ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

 

 

 

 

ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯೂರು ನಂಜಯ್ಯನ ಕೊಟ್ಟಿಗೆ ಬಳಿಯಿರುವ ತಾಲ್ಲೂಕು ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ ತಾll ಒಕ್ಕಲಿಗರ ಮಹಿಳಾ ಘಟಕದ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ಮಮತಾ ಕೃಷ್ಣಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಕಾರ್ಯಕ್ರಮವನ್ನು ತುಮಕೂರು ಕುಂಚಿಟಿಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮಲ್ಲಪ್ಪ ಇವರು ಉದ್ಘಾಟಿಸಿ ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಸಂಘಟನೆ ನಿಂತ ನೀರಾಗಬಾರದು ಯಾವಾಗಲೂ ಹರಿಯುತ್ತಿರಬೇಕು ಹೊಸ ಯೋಜನೆ ರೂಪಿಸಬೇಕು ಎಂದರು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಶಶಿಕಲಾ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಸರಗಳ್ಳತನ ಮಾಡುವವರ ಬಗ್ಗೆ ತಕ್ಷಣ ಪೊಲೀಸ್ ಠಾಣೆಯ 112ಕ್ಕೆ ಕರೆ ಮಾಡಿ ದುಷ್ಕರ್ಮಿಗಳ ಪತ್ತೆಗೆ ಸಹಕರಿಸಬೇಕು ಸಮಾನತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಮಹಿಳೆಯರು ಗಮನ ಹರಿಸಬೇಕು ಎಂದರು Dr ಲತಾ ರಾಮಚಂದ್ರಪ್ಪ ಅವರು ಮಾತನಾಡಿ ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಊಟದಲ್ಲಿ ಹಸಿ ತರಕಾರಿ ಕಾಳುಗಳು ಮೊಟ್ಟೆ ಹೆಚ್ಚಿಗೆ ಬಳಸಬೇಕು ಹೆಣ್ಣುಮಕ್ಕಳಿಗೆ ವಯೋಮಿತಿಗಿಂತ ಮುಂಚಿತವಾಗಿ ಮದುವೆ ಮಾಡಬಾರದು ಹೆಚ್ಚಾಗಿ ಹಣ್ಣುಗಳನ್ನು ಸೇವಿಸಬೇಕು ಕ್ಯಾನ್ಸರ್ ಬಗ್ಗೆ ವೈದ್ಯರ ಬಳಿ ಸಲಹೆ ಪಡೆಯಬೇಕು ಎಂದರು ಅಧ್ಯಕ್ಷತೆವಹಿಸಿದ್ದ ಶ್ರೀಮತಿ ಮಮತಾ ಕೃಷ್ಣಮೂರ್ತಿ ಅವರು ಮಾತನಾಡಿ ಸಮುದಾಯದ ಮಹಿಳೆಯರು ತಾಲೂಕಿನಲ್ಲಿ ಸಂಘಟಿತರಾಗಬೇಕು ಸರ್ಕಾರದ ಮೀಸಲಾತಿ ಸದುಪಯೋಗಪಡಿಸಿಕೊಳ್ಳಬೇಕು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಸಂಘಟನೆ ಮತ್ತು ಸಮಾಜದ ಒಗ್ಗಟ್ಟಿನ ಬಗ್ಗೆ ಹೋರಾಡುವ ಮೂಲಕ ಮಹಿಳೆಯರು ಮೀಸಲಾತಿ ಸದುಪಯೋಗಪಡಿಸಿಕೊಳ್ಳಬೇಕು ಶೈಕ್ಷಣಿಕವಾಗಿ ಹೆಚ್ಚಿನ ಒತ್ತು ನೀಡಬೇಕು ಎಂದರು ಈ ಸಂದರ್ಭದಲ್ಲಿ ಲಲಿತಾ ಮಲ್ಲಪ್ಪ ಶಶಿಕಲಾ ಡಾ ಲತಾ ರಾಮಚಂದ್ರಪ್ಪ ಢಾ
ಚಂದ್ರಕಲಾ ಬಿ ಫಾರ್ಮಸಿಯಲ್ಲಿ rank ಪಡೆದ ಕುಮಾರಿ ಗಗನ ಹಾಗೂ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ರಾಮಚಂದ್ರಪ್ಪ ಕೆ ಟಿ ರುದ್ರಮುನಿ ವಿ ಮನ್ಮಥ ಕೆ ಸಿ ಹೊರಕೇರಪ್ಪ ಎಂ ಆರ್ ಪುಟ್ಟಸ್ವಾಮಿ ರಮೇಶ್ ಕುಮಾರ್ ಡಿ ಧರಣೇಂದ್ರಯ್ಯ ಶ್ರೀಮತಿ ಕಲ್ಪನಾ ರಾಧಮ್ಮ ಲತಾ ಓಂಕಾರಪ್ಪ ತಾ ಪಂ ಸದಸ್ಯೆ ಕಲ್ಪನಾ ರಾಜೇಶ್ವರಿ ವೀಣಾ ರಾಧಾಕೃಷ್ಣ ವನರಾಣಿ ಶಶಿಕಲಾ ಅರುಣಾ ಪಟೇಲ್ ಸೌಮ್ಯ ಭಾಗ್ಯಪ್ರಕಾಶ್ ವಿನೋದಮ್ಮ ಸೌಭಾಗ್ಯಮ್ಮ ಕುಸುಮ ಕಲಾವತಿ ಡಿ ಕವಿತಾ ಛಾಯಾ ವಾಣಿ ಅನಿತಾ ಸುಮ ಶ್ರೀನಿವಾಸ್ ಚಂದ್ರಕಲಾ ನೇತ್ರ ಭಾಗ್ಯ ಗಾಯತ್ರಿ ಕಲಾ ಅರುಣ ಇನ್ನೂ ಅನೇಕ ಮಹಿಳೆಯರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours