ಶಾಸಕ ಗೋವಿಂದಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು: ಎಸ್.ಲಿಂಗಮೂರ್ತಿ ಆಗ್ರಹ

 

ಹೊಸದುರ್ಗ: ಶಾಸಕ ಗೋವಿಂದಪ್ಪನವರ ಹೇಳಿಕೆ ತಾಲ್ಲೂಕಿನ ಜನರಲ್ಲಿ ಆತಂಕ ಹುಟ್ಟಿಸಿದೆ. ಇವರು ಮಾಜಿ ಶಾಸಕರಾಗಿದ್ದ ಸಂದರ್ಭದಲ್ಲಿ ನಾನೇ 50 ಲಕ್ಷ ರೂ.ಲಂಚವನ್ನು ಕೊಡಿಸಿದ್ದೇನೆಂದು ಹೇಳಿದ್ದಾರೆ. ಕಾನೂನಿನಲ್ಲಿ ಲಂಚವನ್ನು ಪಡೆಯುವುದು ಎಂತಹ ಅಪರಾಧವೋ, ಲಂಚವನ್ನು ನೀಡುವುದು ದೊಡ್ಡ ಅಪರಾಧ. ಇವರ ಹೇಳಿಕೆ ನೋಡಿದರೆ,   ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕಾದ ಸಂದರ್ಭ ಸೃಷ್ಟಿಯಾಗಿದ್ದು, ಸರ್ಕಾರ ಕೇಸ್ ದಾಖಲಿಸಬೇಕೆಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಏಸ್. ಲಿಂಗಮೂರ್ತಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋವಿಂದಪ್ಪನವರು ಒಬ್ಬ ಜನಪ್ರತಿನಿಧಿಯಾಗಿದ್ದು, ಲಂಚವನ್ನು ನೀಡಿದ್ದೇನೆ ಎಂಬ ಹೇಳಿಕೆ ನೀಡಿರುವುದು ದೊಡ್ಡ ಅಪರಾಧವೇ ಆಗಿದೆ. ಇದಕ್ಕೆ ಸರಿಯಾದ ಉತ್ತರವನ್ನು ಜನರಿಗೆ, ಶಾಸಕರು ನೀಡಬೇಕು. ಈ ಹಿಂದೆ ಇವರೇ ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಲಂಚಾವತಾರ ನಡೆದಿತ್ತು. ಮತ್ತೆ ಇದೀಗ, ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಲಂಚದ ಮೂಲಕ ಜನರಿಗೆ ಕಿರುಕುಳವನ್ನು ಕೊಡಲಾಗುತ್ತಿದೆ. ಲಂಚ ಪಡೆದಿರುವ ಸಾಕ್ಷ್ಯಧಾರಗಳು ನನ್ನ ಬಳಿಯಿದ್ದು, ಜನರ ಮುಂದಿಡುವೆ ಎಂದು ಹೇಳಿದರು.
  ನೀವು ಮಾಜಿ ಶಾಸಕರಾಗಿದ್ದ ಸಂದರ್ಭದಲ್ಲಿ ‘ನಾನು ಬ್ಯಾಂಕಿನಲ್ಲಿ ಮಾರ್ಟಗೆಜ್ ಮಾಡಲು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಒಂದು ಲಕ್ಷ ಹಣವನ್ನು ಲಂಚವಾಗಿ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದೀರಿ. ನೀವೇ ಒಬ್ಬ ಶಾಸಕರಾಗಿ ಈ ರೀತಿ ಹೇಳಿಕೆ ಕೊಡುತ್ತಿರುವುದನ್ನು ನೋಡಿ, ಕ್ಷೇತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಧಿಕಾರದಲ್ಲಿರುವವರೇ ಈ ರೀತಿಯಾಗಿ ಲಂಚ ಕೊಟ್ಟರೆ, ಸಾಮಾನ್ಯ ಜನರ ಪಾಡೇನು? ಇವರು ಲಂಚಕ್ಕೆ ಯಾವ ರೀತಿಯಾಗಿ ಕಡಿವಾಣ ಹಾಕುತ್ತಾರೆಂಬ ದೊಡ್ಡ ಪ್ರಶ್ನೆ ಜನರಲ್ಲಿ ಮೂಡಿದೆ. ಇದಕ್ಕೆ ಏನು ಹೇಳುವಿರಿ ಎಂದು ಶಾಸಕರಿಗೆ ಪ್ರಶ್ನಿಸಿದ್ದಾರೆ.
