ಶಿಕ್ಷಕನಿಂದ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ : ಟಿ.ರಘುಮೂರ್ತಿ

 

ಚಳ್ಳಕೆರೆ-೦೫ ಶಿಕ್ಷಣ ಕ್ಷೇತ್ರದ ಭೀಷ್ಮ,ರಾಷ್ಟ್ರದ ರಾಷ್ಟ್ರಪತಿ ದಿವಂಗತ ಸರ್ವೆಪಲ್ಲಿ ರಾಧಕೃಷ್ಣರವರ ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕರನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದ ಹಿರಿಮೆಯನ್ನು ಸಂರಕ್ಷಿಸಬೇಕೆAದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಸುಮಾರು ೬೦ಕ್ಕೂ ಹೆಚ್ಚು ಶಿಕ್ಷಕರು ಸೇವೆಯಿಂದ ನಿವೃತ್ತರಾದ ಶಿಕ್ಷಕರ ಸೇವೆ ಶಿಕ್ಷಣ ಇಲಾಖೆಯ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದೆ. ನಿಮ್ಮ ಸೇವೆ ಸಾರ್ಥಕವಾಗಿದೆ ಎಂಬುವುದರಲ್ಲಿ ಅನುಮಾವಿಲ್ಲ. ಮುಂದಿನ ದಿನಗಳಲ್ಲೂ ಸಹ ನೀವು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಾಗಬೇಕು. ಶಿಕ್ಷಕನಿಂದ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಈ ಕ್ಷೇತ್ರದ ಶಾಸಕನಾಗಿ ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸದಾ ಸ್ಪಂದಿಸುವೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯಮಟ್ಟದಲ್ಲಿ ಹೆಸರು ಮಾಡಲು ಶಿಕ್ಷಕರ ಪರಿಶ್ರಮವೇ ಕಾರಣ. ಶಾಸಕರೂ ಸೇರಿದಂತೆ ಹ¯ವಾರು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು ನಮಗೆ ಸದಾ ಕಾಲ ಶೈಕ್ಷಣಿಕ ಅಭಿವೃದ್ದಿಯ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಲು ಪ್ರತಿಯೊಬ್ಬ ಶಿಕ್ಷಕನು ಕಾರಣಕರ್ತನಾಗುತ್ತಾನೆ. ನಿಮ್ಮೆಲ್ಲರ ನಿರಂತರ ಪ್ರಾಮಾಣಿಕ ಕಾರ್ಯ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಭದ್ರಬುನಾದಿ ಒದಗಿಸಲಿದೆ ಎಂದರು.
ಉಪನ್ಯಾಸ ನೀಡಿದ ದಾವಣಗೆರೆ ಶಿಕ್ಷಣ ಚಿಂತಕ ಎ.ಬಿ.ರಾಮಚಂದ್ರಪ್ಪ, ಸಮಾಜದಲ್ಲಿ ಯಾವುದೇ ಸಾಧನೆ, ಬದಲಾವಣೆ, ಪರಿವರ್ತನೆಯಾದಲ್ಲಿ ಅದಕ್ಕೆ ಶಿಕ್ಷಕನೇ ಕಾರಣಕರ್ತ. ಶಿಕ್ಷಕನಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಅಸಾಧ್ಯ, ಜಾತಿ, ಧರ್ಮ, ಲಿಂಗಬೇಧ ಮುಂತಾದ ವರ್ಣಭೇದ ನೀತಿಗಳನ್ನು ಮರೆಮಾಚಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಷಯಗಳ ಬಗ್ಗೆ ತಿಳಿಸಿದರೆ ಅದು ಅವರ ಜೀವನದಲ್ಲಿ ವಿಶೇಷ ಸಾಧನೆಗೆ ಅಡಿಪಾಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಶಾಸಕ ಬಹುಮಾನ ವಿತರಿಸಿದರು. ಸೇವೆಯಿಂದ ನಿವೃತ್ತಿ ಹೊಂದಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಸತ್ಯನಾರಾಯಣ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಕೆ.ಮಾಧವ ಸೇರಿದಂತೆ ಒಟ್ಟು ೫೦ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಒ ಜೆ.ಕೆ.ಹೊನ್ನಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಪ್ಪ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇAದ್ರ, ಬಿ.ಟಿ.ರಮೇಶ್‌ಗೌಡ, ಸುಮಕ್ಕ, ಕವಿತಾ, ಸುಮಾ, ಸಾವಿತ್ರಮ್ಮ, ಪ್ರಾಂಶುಪಾಲ ಎಂ.ರವೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ, ಶಿಕ್ಷಕರ ಸಂಘ ರಾಜ್ಯ ನಿರ್ದೇಶಕ ಸಿ.ಟಿ.ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
———————————–

[t4b-ticker]

You May Also Like

More From Author

+ There are no comments

Add yours