ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 18 ಶಿಕ್ಷಕರು ಆಯ್ಕೆ
7 ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿ ಪ್ರಧಾನ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.04: ಜಿಲ್ಲಾ ಆಯ್ಕೆ ಸಮಿತಿ 18 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಹಾಗೂ 7 ಶಿಕ್ಷಕರನ್ನು ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿ ಆಯ್ಕೆ ಮಾಡಿದೆ. ಸೆ.5 ರಂದು ತ.ರಾ.ಸು ರಂಗಮAದಿರದಲ್ಲಿ ಜರುಗುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಭಾಜನರಾದ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.
ಪ್ರೌಢಶಾಲೆ ವಿಭಾಗ: ಚಳ್ಳಕೆರೆ ತಾಲೂಕು ಹಿರೇಹಳ್ಳಿ ಶ್ರೀ ಚಿಂತಾಮಣೇಶ್ವರಿ ಗ್ರಾಮಾಂತರ ಪ್ರೌಢಶಾಲೆ ಸಹ ಶಿಕ್ಷಕಿ ಎಚ್.ಕೆ. ರಶ್ಮಿ, ಹೊಸದುರ್ಗ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಶಿಕ್ಷಕ ಕೆ.ಎನ್. ಶ್ರೀಧರಶೆಟ್ಟಿ, ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳೀ ಅನಾಥ ಸೇವಾಶ್ರಮ ಪದವಿ ಪೂರ್ವ ಕಾಲೇಜು ಸಹಶಿಕ್ಷಕ ಬಿ.ಪಿ ದಕ್ಷಣಾಮೂರ್ತಿ, ಮೊಳಕಾಲ್ಮೂರು ತಾಲ್ಲೂಕು ಕೊಂಡ್ಲಹಳ್ಳಿ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿಎಂಎಸ್ ತಿಪ್ಪೇಸ್ವಾಮಿ, ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುಚಿತ್ರಕಲಾ ಶಿಕ್ಷಕ ಟಿ.ಎಸ್ ಪ್ರಸನ್ನ ಕುಮಾರ್ ಚಿತ್ರದುರ್ಗ ತಾಲ್ಲೂಕು ಮಾನಂಗಿ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯ ಶಿಕ್ಷಕಿ ಜಿ.ಪೂರ್ಣಿಮಾ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹಿರಿಯೂರು ತಾಲ್ಲೂಕು ಬಗ್ಗನಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಕೆ.ಎನ್.ರಾಜಪ್ಪ, ಚಳ್ಳಕೆರೆ ತಾಲ್ಲೂಕು ಸೋಮಗುದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ. ರುದ್ರಮುನಿ, ಹೊಳಲ್ಕೆರೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಸಹ ಶಿಕ್ಷಕಿ ಶಾನವಾಜ್ ಬೇಗ, ಹೊಸದುರ್ಗ ತಾಲ್ಲೂಕು ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಚ್.ಮಂಜುಳ ಮೊಳಕಾಲ್ಮೂರು ತಾಲ್ಲೂಕು ರ‍್ರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದವೀಧರೇತರ ಮುಖ್ಯ ಶಿಕ್ಷಕ ಹುಸೇನ್ ಸಾಬ್, ಚಿತ್ರದುರ್ಗ ತಾಲ್ಲೂಕು ಹಿದಾಯತ್‌ಪುರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಆರ್.ಜೆ.ಮೊಹಮ್ಮದ್ ತಾಜೀರ್ ಬಾಷಾ .
ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಚಳ್ಳಕೆರೆ ತಾಲ್ಲೂಕು ಖಂಡೇನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಕೆ.ಜಗನ್ನಾಥ್, ಗುಡ್ಡದ ಕಪಿಲೆ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಟಿ.ಸೌಭಾಗ್ಯ, ಹೊಸದುರ್ಗ ತಾಲ್ಲೂಕು ಬಾಚಾವರ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಜೀಮುಲ್ಲಾ ಷರೀಫ್, ಮೊಳಕಾಲ್ಮೂರು ತಾಲ್ಲೂಕು ಗುಂಡ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಹನುಮಂತಪ್ಪ, ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಸಹ ಶಿಕ್ಷಕಿ ಆರ್.ಪಾರ್ವತಿಬಾಯಿ, ಅರಬಗಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಜಿ.ಎಲ್ ಶಿವಕುಮಾರ್.
ವಿಶೇಷ ಪ್ರಶಸ್ತಿ ಆಯ್ಕೆಯಾದ ಶಿಕ್ಷಕರ ಪಟ್ಟಿ: ಚಿತ್ರದುರ್ಗ ತಾಲ್ಲೂಕು ಚವಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಿ.ಜಿ.ಹಾಲೇಶಿ, ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಶಿವಣ್ಣ, ಲಕ್ಷ್ಮಿ ಸಾಗರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಎಸ್.ಗುರುಮೂರ್ತಿ, ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಶ್ವನಾಥ.ಎಂ, ಚಳ್ಳಕರೆ ತಾಲ್ಲೂಕಿನ ಜಾಗನೂರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ರಾಮಚಂದ್ರ ಮರೆಕ್ಕನವರ, ಕಸವಿಗೊಂನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ತಿಪ್ಪೇಸ್ವಾಮಿ, ಮೊಳಕಾಲ್ಮೂರು ತಾಲ್ಲೂಕು ರಾಂಪುರ ಬಸವೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ರವಿ.
+ There are no comments
Add yours