ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ಗೆ ರಾಜ್ಯದ ಇಬ್ಬರು ನಾಯಕರನ್ನು ಭೇಟಿ ಮಾಡಿದ ಮಾಜಿ ಶಾಸಕ

 

ವಿಶೇಷ ವರದಿ:

ಚಿತ್ರದುರ್ಗ:ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಸಾಮಾನ್ಯ ವಿಧಾನ ಸಭಾ ಕ್ಷೇತ್ರವಾಗಿದ್ದು  ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಾಗಿ ಅಭ್ಯರ್ಥಿಗಳು ಅರ್ಜಿ ಹಾಕಿ ಭಾರಿ ಕಸರತ್ತು ನಡೆಸುತ್ತಿದ್ದು ಯಾರಿಗೆ ಟಿಕೆಟ್ ಒಲಿಯಲಿದೆ ಎಂಬುದು ಎಲ್ಲಾರಿಗೂ ಗೊಂದಲವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಟಿಕೆಟ್ ತಂದೇ ತರುತ್ತೇನೆ ಎಂಬ ವಿಶ್ವಾಸದಲ್ಲಿ ಇದ್ದಾರೆ.  ಸ್ಥಳೀಯ ಲೀಟರ್ ಲೆಕ್ಕಚಾರದಲ್ಲಿ ಮಾಜಿ ಎಂಎಲ್ಸಿ ರಘು ಆಚಾರ್ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದ್ದರು ಸಹ ಪ್ರಯತ್ನ ನಿಲ್ಲಿಸದ ಬಸವರಾಜನ್ ಇಂದು ರಾಜಧಾನಿಯಲ್ಲಿ ರಾಜಕೀಯ ದಾಳ ಉರುಳಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದ ಎರಡ್ಮೂರು ದಿನಗಳ ಹಿಂದೆ ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ  ಪವರ್ ಸೆಂಟರ್  ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಇಬ್ಬರು ನಾಯಕರನ್ನು ನೇರವಾಗಿ ಅವರ ನಿವಾಸಗಳಿಗೆ ತೆರಳಿ ತಮ್ಮ ಅಪ್ತರು ಮತ್ತು ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿರು ಇತರೆ ವರ್ಗದ ಜನಾಂಗದ ನಾಯಕರ ಟೀಂ ಬಸವರಾಜನ್ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ನಾಯಕರಿಗೆ ಬೇಡಿಕೆ ಇಟ್ಟಿದ್ದಾರೆ‌‌ ಆದರೆ ಟಿಕೆಟ್ ಪಕ್ಕ ಎಂದು ಕೆಲಸ ಆರಂಭಿಸಿರುವ ರಘುಆಚಾರ್ ಅವರಿಗೆ ಟಿಕೆಟ್ ಫೈನಲ್ ಆಗುತ್ತಾ ಅಥವಾ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿತ್ಯದಡಿ ಬಸವರಾಜನ್ ಗೆ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡುತ್ತಿದ್ದು ಎಲ್ಲಾವೂ ಕೇಲವು ದಿನಗಳಲ್ಲಿ ನಿರ್ಧಾರವಾಗಲಿದೆ  ಎಂಬ ರಾಜಕೀಯ ಪಡಾಸಾಲೆಯಲ್ಲಿ ಕೇಳಿಬರುತ್ತಿದೆ‌.ಟಿಕೆಟ್ ಯಾರಿಗೆ ಎಂಬುದು ಮಾತ್ರ ಹೈಕಮಾಂಡ್ ಮತ್ತು ಕಾಂಗ್ರೆಸ್ ಗುಟ್ಟು ಬಿಟ್ಟು ಕೊಟ್ಟಿಲ್ಲ. ಸ್ವಲ್ಪ ದಿನದಲ್ಲಿ ಎಲ್ಲಾದಕ್ಕೂ ಅಂತಿಮ ತೆರೆ ಬಿಳಲಿದೆ ಎಂದಷ್ಟೇ ಹೇಳಬಹುದು.
[t4b-ticker]

You May Also Like

More From Author

+ There are no comments

Add yours