ಕುರಿ-ಮೇಕೆ ಘಟಕಗಳ ವಿತರಿಸಿದ ಸಚಿವ ಬಿ.ಶ್ರೀರಾಮುಲು

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಫೆ.11:Molakalmuru
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ರಾಮುಲು ಮೊಳಕಾಲ್ಮೂರು ರಾಯಪುರ ಗೇಟ್ ಬಳಿ  ಶನಿವಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ, 2020-2021ನೇ ಸಾಲಿನ ಕೇಂದ್ರ ಪುರಸ್ಕøತ ಯೋಜನೆಯಡಿ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕುರಿ, ಮೇಕೆ ಘಟಕಗಳನ್ನು  ವಿತರಿಸಿದರು.
ಯೋಜನೆಯಡಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ತಳಕು ನಾಯಕನಹಟ್ಟಿ ಹೋಬಳಿಯ 55 ಹಾಗೂ ಮೊಳಕಾಲ್ಮೂರು ತಾಲೂಕಿನ ಕಸಬಾ ಮತ್ತು ದೇವಸಮುದ್ರ ಹೋಬಳಿ ವ್ಯಾಪ್ತಿಯ 80 ಫಲಾನುಭವಿಗಳನ್ನು ಕುರಿ/ಮೇಕೆ ಘಟಕಗಳ ವಿತರಣೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಘಟಕದಲ್ಲಿ 5 ಕುರಿ ಅಥವಾ ಮೇಕೆಗಳು ಇದ್ದು, ಇದರಲ್ಲಿ 4 ಹೆಣ್ಣು ಮತ್ತು 1 ಗಂಡು ಇರಲಿದೆ. ಪ್ರತಿ ಘಟಕದ ಮೌಲ್ಯ ರೂ.30,800/. ಇದರ ಜೊತೆಗೆ ಫಲಾನುಭವಿಗೆ ಸಾಗಣಿಕೆ ವೆಚ್ಚ ರೂ.2500 ಹಾಗೂ ಆಹಾರ ಮತ್ತು ಔಷಧಿಯ ವೆಚ್ಚ ರೂ.2000 ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ರಾಜ್ಯದ ಮೊದಲ ರಿಮೋಟ್ ಕಂಟ್ರೋಲ್ ರಥ, ಭಕ್ತ ಎಳೆಯಬೇಕಂತಿಲ್ಲ
ಈ ಸಂದರ್ಭದಲ್ಲಿ ಮೊಳಕಾಲ್ಮೂರು ತಹಶೀಲ್ದಾರ ಸುರೇಶ್, ತಾ.ಪಂ ಇಓ ಜಾನಕಿರಾಮ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಿದಾನಂದಪ್ಪ, ಶಿವರಾಜ್, ರಾಯಪುರ ಗ್ರಾ.ಪಂ. ಅಧ್ಯಕ್ಷ ಜಿ.ಬಿ.ಪಾಪಣ್ಣ, ಮುಖಂಡರಾದ ಎತ್ತಹಟ್ಟಿ ಗೌಡ್ರ, ಜಯಪಾಲಯ್ಯ ಸೇರಿದಂತೆ ಇತರರು ಇದ್ದರು.

ಲಂಚಕ್ಕೆ ಬೇಡಿಕೆಯಿಟ್ಟ ಗ್ರಾಮ ಪಂಚಾಯತ ಸಿಬ್ಬಂದಿಗಳು ಲೋಕಯುಕ್ತ ಬಲೆಗೆ

[t4b-ticker]

You May Also Like

More From Author

+ There are no comments

Add yours