ಈ ಊರಲ್ಲಿ ದುಡ್ಡು ತೂರುವ ವಿಶಿಷ್ಟ ಶೈಲಿಯ ಅಂಬಿನೋತ್ಸವ

 

ವಿಶೇಷ ಲೇಖನ: ನಾಗತಿಹಳ್ಳಿಮಂಜುನಾಥ್.ಹೊಸದುರ್ಗ

ಹೊಸದುರ್ಗ:ನಾಡಿನುದ್ದಗಲಕ್ಕೂ ಆಶ್ವೀಜ ಮಾಸದ ಮಹಾಲಯ ಅಮವಾಸ್ಯೆಯಿಂದ ನವರಾತ್ರಿ ಅಂಬಿನೋತ್ಸವ ನಡೆಯುವುದು ಒಂದು ಸಂಪ್ರದಾಯ ಆದರೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಕಂಚೀಪುರದ ಶ್ರೀಕಂಚೀವರದಸ್ವಾಮಿ ಅಂಬಿನೋತ್ಸವ ದಸರಾ ಹಬ್ಬಕ್ಕೆ ಮೋದಲೇ ಜರುಗುವ ವಿಶಿಷ್ಟ ಶೈಲಿಯ ಉತ್ಸವ ಇದನ್ನು ಉತ್ತರೆ ಮಳೆ ಅಂಬು ಎನ್ನುತ್ತಾರೆ.
ಸಾಹಿತ್ಯ ಸಂಗೀತ ಕಲೆ ಜಾನಪದ ರಂಗಭೂಮಿಗಳಿಗೆ ತನ್ನದೆ ಅದ ವಿಶಿಷ್ಟ ಕೊಡುಗೆ ನೀಡಿರುವ ಹೊಸದುರ್ಗ ತಾಲ್ಲೂಕು ಆದ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ವೈಶಿಷ್ಟö್ಯತೆ ಪಡೆದಿದೆ.
ತಾಲ್ಲೂಕಿನ ಕಂಚೀಪುರದ ಗ್ರಾಮದಲ್ಲಿ ನೆಲಸಿರುವ ಮಹಾ ಮಹಿಮಾನ್ವಿತ ಶ್ರೀಕಂಚೀವರದಸ್ವಾಮಿ ದೇವರ ಮಹಿಮೆ ದೊಡ್ಡದು ಮಹಾಲಯ ಅಮಾವಾಸ್ಯೆಯಿಂದ ೯ ದಿನಗಳ ಕಾಲ ಎಲ್ಲಾ ಕಡೆಯಲ್ಲೂ ನವರಾತ್ರಿ ಉತ್ಸವ ಜರುಗಲಿದ್ದು ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿಯ ಅಂಬಿನೋತ್ಸವ ನವರಾತ್ರಿ ಮುಂಚೆಯೇ ಅಂದರೆ ಉತ್ತರೆ ಮಳೆ ಹುಟ್ಟಿದ ನಂತರ ಬರುವ ಸೋಮವಾರ ಮತ್ತು ಮಂಗಳವಾರ ನಡೆಯಲಿದೆ ಪುರಾಣ ಪ್ರಸಿದ್ದವಾದ ಈ ದೇವರಿಗೆ ಪುರಾತನ ಕಾಲದಿಂದಲೂ ಇದೆ ಸಂಪ್ರದಾಯದ ರೂಡಿಸಿಕೊಂಡು ಬರಲಾಗಿದೆ.

ಇದನ್ನು ಓದಿ: ಎಂಪಿ ಎಂಎಲ್ಎ ಮಧ್ಯೆ ಗಲಾಟೆ , ಎಂಪಿಯನ್ನು ಹೊರ ದಬ್ಬಿದ ಎಸ್ಪಿ

ದೇವರು ಪಟ್ಟಕ್ಕೆ ಕೂರುವ ಮುನ್ನಾ ಉತ್ತರೆ ಮಳೆ ನೀರಿನಿಂದ ನಾಮವನ್ನು ತೇಯಿದು ದೇವರಿಗೆ ಹಚ್ಚಬೇಕೆಂಬುದು ಪದ್ದತಿ ಕಂಚೀಪುರ ಕ್ಷೇತ್ರದ ಈ ದೇವರ ಮಹಿಮೆ ಪವಾಡ ಬಹು ವಿಶೇಷತೆಗಳಿಂದ ಕೂಡಿದೆ
ಅಂಬಿನೋತ್ಸವವು ಜಾನಪದ ಶೈಲಿಯಲ್ಲಿ ಜರುಗುವುದು ಗಮನಾರ್ಹ ಸಂಗತಿ ಕಂಚೀವರದರಾಜ ಸ್ವಾಮಿಯ ಈ ಉತ್ಸವವನ್ನು ಉತ್ತರೇ ಮಳೆ ಅಂಬು ಎಂದೂ ಕರೆಯುತ್ತಾರೆ ನಾಡಿನಲ್ಲಿ ಈ ರೀತಿ ನಡೆಯುವ ಏಕೈಕ ಉತ್ಸವ ಇದು ಎಂದರೂ ತಪ್ಪಾಗಲಾರದು ಜಿಲ್ಲೆಯಲ್ಲೇ ಅತ್ಯಂತ ವಿಶೇಷವಾಗಿ ನಡೆಯುವ ಈ ಉತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ.
ಈ ದೇವರ ಇನ್ನೊಂದು ಹಿರಿಮೆ ಎಂದರೆ ಬೇರೆ ದೇವರಂತೆ ಹಣ್ಣು ಕಾಯಿ ಧೂಪ ದೀಪ ಆಭರಣ ವಸ್ತçಗಳನ್ನು ಬಯಸುವುದಿಲ್ಲ ಇವುಗಳನ್ನು ಸಮರ್ಪಿಸುವುದರಿಂದ ದೈವ ಸಂತೃಪ್ತಿಯಾಗುವುದಿಲ್ಲ ಈ ದೇವರನ್ನು ಆರಾಧಿಸುವ ಬಗಯೇ ಬಹು ಸ್ವಾರಸ್ಯಕರ ಅಪರೂಪದ ಸಂಗತಿ.

ಇದನ್ನು ಓದಿ: ಕೋಟೆ ನಾಡಿನಲ್ಲಿ ನೂತನ ಅರಮನೆ ಸ್ವೀಟ್ಸ್ ಭರ್ಜರಿ ಶುಭಾರಂಭ
ಅಂಬಿನೋತ್ಸವದಲ್ಲಿ ಇಷ್ಟು ರೂಪಾಯಿ ಮೌಲ್ಯದ ನಾಣ್ಯಗಳನ್ನು ನಿನ್ನ ಮೇಲೆ ತೂರುವ ಮೂಲಕ ಸಮರ್ಪಿಸುವೆ ಎಂದು ಭಕ್ತರು ಈ ದೇವರಿಗೆ ಸಂಕಲ್ಪ ಮಾಡುತ್ತಾರೆ.
ಉತ್ಸವ ಮೂರ್ತಿ ದೇವಾಲಯದಿಂದ ಅಂಬಿನೋತ್ಸವಕ್ಕೆ ಹೊರಟು ಮೆರವಣಿಗೆಯಲ್ಲಿ ಸಾಗುವಾಗ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರು ತಮ್ಮ ಶಕ್ತಾನುಸಾರ ದೇವರ ಮೇಲೆ ನಾಣ್ಯಗಳನ್ನು ತೂರುತ್ತಾರೆ ಇದು ಅಪೂರ್ವ ದೃಶ್ಯವಾಗಿದೆ ಈ ರೀತಿ ಲಕ್ಷಾಂತರ ರೂಪಾಯಿ ನಾಣ್ಯಗಳನ್ನು ಭಕ್ತರು ದೇವರ ಮೇಲೆ ತೂರಿ ಕೃತಾರ್ಥರಾಗುತ್ತಾರೆ.


