ಗ್ರಾಮೀಣ ಭಾಗದಲ್ಲಿ ಸಂಘ, ಸಂಸ್ಥೆಗಳು ಜನರ ಹಿತಕಾಯುವಲ್ಲಿ ಸಫಲ:ದೇವರಾಜರೆಡ್ಡಿ

 

ಚಳ್ಳಕೆರೆ-25 ಗ್ರಾಮೀಣ ಭಾಗದಲ್ಲಿ ಸಂಘ, ಸಂಸ್ಥೆಗಳು ಜನರ ಹಿತಕಾಯುವಲ್ಲಿ ಸಫಲರಾಗಬೇಕು ಎಂದು ಬಿಜೆಪಿ ಮುಖಂಡ, ಗ್ರಾಮ ಹಿರಿಯ ದೇವರಾಜರೆಡ್ಡಿ ಹೇಳಿದರು.

ಅವರು ಗ್ರಾಮದಲ್ಲಿ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ನ ಮೊದಲನೇ ವರ್ಷದ 2021-22 ನೇ ಸಾಲಿನ ವಾರ್ಷಿಕ ಸಭೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರಾರಂಭ ಮಾಡಲಾಯಿತು.
ಯುವಜಾಗೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಜಿ.ಎಸ್.ಹರೀಶ್ ಮಾತನಾಡಿ, ರಾಮಜೋಗಿಹಳ್ಳಿ ಯ ಯುವಕರು ಗ್ರಾಮೀಣ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ,ನೈತಿಕ ಧಾರ್ಮಿಕ ಆಧ್ಯಾತ್ಮಿಕ ಮಟ್ಟವನ್ನು ಉತ್ತಮ ಗೊಳಿಸುವುದು ಹಾಗೂ ರಾಷ್ಟ್ರ ಜಾಗೃತಿಯತ್ತ ಸೆಳೆಯಲು ಗ್ರಾಮೀಣ ಯುವಕರಿಗೆ ಸ್ವಾವಲಂಬನೆಯ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ 2021-22 ನೇ ಸಾಲಿನ ಕೆಲಸ-ಕಾರ್ಯಗಳ ವಾರ್ಷಿಕ ವರದಿಯನ್ನು ತಿಳಿಸಿ, ಈ ಸಭೆಯಲ್ಲಿ ಹಿರಿಯರ ಸಲಹೆ ಸೂಚನೆಗಳನ್ನು ಪಡೆದು ಟ್ರಸ್ಟ್ ಕೆಲಸ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಟ್ರಸ್ಟ್ ನ ಸಹ ಕಾರ್ಯದರ್ಶಿಯಾದ ರಂಗಸ್ವಾಮಿ, 2021-22ನೇ ಸಾಲಿನ ಆಯಾಮಗಳ ಬಗ್ಗೆ ಓದಿದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವರೆಡ್ಡಿ ಅವರು ಮಾತನಾಡಿ ಕೆಲಸ-ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆ ಗ್ರಾಮದಲ್ಲಿ ಸಾಮಾಜಿಕ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮದ್ಯದಂಗಡಿ ಸ್ಥಳಾಂತರ ಆಗಬೇಕು. ಗ್ರಾಮದ ಹಿರಿಯರಾದ ಭೀಮಾ ರೆಡ್ಡಿ ಅವರು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ಈ ಸಭೆಯಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಮಾತನಾಡಿ, ಯುವಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಮ್ಮ ಶಾಲೆಗೆ ಉತ್ತಮ ಸಹಕಾರದೊಂದಿಗೆ ಕೆಲಸಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ ಆದ್ದರಿಂದ ಇದೇ ರೀತಿ ಸಹಕಾರ ಇರಲಿ ಎಂದು ತಿಳಿಸಿದರು.
ಶಿಕ್ಷಕ ಪರಮೇಶ್ವರಪ್ಪ ಕುದುರಿ ಮಾತನಾಡಿ, ಇಂದಿನ ಮಕ್ಕಳು ಓದಿನ ಕಡೆಗೆ ಗಮನಕ್ಕಿಂತ ಮೊಬೈಲ್ ಗಿಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ತಿಂಗಳಿಗೊಮ್ಮೆ ಪ್ರವಚನ ಕಾರ್ಯಗಳು ನಡೆಸಿ ಕೊಡುವುದರ ಮೂಲಕ ಶಿಕ್ಷಣದ ಅರಿವು ಮೂಡಿಸಬೇಕೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಯಸಿದ್ದ ನಿವೃತ್ತ ಶಿಕ್ಷಕ ಜಿ.ಎಚ್.ಪಾಪಣ್ಣ, ಗ್ರಾಮದಲ್ಲಿರುವ ಮಹಿಳಾ ಸಂಘಗಳ ಸಹಕಾರದೊಂದಿಗೆ ಉತ್ತಮ ಸಾಮಾಜಿಕ ಕೆಲಸಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.
ಟ್ರಸ್ಟ್ ನ ಸಲಹೆಗಾರರಾದ ಎಂ.ಬಿ. ಗೋವಿಂದರೆಡ್ಡಿ,ಶಿವಕುಮಾರ್ ಟಿ,ಟ್ರಸ್ಟ್ ನ ಉಪಾಧ್ಯಕ್ಷರಾದ ಭರತೇಶ್ ರೆಡ್ಡಿ, ಟ್ರಸ್ಟಿಗಳಾದ ಬಸವರಾಜ್, ಓಬಳೇಶ್, ಎಚ್ ಈರಣ್ಣ, ಗಿರೀಶ್, ರಮೇಶ್, ಹರೀಶ್ ಬಾಬು ಹಾಗೂ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಭೀಮರೆಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀನಿವಾಸ್ ಬಿ ಜಿ, ಉಪಾಧ್ಯಕ್ಷರಾದ ಅರುಣಾ ಬಿಟಿ, ಗ್ರಾಮಸ್ಥರಾದ ಸಂಜೀವ್ ರೆಡ್ಡಿ, ಭೀಮರೆಡ್ಡಿ ವಸಂತಪ್ಪ, ಹನುಮಂತಪ್ಪ, ಜಯರಾಮರೆಡ್ಡಿ, ಪ್ರಭಾಕರ್ ರೆಡ್ಡಿ, ಶಿವಣ್ಣರೆಡ್ಡಿ, ರವಿಕುಮಾರ್, ಶ್ರೀನಿವಾಸ್ ವಿರೇಶ್ ಇತರರು ಇದ್ದರು.

[t4b-ticker]

You May Also Like

More From Author

+ There are no comments

Add yours