ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುವೆ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ:chitradurga.ಜೂ:20: ಎಸ್.ಎಸ್.ಪಿ. ಪೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಬಾಕಿಯಿರುವ 60 ಸಾವಿರ ಅರ್ಜಿಗಳನ್ನು ಕೂಡಲೆ ಇತ್ಯರ್ಥಪಡಿಸಿ ಶೈಕ್ಷಣಿಕ ಸಹಾಯಧನವನ್ನು ಫಲಾನುಭವಿಯ ಖಾತೆಗೆ ಜಮ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿಯವರು ಶಾಸಕ ಕೆ.ಸಿ.ವೀರೇಂದ್ರಪಪ್ಪಿಗೆ(k.c.virendhra pappi) ಮನವಿ ಸಲ್ಲಿಸಿದರು.

ಆರೋಗ್ಯ ಸಂಜೀವಿನಿ, ಹೊಸ ತಂತ್ರಾಂಶ ಕುರಿತು ತರಬೇತಿ, ಅರ್ಜಿಗಳ ವಿಲೇವಾರಿ ವಿಳಂಭ, ಕಲ್ಯಾಣ ಮಂಡಳಿಯಿಂದ ಶಿಶುವಿಹಾರಗಳ ಆರಂಭ ಬೇಡ, ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ.ಗಳ ಸಹಾಯಧನ, ಸ್ಲಂ ಬೋರ್ಡ್‍ಗೆ ನೀಡಿರುವ ಹಣ ಮಂಡಳಿಗೆ ಮರು ಪಾವತಿಯಾಗಬೇಕು, ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕರಿಗೆ ಪ್ರಾತಿನಿಧ್ಯ, ಎಲ್ಲಾ ಖರೀಧಿಗಳನ್ನು ನಿಲ್ಲಿಸಿ ನೇರ ಹಣ ವರ್ಗಾವಣೆ, ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ತೊಂದರೆಗಳ ನಿವಾರಣೆ, ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ವಿಧಾನಸಭೆಯಲ್ಲಿ ನಿಮ್ಮ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. (chitradurga)

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್, ಬಿ.ಸಿ.ನಾಗರಾಜಚಾರಿ, ಉಮೇಶ್, ಸಣ್ಣಮ್ಮ, ಶೇಖ್ ಕಲೀಂವುಲ್ಲಾ, ಧರ್ಮಣ್ಣ, ಭಾಸ್ಕರಚಾರಿ, ಅಬ್ದುಲ್ಲಾ, ಮಂಜುನಾಥ್, ರಾಘವೇಂದ್ರ, ಇಸ್ಮಾಯಿಲ್, ದೇವರಾಜ್, ಮಹಮದ್ ಸಮೀವುಲ್ಲಾ, ರಂಗಸ್ವಾಮಿ, ಮಲ್ಲಿಕಾರ್ಜುನ್, ಗಿರಿಜಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours