*ನಗರಂಗೆರೆ ಕೆರೆ ಪರಿಶೀಲನೆ ಮಾಡಿದ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಎನ್.ಕೆ.ಶಂಕರಪ್ಪ*

 

ಚಳ್ಳಕೆರೆ : ಬಯಲು ಸೀಮೆಯ ಜೀವನಾಡಿಯಾದ ಭದ್ರಾ ಮೆಲ್ದೆಂಡೆ ಯೋಜನೆ ಕಾಮಗಾರಿ ಚುರುಕುಗೊಳ್ಳುತ್ತಿದಂತೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಕೆರೆ ಹಾಗೂ ಬೊಮ್ಮಸಮುದ್ರ ಕೆರೆಗಳಿಗೆ ಜಿಲ್ಲಾ ಸಮಿತಿ ತಂಡದ ಜಿಲ್ಲಾ ಎರಡನೇ ಹೆಚ್ಚುವಾರಿ ನ್ಯಾಯಾಧೀಶರಾದ ಎನ್.ಕೆ.ಶಂಕರಪ್ಪ ಇಂದು ಬೇಟಿ ನೀಡಿ ಪರೀಶಿಲನೆ‌ ನಡೆಸಿದರು.

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಸರ್ವೆ ನಂ.51 ರಲ್ಲಿ 322 ಎಕರೆ ಒಳಗೊಂಡ ವಿಶಾಲ ಕೆರೆಗೆ ನಗರದ ಹಲವು ಪ್ಯಾಕ್ಟರಿಗಳಿಂದ ಕೆಮಿಕಲ್ ಯುಕ್ತ ನೀರು ಹರಿದು ಬರುವ ಸಂಶಯಗಳಿವೆ ಆದ್ದರಿಂದ ಕೆರೆ‌ನೀರು ಮಲಿನವಾಗಿವೆ ಎಂದು ಸಾರ್ವಜನಿಕರು ದೂರಿದರು.

ಪ್ಯಾಕ್ಟರಿಗಳು ಕಲುಷಿತ ನೀರು ಬಿಡುವ ಮುನ್ನ ಒಂದು ಬಾರಿ ಶುದ್ಧೀಕರಣ ಮಾಡಿ ಕೆರೆಗೆ ಬಿಡಬೇಕು ಆದೇ ರೀತಿ ನಗರದ ಕೊಳಚೆ ನೀರಿಗೆ ಡ್ರೈನೆಜ್ ಸಿಂಸ್ಟ್ ಮಾಡಿ ನಗರದಿಂದ ಹೊರ ಬರುವ ನೀರನ್ನು ಶುದ್ದೀಕರಣ ಮಾಡಿ ಬಿಡಿ ಎಂದು ಪೌರಾಯುಕ್ತರಿಗೆ ತಿಳಿಸಿದರು.

ಕೆರೆ ಒತ್ತುವರಿ ಮಾಡಿರುವ ಹಾಗೂ ಸಂರಕ್ಷಣೆ ಬಗ್ಗೆ ಪರೀಶಿಲನೆ ನಡೆಸಿದ ಜಿಲ್ಲಾ ಎರಡನೇ‌ ಹೆಚ್ಚುವರಿ ನ್ಯಾಯದೀಶರು ಕೆರೆ ಏರಿ ಹಾಗೂ ವಿಸ್ತೀರ್ಣವನ್ನು ಪರೀಶಿಲನೆ ನಡೆಸಿದರು.

ಎರಡನೇ ಹೆಚ್ಚುವಾರಿ ಜಿಲ್ಲಾ ನ್ಯಾದೀಶರು ಎನ್.ಕೆ.ಶಂಕರಪ್ಪ
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಪಿ.ಪಾಲಯ್ಯ, ಪಿಡಿಓ ರಾಮಚಂದ್ರಪ್ಪ, ಪರಿಸರ ಮಾಲಿನ್ಯ ಅಧಿಕಾರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಪಾತಲಿಂಗಪ್ಪ,ಸದಸ್ಯ ವಿಜಯಮ್ಮ ಕಾರ್ತಿಕೇಶ್ವರ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours