ಸತತ ಹೋರಟ ಫಲವಾಗಿ ಮೀಸಲಾತಿ ದೊರಕಿದೆ:ವಾಲ್ಮೀಕಿ ಶ್ರೀ

 

ಚಳ್ಳಕೆರೆ:  ವಾಲ್ಮೀಕಿ ಸಮಾಜದ   ಸಂಘಟಿತ ಹೋರಾಟ ಮತ್ತು  ನಿರಂತರ ಪರಿಶ್ರಮದ ಫಲದಿಂದ ಸರ್ಕಾರದ ಮೇಲೆ ಒತ್ತಡ ಏರಿದ್ದರಿಂದ 30 ವರ್ಷಗಳ ಹೋರಾಟದ ಫಲವಾಗಿ ಪರಿಶಿಷ್ಟ ಪಂಗಡದ ವರಿಗೆ ಶೇಕಡಾ ಏಳು ರಷ್ಟು ಮೀಸಲಾತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ವಾಲ್ಮೀಕಿ ಗುರುಪೀಠದ   ಶ್ರೀ ಪ್ರಸನ್ನಾನಂದ ಮಹಸ್ವಾಮೀಜಿಗಳು ಹೇಳಿದರು.

ಇಂದು ಚಳ್ಳಕೆರೆ  ನಗರದ ವಾಲ್ಮೀಕಿ ಮಂಟಪದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ವಾಲ್ಮೀಕಿ ಸಂಘದ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ವಾಲ್ಮೀಕಿ ಜಾತ್ರೆಯ ಸಂಬಂಧ ಪೂರ್ವಭಾವಿ  ಸಭೆ ಉದ್ದೇಶಿಸಿ ಮಾತನಾಡಿ ಮುಂದೆಯೂ ಕೂಡ ಸಮಾಜದ ಪ್ರಮುಖರು ಇಂತಹ ಸನ್ನಿವೇಶಗಳಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.  ವಾಲ್ಮೀಕಿ ಸಮಾಜದ ಇನ್ನು 20 ಬೇಡಿಕೆಗಳಿವೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ  ಮಾಡಬೇಕಾಗಿದೆ.  ಇದರಲ್ಲಿ ಪ್ರಮುಖವಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಿಟಿಸಿಎಲ್ ಕಾಯ್ದೆಯ ದುರ್ಬಳಿಕೆ ಮತ್ತು ಇನ್ನೂ 10 ಹಲವು ಜ್ಲಲಂತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಾಂಗದ ಬಂಧುಗಳು ಆಗಮಿಸಿ ಈ ಸಂದರ್ಭದಲ್ಲಿ ಜಾತ್ರೆಗೆ ಸಿದ್ದಪಡಿಸಿರುವಂತಹ ಹೊಸ ತೇರನ್ನು ಲೋಕಾರ್ಪಣೆ ಮಾಡಲಾಗುವುದು.ಜಾತ್ರೆಯನ್ನು ಯಶಸ್ವಿ ಮಾಡಬೇಕಾಗಿ ವಿನಂತಿಸಿದರು.

ತಹಶೀಲ್ದಾರ್ ಎನ್. ರಘುಮೂರ್ತಿ  ಮಾತನಾಡಿ ತಾಲೂಕು  ಆಡಳಿತದ ವತಿಯಿಂದ ಪರಮಪೂಜ್ಯ  ಶ್ರೀಗಳನ್ನು ಗೌರವ ಸಮರ್ಪಣೆ ಮಾಡಿ ಮಾತನಾಡಿ ಪರಮಪೂಜ್ಯರು 247 ದಿನ ಸತತವಾಗಿ ಮುಷ್ಕರದಲ್ಲಿ ನಿರತರಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜನಾಂಗಕ್ಕಾಗಿ  ಬಹುದಿನಗಳ  ಬೇಡಿಕೆಯಾದ ಮೀಸಲಾತಿಯನ್ನು ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.valmeki

ಇಡೀ ತಾಲೂಕಿನ ಜನಾಂಗದ ಪರವಾಗಿ ಅವರನ್ನು ಈ ದಿನ ಅಭಿನಂದಿಸಬೇಕು.  ಕ್ಷೇತ್ರದ ಶಾಸಕರೊಂದಿಗೆ ಸಮಸ್ತ ನಾಗರಿಕ ಬಂಧುಗಳು ವಿಸ್ತೃತವಾದ ಚರ್ಚೆ ನಡೆಸಿ ವಾಲ್ಮೀಕಿ ಜಾತ್ರೆಯ ಆ ಯೋಜನೆ ತಿಳಿಸಬೇಕು. ಶರಣರ ಹಾದಿಯಲ್ಲಿ ಪೂಜ್ಯ ಶ್ರೀಗಳು ಸಾಗಿದ್ದು ಅವರ ಸಮಾಜ ಸೇವೆ ಅನುಕರಣೆಯ ಮತ್ತು challakere news ಅನನ್ಯವಾದದ್ದು ಸಮಾಜದ ಬಂಧುಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು.

Breaking news: ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ಗೆ ರಾಜ್ಯದ ಇಬ್ಬರು ನಾಯಕರನ್ನು ಭೇಟಿ ಮಾಡಿದ ಮಾಜಿ ಶಾಸಕ

ಈ  ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ರಾಮದಾಸ್, ನಿವೃತ್ತ ಅಧಿಕಾರಿ ಭಕ್ತರಮೇಗೌಡ ,ವಾಲ್ಮೀಕಿ ಸಮಾಜದ ಅಧ್ಯಕ್ಷ ಮಲ್ಲಪ್ಪ ನಾಯಕ ,  ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಿ ಜೆ ತಿಪ್ಪೇಸ್ವಾಮಿ, ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷ ಮಂಗಳಮ್ಮ ಹಾಗೂ ತಾಲೂಕು ವಾಲ್ಮೀಕಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.challakere news

[t4b-ticker]

You May Also Like

More From Author

+ There are no comments

Add yours