ಮಹಿಳಾ ಕಂಡಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ

 

ಬೆಂಗಳೂರು:ರಾಜಧಾನಿಯ  ಬಿಎಂಟಿಸಿ ಬಸ್  ಮಹಿಳಾ ಕಂಡಕ್ಟರ್ ಮೇಲೆ ಚಾಕುವನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೇ ಚಾಕುವಿನಿಂದ ಹಲ್ಲೆ ನಡೆಸಿದ್ದು, ಕಂಡಕ್ಟರ್ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಡಿಪೋ ನಂ.40ಕ್ಕೆ ಸೇರಿದಂತೆ ಬಿಎಂಟಿಸಿ (Bmtc)ಬಸ್ಸಿನಲ್ಲಿ ಮಹಿಳಾ ಕಂಡಕ್ಟರ್ ಮೇಲೆ ಮಹಿಳಾ ಪ್ರಯಾಣಿಕರು ಚಾಕುವಿನಿಂದ ಹಲ್ಲೆ ನಡೆಸಿರೋ ಘಟನೆ ನಡೆದಿದೆ.ಬಸ್ಸಿನಲ್ಲಿ ಟಿಕೆಟ್ ಪಡೆಯದೇ ಕುಳಿತಿದ್ದಂತವನ್ನು ಬಿಎಂಟಿಸಿ ಮಹಿಳಾ ಕಂಡಕ್ಟರ್ ಸುಕನ್ಯಾ ಪ್ರಶ್ನಿಸಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದು, ಆ ಬಳಿಕ ಮಹಿಳಾ ಬಿಎಂಟಿಸಿ ಕಂಡಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆನಂದ್ ಲೋಕಯುಕ್ತ ಬಲೆಗೆ

ಮಹಿಳಾ ಪ್ರಯಾಣಿಕರಿಂದ ಚಾಕುವಿನಿಂದ ಹಲ್ಲೆಗೆ ಒಳಪಟ್ಟಿರುವ  ಬಿಎಂಟಿಸಿ ಬಸ್ ಕಂಡಕ್ಟರ್ ಅನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ದೊರೆಯಬೇಕಿದೆ.

[t4b-ticker]

You May Also Like

More From Author

+ There are no comments

Add yours