ಜಿ.ಎಸ್.ಮಂಜುನಾಥ್ ವಿರುದ್ದ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪತಿಭಟನೆ

 

ಚಿತ್ರದುರ್ಗ : ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿಯನ್ನು ಹೀನಾಯ ಪದಗಳಿಂದ ನಿಂದಿಸಿರುವ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ವಿರುದ್ದ ಬಿಜೆಪಿ. ಎಸ್ಸಿ. ಮೋರ್ಚಾದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಕೂಡಲೆ ಬಂಧಿಸುವಂತೆ ಒತ್ತಾಯಿಸಲಾಯಿತು.

ಬಿಜೆಪಿ.ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಜಿ.ಎಸ್.ಮಂಜುನಾಥ್ ವಿರುದ್ದ ಧಿಕ್ಕಾರಗಳನ್ನು ಕೂಗಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ದುರಹಂಕಾರಿ ಜಿ.ಎಸ್.ಮಂಜುನಾಥ್‍ನನ್ನು ಕೂಡಲೆ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದರು.

ಕಳೆದ ಹತ್ತರಂದು ಹಿರಿಯೂರು ಪಟ್ಟಣದ ಹರಿಶ್ಚಂದ್ರಘಾಟ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಿ.ಎಸ್.ಮಂಜುನಾಥ್ ಪ್ರಧಾನಿ ಮೋದಿ ಏನಾದರೂ ನನ್ನ ಕೈಗೆ ಸಿಕ್ಕರೆ ಕಾಲಲ್ಲಿರುವುದನ್ನು ತೆಗೆದುಕೊಂಡು ಹೊಡೆಯುತ್ತೇನೆಂದು ಹೇಳಿರುವುದು ಬಿಜೆಪಿ. ಕಾರ್ಯಕರ್ತರ ಮನಸ್ಸಿಗೆ ಅಘಾದವಾದ ನೋವುಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಮಾತುಗಳನ್ನಾಡಿರುವ ಈತನನ್ನು ತಕ್ಷಣವೆ ಬಂಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು. ಬಂಧಿಸುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಸಂಘ ಸಂಸ್ಥೆಗಳ ಲೆಕ್ಕಪತ್ರ ದಾಖಲೆ ಸಲ್ಲಿಸಲು ಮತ್ತೊಂದು ಅವಕಾಶ

ಬಿಜೆಪಿ. ಎಸ್ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಡಿ.ತಿಪ್ಪೇಸ್ವಾಮಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಮೋಹನ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ತಿಪ್ಪೇಸ್ವಾಮಿ ಚಲವಾದಿ, ಮಲ್ಲೇಶ್, ನವೀನ್, ಚಂದ್ರು, ಪರಶುರಾಮ್, ತಿಮ್ಮಣ್ಣ, ವೀರೇಶ್, ಸಿ.ಟಿ.ಪ್ರಭಣ್ಣ, ನರೇಂದ್ರಹೊನ್ನಾಳ್, ವೀಣ, ಬಸಮ್ಮ, ಕಿರಣ್, ಅರುಣ್, ಬಿ.ಜೆ.ಸಿಂಧು, ಕಮಲೇಶ್‍ಜೈನ್, ನಗರಸಭೆ ಸದಸ್ಯ ಹರೀಶ್, ಕಲ್ಲೇಶ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪೊಲೀಸ್ ಬ್ಯಾರಿಕೇಡ್‍ಗಳನ್ನು ಅಡ್ಡವಿಟ್ಟು ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

[t4b-ticker]

You May Also Like

More From Author

+ There are no comments

Add yours