ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮಕ್ಕಳು ಬೆಳೆಸಿಕೊಳ್ಳಬೇಕು: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ:ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ  ಕ್ರೀಡಾ ಮನೋಭಾವ ಬೆಳೆಸುವ ಮೂಲಕ‌ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ತಾಲೂಕಿನ  ತಳಕು ಗ್ರಾಮದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ  ಮಾತನಾಡಿದರು.

ಯುವಕರಿಗೆ  ಕ್ರೀಡೆಯು  ದೈಹಿಕ ಮತ್ತು  ಮಾನಸಿಕ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಪ್ರಸ್ತುತ  ದಿನಗಳಲ್ಲಿ ಹದಿಹರೆಯದವರಿಂದ ಹಿಡಿದು  ವೃದ್ಧರವರೆಗೂ ಕೂಡ ಜೀವನದ ಅವಿಭಾಜ್ಯ ಅಂಗವಾಗಿದೆ.  ವಿದ್ಯಾರ್ಥಿಗಳು ಸೋಲು ಗೆಲುವಿನ‌ ಬಗ್ಗೆ ತಲೆಕೆಡಿಸಿಕೊಳ್ಳದೆ   ಗುರಿ ಮತ್ತು ಪರಿಶ್ರಮ ಕಡೆಗೆ ಗಮನ ಹರಿಸಿದರೆ ಗೆಲುವು ಹುಡುಕಿಕೊಂಡ ಬರುತ್ತದೆ.

ಮೈಕೆಲ್ ಪೇಲ್ಸ್  ಎಂಬ ಕ್ರೀಡಾ ಪಟು  ಎರಡು ಕಾಲು ಇಲ್ಲದಿದ್ದರೂ ವಿಶ್ವದ ರಿಲೇ ಓಟದಲ್ಲಿ ಫೈನಲ್ ಗೆ ಬಂದಿದ್ದು ಸೇನಾ ನೇಹ್ವಾಲ್ ಆರಂಭದ ದಿನಗಳಲ್ಲಿ ಇವರ ವೈಫಲ್ಯದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದಾಗಿಯೂ ಕೂಡ ಜಗತ್ತಿನ ನಂಬರ್ ಒನ್ ಕ್ರೀಡಾ ತಾರೆಯಾಗಿದ್ದಾರೆ.  ಆತ್ಮವಿಶ್ವಾಸದಿಂದ  ಸೋಲುಗಳಿಗೆ ಮುಖ ಮಾಡದೆ ಗೆಲುವಿನ ನಗೆ ಬೀರಬೇಕು ಎಂದರು.

ಇಂದಿನ ಕ್ರೀಡಾಕೂಟ ವಿದ್ಯಾರ್ಥಿಗಳ ಭವಿಷ್ಯದ ಬದಲಾವಣೆಗೆ ದಿಕ್ಸೂಚಿ ಆಗಲಿ ಎಂದು ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್  ಮಾತನಾಡಿ  ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಪೈಪೋಟಿ ಹಾಗೂ ನಾಯಕತ್ವದ ಗುಣ ಬೆಳೆಯುತ್ತದೆ ಪ್ರತಿಭೆಗಳನ್ನು ಓ ರಿಹಚ್ಚಲು ಈ ವೇದಿಕೆ ಸಹಕಾರಿಯಾಗಲಿದೆ ಶಿಕ್ಷಕರಗಳು ಜವಾಬ್ದಾರಿಯಿಂದ ಮಕ್ಕಳಿಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಕಾನಂ ಉಪಾಧ್ಯಕ್ಷ ದ್ರಾಕ್ಷಾಯಿನಮ್ಮ ಸದಸ್ಯರಾದಂತಹ ರವಿಕುಮಾರ್ ಕೃಷ್ಣಮೂರ್ತಿ ಶಾಂತ ಕುಮಾರ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours