ಬಿಜೆಪಿ ಮುಖಂಡ ಮಾಜಿ ಸಿಎಂ SMK ರಾಜಕೀಯಕ್ಕೆ ಗುಡ್ ಬೈ

 

ಬೆಂಗಳೂರು:ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಮಾಜಿ ಕಾಂಗ್ರೆಸಿಗ, ಹಾಲಿ ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ (SM Krishna) ಅವರು ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಶುಭಾಶಯ ಸಂದೇಶವನ್ನು ನೀಡುವ ಜತೆಗೆ ತಮ್ಮ ರಾಜಕೀಯ ನಿವೃತ್ತಿಯ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ನನಗೀಗ ೯೦ ವರ್ಷ. ವಯಸ್ಸಿನ ಬಗ್ಗೆ ನಮಗೆ ಅರಿವು ಇರಬೇಕು. 90ರಲ್ಲಿ‌ 50 ವರ್ಷದ ರೀತಿ ನಟನೆ ಮಾಡಲು ಆಗಲ್ಲ, ಅದಕ್ಕಾಗಿ ಕ್ರಮೇಣವಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಎಸ್‌ಎಂ ಕೃಷ್ಣ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ 6500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ:ಸಿಇಓ ಎಂ.ಎಸ್.ದಿವಾಕರ್

ಮೇಲೆ ಬಿದ್ದು ಹೋಗಲ್ಲ, ಕೇಳಿದರೆ ಸಲಹೆ ಎಂದ ಎಸ್ಸೆಂಕೆ
ಹಾಗಂತ ಸಂಪೂರ್ಣವಾಗಿ ಸನ್ಯಾಸಿಯಾಗುತ್ತೇನೆ ಎಂದಲ್ಲ, ಪಕ್ಷ ಇಲ್ಲವೇ ನಾಯಕರು ಸಲಹೆ ಕೇಳಿದರೆ ಕೊಡುವುದಾಗಿಯೂ ಅವರು ತಿಳಿಸಿದ್ದಾರೆ. ʻʻಮೀಸಲಾತಿ ವಿಚಾರವಾಗಿ ಕೇಳಿದ್ರೆ ಸಲಹೆ ಕೊಡ್ತೇನೆ. ನಾನು ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಬಂದು ಸಲಹೆ ಕೇಳಿದ್ರೆ ಕೊಡ್ತೇನೆʼʼ ಎಂದರು ಎಸ್ಸೆಂ ಕೃಷ್ಣ.

ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪದ ವಿಚಾರವಾಗಿ ಪ್ರಶ್ನಿಸಿದಾಗ ʻʻನಾನೇ ರಿಟೈಡ್ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನೆ ಬರುವುದಿಲ್ಲ. ನಾನೇ ನಿವೃತ್ತಿ ಪಡೆಯುತ್ತಿದ್ದೇನೆʼʼ ಎಂದರು. ರಾಜಕೀಯದಲ್ಲಿ ಯಾರೂ ಪೆನ್ಶನ್‌ ಕೊಡುವುದಿಲ್ಲ. ಹೀಗಾಗಿ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ ಎಂದರು ಮಾಜಿ ಸಿಎಂ.

[t4b-ticker]

You May Also Like

More From Author

+ There are no comments

Add yours