ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸ್ವರ್ಧೆಗೆ ಕೊಟ್ಟರಾ ಗ್ರಿನ್ ಸಿಗ್ನಲ್?

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ  ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಆಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರು  ಸ್ಪರ್ಧೆ ಮಾಡಲ್ಲ ಎಂಬ ಮಾತು ಎಲ್ಲಾರಿಗೂ ಸ್ವತಃ ಬಸವರಾಜನ್ ತಿಳಿಸಿ ತನ್ನ ಪತ್ನಿ  ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ  ಸೌಭಾಗ್ಯ ಬಸವರಾಜನ್  ಸ್ವರ್ಧೆ ಖಚಿತ ಎಂಬ ಸಂದೇಶ  ರಾವನಿಸಿದ್ದರು.
ಕೆಲವೇ ತಿಂಗಳ ಹಿಂದೆ ಮುರುಘಾ ಮಠದ ಆಡಳಿತಧಿಕಾರಿಯಾಗಿ ಎಸ್.ಕೆ.ಬಸವರಾಜನ್  ಅಧಿಕಾರ ವಹಿಸಿಕೊಂಡಿದ್ದರು.ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ  ಸ್ವರ್ಧೆಯಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತೆ ಸ್ವರ್ಧೆ ಮಾಡುವ ಹಿಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಮಾಜಿ ಜಿಲ್ಲಾ ಪಂಚಾಯತ ‌ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮತ್ತು  ಎಸ್.ಕೆ.ಬಸವರಾಜನ್  ಇಬ್ಬರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಜನರಲ್ಲಿ ಯಾರು ಸ್ವರ್ಧೆ ಮಾಡುತ್ತಾರೆ ಎಂಬ ಗೊಂದಲದಲ್ಲಿ ಬಸವರಾಜನ್ ಬೆಂಬಲಿಗರು ಇದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಆಹ್ವಾನ: ಜೆಡಿಎಸ್ ಪಕ್ಷದ ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ‌ ಜೊತೆ ಒಂದು ಸುತ್ತಿನ ಮಾತುಕತೆಯನ್ನು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಪತ್ನಿ ಸೌಭಾಗ್ಯ ಸಹ ಮುಗಿಸಿದ್ದು  ಟಿಕೆಟ್ ಖಾತ್ರಿ ಸಹ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಜೆಡಿಎಸ್ ತೊರೆದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಈಗಲೂ ಸಹ  ಕಾಂಗ್ರೆಸ್ ಪಕ್ಷದಿಂದ ಸ್ವರ್ಧೆಗೆ ಬಸವರಾಜನ್ ಒಲವು ತೋರಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ  ಬಸವರಾಜನ್ ಮತ್ತು ಡಿಕೆಶಿ , ಸಿದ್ದರಾಮಯ್ಯ ಜೊತೆ ಒಂದು ಸುತ್ತಿನ ಮಾತುಕತೆ ಸಹ ಮುಗಿದಿದ್ದು ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ  ಎಸ್ಕೆಬಿ ಫ್ಯಾಮಿಲಿ ಇದೆ ಎಂಬ ಮಾತು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಮುನ್ನೆಲೆಗೆ ಬಂದಿದೆ. ಮತ್ತೆ ಮಠದಿಂದ ಹೊರ ಬಂದು ಸ್ಪರ್ಧೆ ಬಯಸುತ್ತಾರಾ  ಅಥವಾ ಪತ್ನಿಗೆ ಬೆಂಬಲ ನೀಡಿ ಮಠದಲ್ಲಿ  ಮುಂದುವರೆಯುತ್ತಾರೆ  ಎಂಬುದು ಅಧಿಕೃತವಾಗಿ ಸ್ವರ್ಧೆ ನಂತರ ಖಾತ್ರಿಯಾಗಲಿದ್ದು ಕೋಟೆ ನಾಡಿನ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
[t4b-ticker]

You May Also Like

More From Author

+ There are no comments

Add yours