಿಕಲ್ ಕಾಲೇಜ್‌ಗೆ ಸ್ಪಷ್ಟ ರೂಪ ನೀಡಲು ಬರೋಬ್ಬರಿ 500 ಕೋಟಿ ರೂ. ಮೀಸಲಿಟ್ಟಿರುವುದು ನಿಜಕ್ಕೂ ಪ್ರತಿಪಕ್ಷದವರು ಸ್ವಾಗತಿಸಲೇಬೇಕಾದ ವಿಷಯ. ಜೊತೆಗೆ ತೋಟಗಾರಿ, ರೇಷ್ಟೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ ಅಭಿವೃದ್ಧಿಗೆ, ಅಡಕೆ ಬೆಳೆ ರೋಗ ತಡೆಗೆ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಅಧಿಕೃತ ಒಪ್ಪಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ 5,300 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡದಿದ್ದರೂ ರಾಜ್ಯ ಸರ್ಕಾರ ಈ ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ್ದು, 75 ಸಾವಿರ ಎಕರೆ ಪ್ರದೇಶವನ್ನು ನೀರಾವರಿಯನ್ನಾಗಿಸಲು ಕಾಳಜಿ ತೋರಿರುವುದು ಬಯಲುಸೀಮೆ ಜನರ ಸಂತಸಕ್ಕೆ ಕಾರಣವಾಗಿದೆ. ಪಾವಡಗ ಸೋಲಾರ್ ಪಾರ್ಕ್ ಮಾದರಿ ರಾಜ್ಯದ ವಿವಿಧೆಡೆ ವಿಸ್ತರಣೆಗೆ ಮುಂದಾಗಿರುವುದು ಚಿತ್ರದುರ್ಗ ಕ್ಷೇತ್ರಕ್ಕೆ ಹೆಮ್ಮೆ ವಿಷಯ ಎಂದಿದ್ದಾರೆ.

ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ ಕೃಷಿಭಾಗ್ಯ ಯೋಜನೆ ಮರು ಜಾರಿ, ಜಿಲ್ಲಾ ವ್ಯಾಪ್ತಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಡೇ-ಕೇರ್ ಕಿಮೋಥೆರಫಿ ಕೇಂದ್ರ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 24 ಗಂಟೆ ಆರೋಗ್ಯ ಸೇವೆ, ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಪ್ರಗತಿಗೆ ಆದ್ಯತೆ, ಅಂಗನವಾಡಿ ಕೇಂದ್ರಗಳ ಬಲವರ್ಧನೆ ಮತ್ತು ಸಹಾಯಕರಿಗೆ ಗ್ರಾಚ್ಯುಟಿ ಸೌಲಭ್ಯ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವರ್ಗದ ಬಡ ಜನರ ಅಭಿವೃದ್ಧಿಗೆ ವಿಶೇಷ ಗಮನಹರಿಸುವುದು ಸ್ವಾಗತರ್ಹ ಎಂದು ಹೇಳಿದ್ದಾರೆ.

ಹೀಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗಿದೆ ಎಂಬ ಆರೋಪಗಳಿಗೆ ಬಜೆಟ್‌ನಲ್ಲಿ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡಿದ ಬಜೆಟ್: ಟಿ.ರಘುಮೂರ್ತಿ

77ನೇ ವರ್ಷದ ಇಳಿ ವಯಸ್ಸಿನಲ್ಲೂ ಶತತ 3 ಗಂಟೆ 15 ನಿಮಿಷಗಳ ಕಾಲ ಸಣ್ಣ ವಿಶ್ರಾಂತಿ ತೆಗೆದುಕೊಳ್ಳದೇ ಅತ್ಯುತ್ಸಹದಿಂದ ಬಜೆಟ್ ಮಂಡಿಸಿದ ರೀತಿ ಅಚ್ಚರಿ ಜೊತೆಗೆ ಅವರ ಕುರಿತು ಜನರಲ್ಲಿದ್ದ ಅಭಿಮಾನ ಇಮ್ಮಡಿಗೊಳಿಸಿದೆ ಎಂದು ಬಿ.ಎನ್.ಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಬಿ.ಎನ್.ಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

[t4b-ticker]

You May Also Like

More From Author

+ There are no comments

Add yours