ನಲಗೇತನಹಟ್ಟಿಯಲ್ಲಿ ಶಾಲಾ ಮಕ್ಕಳಿಗೆ ಟಿಡಿ ಲಸಿಕೆ ವಿತರಣೆ*

 

*ನಲಗೇತನಹಟ್ಟಿಯಲ್ಲಿ ಶಾಲಾ ಮಕ್ಕಳಿಗೆ ಟಿಡಿ ಲಸಿಕೆ ವಿತರಣೆ*

ನಾಯಕನಹಟ್ಟಿ, ಜು. ೧೪: ಹೋಬಳಿಯ ನಲಗೇತನಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟಿ ಟಿ ಬದಲಿಗೆ ಟಿಡಿ ಲಸಿಕೆ (ಧನುರ್ವಾಯು ಲಸಿಕೆ) ಹಾಕುವ ಕಾರ್ಯಕ್ರಮವನ್ನು ಶಾಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಆರೋಗ್ಯ ನಿರೀಕ್ಷಕ ಶೇಷಾದ್ರಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂದು ಲಸಿಕೆ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಮಕ್ಕಳಿಗೆ ೧ ನೇ ತರಗತಿ ೪ ಮತ್ತು ೧೦ ತರಗತಿಯ ಮಕ್ಕಳಿ ಲಸಿಕಾ ನೀಡುವಂತೆ ಸರ್ಕಾರ ಸೂಚಿಸಿರುವಂತೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಟಿಟಿ ಬದಲಿಗೆ ಟಿಡಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ಲಸಿಕೆ ನೀಡುವ ಉದ್ದೇಶ ಇತರೆ ರೋಗ ರುಜಿನಗಳು ಮಕ್ಕಳಿಗೆ ಬರಬಾರದು ಎಂದು, ಅದೇ ರೀತಿಯಾಗಿ ಲಸಿಕೆಯ ಅನೇಕ ರೋಗಗಳು ಬರದಂತೆ ತಡೆಯುತ್ತದೆ ಎಂದು ಹೇಳಿದ ಅವರು ನಮ್ಮ ದೇಶದಲ್ಲಿ ಬಹಳಷ್ಟು ಡಿಪ್ತಿಚಿರಿಯಾ ಪ್ರಕರಣಗಳು ೫ನೇ ವಯಸ್ಸು ಮುತ್ತು ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳು ಆಟ ಹಾಡುವಾಗ ಸಣ್ಣಪುಟ್ಟ ಗಾಯಗಳಾಗಿ ಸೆಪ್ಟಿಕ್ ಆಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಗಾಯಕ್ಕೆ ನಂಜಾಗಿ ಸಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಾರು ಸಹ ಭಯಪಡದೆ ಲಸಿಕೆ ಪಡೆದುಕೊಂಡು ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆ ಶಿಕ್ಷಕಿಯರಾದ ಎನ್ ಜ್ಯೋತಿ , ಆರೋಗ್ಯ ನಿರೀಕ್ಷಕರಾದ ಬಿ ಸತೀಶ್, ಏಕಾಂತಮ್ಮ, ಭವ್ಯ, ಆಶಾ ಕಾರ್ಯಕರ್ತರಾದ ಕೆ.ಬಿ. ಪಾಪಮ್ಮ, ಟಿ. ಶೈಲಜಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
===============================

[t4b-ticker]

You May Also Like

More From Author

+ There are no comments

Add yours