ಚಿತ್ರದುರ್ಗ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎ.ಮುರುಳಿ ಪುನರಾಯ್ಕೆ

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಆದರೆ ಹಾಲಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ( chitradurga dist BJP) ಜಿಲ್ಲಾ ಅಧ್ಯಕ್ಷ ಎ. ಮುರುಳಿ ಅವರು ಚಿತ್ರದುರ್ಗದ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಪುನರಾಯ್ಕೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಘಟಕದ ಆಯ್ಕೆಗೆ ಹೊಸದುರ್ಗದ ಲಿಂಗಮೂರ್ತಿ, ಸಿದ್ದಾಪುರ ಸುರೇಶ್ , ಮಲ್ಲಿಕಾರ್ಜುನ್ ಮೂವರ ಜೊತೆ ವೆಂಕಟೇಶ್ ಯಾದವ್ ಅವರು ಸಹ ಹಿಂದುಳಿದ ವರ್ಗಗಳ ಕೋಟಾದಲ್ಲಿ ಲಾಭಿ ನಡೆಸಿದ್ದರು. ಆದರೆ ಬಿಜೆಪಿ ರಾಜ್ಯಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ. ದಿನದಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವ ಬಿ.ವೈ.ವಿಜಯೇಂದ್ರ ಅವರು ರಾಜ್ಯದಲ್ಲಿ ಹಲವು ಬದಲಾವಣೆಗೆ ಮಣೆ ಹಾಕಿದ್ದರು. ಅದರಂತೆ ಸಹ ಕೋಟೆ ನಾಡಿನಲ್ಲಿ ನೂತನ ಜಿಲ್ಲಾಧ್ಯಕ್ಷರು ಯಾರು ಆಗುತ್ತಾರೆ ಎಂಬ ಚರ್ಚೆ ಮತ್ತು ಊಹೆ ಪ್ರಾರಂಭವಾಗಿದ್ದವು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಲಾಭಿಯು ನಡೆದಿತ್ತು.ಆದರೆ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಜಿಲ್ಲಾ ಅಧ್ಯಕ್ಷ ಸ್ಥಾನದ ಆಯ್ಕೆಗೆ ಪೈಪೋಟಿ ನಡುವೆ ಎ. ಮುರುಳಿ ಅವರನ್ನು ಪುನರ್ ಆಯ್ಕೆ ಮಾಡಿ ರಾಜ್ಯಧ್ಯಕ್ಷರು ಆದೇಶ ಹೊರಡಿಸಿ ಪಟ್ಟಿ ರಿಲೀಸ್ ಮಾಡಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.‌ಮುರುಳಿ ಅವರಿಗೆ ಈ ಹಿಂದೆ ಜಿಲ್ಲಾ ಘಟಕದ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದರು. ಮುರುಳಿ ಅವರು ಮೂಲತಃ ಹಿಂದುಳಿದ ಬುಡಕಟ್ಟು ಗೊಲ್ಲ ಸಮುದಾಯದಿಂದ ಬಂದಿರುವ ಹಿರಿಯೂರು ತಾಲೂಕಿನ ಆಲಮರದ ಹಟ್ಟಿ ಗ್ರಾಮದವರಾಗಿದ್ದಾರೆ. ಸಂಘ ಪರಿವಾರ ಮೂಲದಿಂದ ಬಂದು ಬಿಜೆಪಿ ಪಕ್ಷದಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಚಿತ್ರದುರ್ಗ ಜಿಲ್ಲೆಯ ಎರಡನೇ ಬಾರಿಗೆ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಮಹಿಳಾ ಕಂಡಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ

ಲೋಕಸಭೆ ಎಫೆಕ್ಟ್ :
ಲೋಕಸಭೆ ದೃಷ್ಟಿಯಿಂದ ಹಿಂದುಳಿದ ವರ್ಗಗಳು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರ್ದದಲ್ಲಿ ನಿರ್ಣಾಯಕ ಮತಗಳನ್ನು ಹೊಂದಿರುವ ಯಾದವ ಸಮುದಾಯದ ವಿಶ್ವಾಸ ಗಳಿಸಲು ಮತ್ತೊಮ್ಮೆ ಮುರುಳಿ ಅವರ ಆಯ್ಕೆ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಕಳೆದ ಬಿಜೆಪಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿರುವ ಜೊತೆ ಸಮುದಾಯದ ಕಾರ್ಡ್ ವರ್ಕ್ ಆಗಿದ್ದು ಮತ್ತೊಮ್ಮೆ ಮುರುಳಿ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿದಿದೆ ಎಂದು ಹೇಳಲಾಗುತ್ತಿದೆ.

[t4b-ticker]

You May Also Like

More From Author

+ There are no comments

Add yours