ಈ ರೀತಿ ಬಯಲಿನಲ್ಲಿ ದೇವರ ಮೇಲೆ ತೂರಿದ ಹಣವನ್ನು ಭಕ್ತರು ಪ್ರಸಾದವೆಂದು ಭಾವಿಸಿ ಅರಿಸಿಕೊಂಡು ದೇವರು ಕೊಟ್ಟವ ಎಂದು ಧನ್ಯರಾಗುತ್ತಾರೆ ಈ ರೀತಿ ನಾಣ್ಯಗಳನ್ನು ತೂರುವ ಸಂದರ್ಭವನ್ನು ಭಕ್ತ ಸಮುದಾಯ ಕುತೂಹಲದಿಂದ ವೀಕ್ಷಿಸುತ್ತಾರೆ ಕೆಲವರಂತೂ ಚೀಲಗಳಲ್ಲಿ ತುಂಬಿ ನಾಣ್ಯಗಳನ್ನು ತೂರುತ್ತಾರೆ ಈ ರೀತಿ ಹಿಡಿ ಹಿಡಿ ನಾಣ್ಯ ತೂರುವ ದೃಶ್ಯ ರೋಮಾಂಚನಕಾರಿಯಾಗಿರುತ್ತದೆ ಈ ರೀತಿ ಭಕ್ತರು ತಮ್ಮ ಅನನ್ಯ ಭಕ್ತಿ ಸಮರ್ಪಣೆ ಮಾಡುತ್ತಾರೆ.
ಈ ದೇವರಿಗೆ ಉತ್ಸವದ ದಿನ ಪಾಪಾಣದೆಡೆ ಸೊರಗಂಬಲಿಯAತರ ಅನೇಕ ಸೇವೆಗಳು ಸಲ್ಲಲ್ಪಡುತ್ತವೆ ಈ ಬಗ್ಗೆ ಕಂಚೀಪುರದ ಶಾಸನೋಕ್ತವಾಗಿರುವ ಜಾನಪದ ತ್ರಿಪದಿ ದಂತ ಕಥೆಗಳಲ್ಲಿ ಈ ದೇವರ ಅನೇಕ ಅಚಾರ ವಿಚಾರಗಳು ಸಂಶೋದನಾತ್ಮಕವಾಗಿದೆ.
ಆನಾಕರ್ಷಣೆಯ ಈ ಜಾತ್ರೆಯಲ್ಲಿ ದೇವರು ಉತ್ತರೇ ಗುಡ್ಡ ಕಂಚೀಪುರ ದೊಡ್ಡ ವಜ್ರ ದಶರಥ ರಾಮೇಶ್ವರ ಕಾನುವೇಹಳ್ಳಿ, ದಾಸಯ್ಯನಕಾವಲು ಧೂಪದಕಣ, ಕಣಿವೆ ರಂಗಸ್ವಾಮಿ, ವಜ್ರ ಕಗ್ಗಲಕಟ್ಟೆ ಹಾಳು ಸಂಗಾಪುರ, ಗೊಲ್ಲರಹಳ್ಳಿಗಳಿಗೆ ಬಿಜಯಂಗೈದು ಅಂಬು ಹೊಡೆಯುತ್ತದೆ.
ಉತ್ಸವದ ಹಿಂದಿನ ರಾತ್ರಿ ಅತ್ಯಂತ ಪರಿಶುದ್ದವಾಗಿ ಮಡಿಯಿಂದ ಹದಿನಾರು ಸೇರು ಅಕ್ಕಿಯ ಬುತ್ತಿ ಬಾನ ಮಾಡುತ್ತಾರೆ ಕಾರ್ಣಿಕ ಹೋಮ ಸಹ ನಡೆಯುತ್ತದೆ ಬೆಳಗಿನ ಜಾವ ದೊಡ್ಡ ದೇವರನ್ನು ಹೊತ್ತು ಬುತ್ತಿ ಬಾನದ ಗೂಡೆಯನ್ನು ತಲೆಯ ಮೇಲೆ ಹೊತ್ತು ಭಕ್ತ ಸಮುದಾಯ ಸಿದ್ದರ ಬೆಟ್ಟಕ್ಕೆ ಬರುತ್ತದೆ ಇಲ್ಲಿ ಸಿದ್ದರ ಲಿಂಗಗಳಿಗೆ ಪೂಜೆ ಮಾಡಿ ಬುತ್ತಿ ಬಾನ ಸಡಿಲಿಸಿ ಮೂರು  ಎಡೆ ಹಿಡಿದು ಹಳೆಯ ಕಾಲದ ಬಿಲ್ಲು ಬಾಣಗಳಿಂದ ತೆಂಗಿನಕಾಯಿ ಒಡೆದು ತೀರ್ಥ ಬಿಡುತ್ತಾರೆ. ಈ ರೀತಿಯಲ್ಲಿ ಉತ್ತರೆ ಮಳೆ ಅಂಬು ಭಯ ಭಕ್ತಿಯಿಂದ ಶ್ರದ್ದಾ ಪೂರ್ವಕವಾಗಿ ಹಾಗೂ ವಿಧಿಪೂರ್ವಕವಾಗಿ ಸ್ವಾಮಿಯ ಸೇವಾ ಕಾರ್ಯಗಳು ಜರುಗುತ್ತವೆ.

[t4b-ticker]

You May Also Like

More From Author

+ There are no comments

Add yours