 ಗೋವಿಂದಪ್ಪನವರಿಗೆ ಅಧಿಕಾರವಿದ್ದು, ಮಣ್ಣುಸಾಗಟ ಮತ್ತು ಅಕ್ರಮ ಮರಳುಸಾಗಟಕ್ಕೆ ಕಡಿವಾಣ ಹಾಕಬೇಕು. ನಾನು ಖನಿಜ ನಿಗಮದ ಅಧ್ಯಕ್ಷನಾಗಿದ್ದಾಗ ರೈತರು ಮನೆ ಕಟ್ಟಲೂ, ದೇವಸ್ಥಾನ ಕಟ್ಟಲು ಮರಳನ್ನ ಉಚಿತವಾಗಿ ಮತ್ತು ಕಡಿಮೆ ದರದಲ್ಲಿ ನೀಡಬೇಕೆಂದು ನೀತಿಯನ್ನು ರೂಪಿಸಲಾಗಿತ್ತು. ಅದು ಕೂಡ ಈಗಿನ ಸರ್ಕಾರದಲ್ಲಿ ಜಾರಿಗೆ ಬಂದಿಲ್ಲ. ಹಿಂದೆ ಕಂದಾಯ ಮತ್ತು ಪೊಲೀಸ್ ಇಲಾಖೆಯ ಆಡಳಿತ ವೈಫಲ್ಯದಿಂದ ಕಳ್ಳತನ ಮಾಡಿ ತಪ್ಪಿಸಿಕೊಂಡಿರುವವರು ಇದ್ದಾರೆ. ಆದರೆ, ಅಮಾಯಕರ ಮೇಲೆ ಕೇಸ್ ಹಾಕಲಾಗಿದೆ. ಜನರ ಕಣ್ಣೋರಿಸುವ ತಂತ್ರದಿಂದ ಕೆಲವೊಬ್ಬ ಮುಖಂಡರ ಮೇಲೆ ಆಗೊಂದು, ಇಗೊಂದು ಕೇಸ್ ವಾಪಸ್ ಹಾಕಲಾಗಿದೆ. ಶಾಸಕರು ಸುಮ್ಮನೆ ಜನರಿಗೆ ಮಂಕುಬೂದಿ ಎರಚುವುದನ್ನು ಬಿಟ್ಟು, ಉತ್ತಮ ಆಡಳಿತ ನಡೆಸಿ ಎಂದು ಕಿಡಿ ಕಾರಿದರು.
  ಈ ವೇಳೆ ಜಿ.ಪಂ.ಮಾಜಿ ಸದಸ್ಯ ರಮೇಶ್, ತಾಲೂಕು ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ಮುಖಂಡರಾದ ವೆಂಗಳಾಪುರ ಮಂಜುನಾಥ್, ಅಶೋಕ್ ಮತ್ತು ಸ್ವಾಮಿ ಸೇರಿದಂತೆ ಹಲವರಿದ್ದರು.
*ಕೋಟ್ *
ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಭಿವೃದ್ಧಿ ಮರೆತು, ಭಾಗ್ಯಗಳಿಗೆ ಹಣವನ್ನು ಹಾಕಲಾಗುತ್ತಿದೆ. ಜನರಿಗೆ ನೀಡುವ ಭಾಗ್ಯಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಇದನ್ನು ಮುಂದಿಟ್ಟುಕೊಂಡು ಕಣ್ಣೊರೆಸುವ ತಂತ್ರ ನಡೆಯುತ್ತಿದೆ. ಬಹಳಷ್ಟು ಕಡೆಗೆ ಭಾಗ್ಯಗಳಿಗೆ ತಲುಪುತ್ತಿಲ್ಲ. 
ಏಸ್.ಲಿಂಗಮೂರ್ತಿ 
ಬಿಜೆಪಿ ಮುಖಂಡರು ಮತ್ತು ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಖನಿಜ ನಿಗಮ, ಬೆಂಗಳೂರು
[t4b-ticker]

You May Also Like

More From Author

+ There are no comments

Add yours