ಅಯೋಧ್ಯೆ ಯಾತ್ರೆ ಮುಗಿಸಿ ಬಂದ ರಾಮ ಭಕ್ತರಿಗೆ ಅದ್ದೂರಿ ಸ್ವಾಗತ

 

ಅಯೋಧ್ಯೆ ಯಾತ್ರೆ ಮುಗಿಸಿ ಬಂದ ರಾಮ ಭಕ್ತರಿಗೆ ಅದ್ದೂರಿ ಸ್ವಾಗತ
 ಹೊಸದುರ್ಗ : ಪ್ರಭು ಶ್ರೀ ರಾಮನನ್ನು ನೋಡಲೇ ಬೇಕೆಂದು, ಅಯೋಧ್ಯೆಗೆ ಪಾದಸ್ಪರ್ಶ ಮಾಡಬೇಕೆಂದು ಪಣ ತೊಟ್ಟು ಹೊಸದುರ್ಗದ ದಯಾನಿಧಿ ಮತ್ತು ಶರಣಪ್ಪ ಎಂಬ ಇಬ್ಬರು ಯುವಕರು 2. ಸಾವಿರ ಕಿ.ಮೀ ಸೈಕಲ್ ಯಾತ್ರೆ ಮಾಡಿ, ಬಾಲರಾಮನ ದರ್ಶನ ಮಾಡಿ ಹೊಸದುರ್ಗಕ್ಕೆ ಹಿಂದಿರುಗಿದ ಯಾತ್ರಾರ್ಥಿಗಳನ್ನು ಗುರುವಾರ ಹಿಂದೂ ಭಾಂದವರು ಅದ್ದೂರಿಯಾಗಿ ಸ್ವಾಗತಿಸಿದರು.
 ನಗರದ ರಾಘವೇಂದ್ರ ಸ್ವಾಮಿ ಮಠದ ಮುಂಭಾಗ ಯುವಕರನ್ನು ಸ್ವಾಗತಿಸಿ, ಯುವ ಉದ್ಯಮಿ ಡಿ.ಏಸ್. ಪ್ರದೀಪ್ ಮಾತನಾಡಿ, ಭಾರತ ಎಂದರೆ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರದ ಪುಣ್ಯಭೂಮಿ. ಇಲ್ಲಿ ಸಂಕಲ್ಪ ಮಾಡಿ ಹೋದರೆ, ಅಲ್ಲಿ ಸೋಲೆಂಬುದೇ ಆಗುವುದಿಲ್ಲ. ಹೊಸದುರ್ಗದ ವಿಜ್ಞ ನಿವಾರಕ ಶ್ರೀ ಗಣೇಶನ ದರ್ಶನ ಪಡೆದು ಅಯೋಧ್ಯ ಯಾತ್ರೆ ಹೊರಟ ಈ ರಾಮ ಭಕ್ತರು ಶ್ರೀ ವಿನಾಯಕನ ಆಶೀರ್ವಾದದಿಂದ ಶ್ರೀ ರಾಮ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ವಾಪಾಸ್ ಬಂದಿರುವುದು ಸಂತಸದ ವಿಚಾರ ಎಂದರು.
*ಕೋಟ್ :
 ಸಾವಿರಾರು ಕಿ.ಮೀ ಸೈಕಲ್ ಯಾತ್ರೆ ಮಾಡಿ ಪ್ರಭು ಶ್ರೀ ರಾಮನ ದರ್ಶನ ಮಾಡಿ ಆಶೀರ್ವಾದ ಪಡೆದು ವಾಪಸ್ ಆದ ಹೊಸದುರ್ಗದ ದಯಾನಿಧಿ ಮತ್ತು ಶರಣಪ್ಪ ಈ ಇಬ್ಬರು ಹಿಂದೂ ಕಾರ್ಯಕರ್ತರು ರಾಮನ ಭಕ್ತಿಯನ್ನು ಮೆರೆದಿದ್ದಾರೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಿರುವುದು ಸಂತೋಷವಾಗಿದೆ. ಆದರೆ, ಭಾರತ ರಾಮ ರಾಜ್ಯ ಆಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಭಾರತ ರಾಮರಾಜ್ಯ ಆಗಬೇಕೆಂದು ಭಾರತೀಯರೆಲ್ಲರೂ ಎದುರು ನೋಡುತ್ತಿದ್ದಾರೆ.
 ಬಿ ಜಿ ಅರುಣ್,
ಯುವ ಮುಖಂಡ.
———————————–
 ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ,ಬಿ,ಜಿ, ಅರುಣ್, ಅಯೋಧ್ಯ ಸೈಕಲ್ ಯಾತ್ರ ಮುಗಿಸಿ ವಾಪಾಸು ಬಂದ ದಯಾನಿಧಿ, ಶರಣಪ್ಪ, ಸತೀಶ್ ದಾಳಿಂಬೆ ಗಿರೀಶ್,, ಗುಳಿಹಟ್ಟಿ ಕೃಷ್ಣಮೂರ್ತಿ, ವಿರಾಟ್ ಇಂದು ಮಹಾಸಾಗರ ಗಣಪತಿ ಅಧ್ಯಕ್ಷ ಪ್ರದೀಪ್,, ತುಂಬಿನಕೆರೆ ಬಸವರಾಜ್,ಶಾಂತಿನಗರ ಗೋಪಾಲ್, ರವಿಕುಮಾರ್,ಪ್ರಕಾಶ್, ಲೋಕೇಶ್, ಹಾಗೂ ಅಪಾರ ಹಿಂದೂ ಕಾರ್ಯಕರ್ತರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours