2 ವಾರ ಕೋವಿಡ್ ಸೋಂಕು ಹೆಚ್ಚಾದರೆ 3 ನೇ ಅಲೆ.

 

ನವದೆಹಲಿ, ಡಿ.26- ದೇಶದಲ್ಲಿ ಮುಂದಿನ ಎರಡು ವಾರಗಳವರೆಗೆ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದರೆ ಮೂರನೇ ಅಲೆ ಪ್ರಾರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸದ್ಯಕ್ಕೆ, ಹಬ್ಬ ಮತ್ತು ವರ್ಷಾಂತ್ಯದ ಆಚರಣೆಗಳಿಂದಾಗಿ ಸಾಮಾಜಿಕ ಕೂಟಗಳು ಮತ್ತು ಜನಸಂದಣಿಯಿಂದಾಗಿ ಕೊರೊನಾ ಸೋಂಕು ನಿರೀಕ್ಷಿತ ಮಟ್ಟಕ್ಕಿಂತ ಮತ್ತಷ್ಟು ಏರಿಕೆಯಾಗಲಿದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಮುಂಬೈ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಡಿಸೆಂಬರ್ ತಿಂಗಳಿನಿಂದ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಾಗುತ್ತಿದೆ .ಇದನ್ನೆಲ್ಲ ಗಮನಿಸಿದರೆ ಮೂರನೇ ಅಲೆ ಕಾಣಿಸಿಕೊಂಡಿದೆ ಎನ್ನುವ ಅನುಮಾನ ಕಾಡಲಿದೆ ಎಂದು ಕೂಡ ತಜ್ಞರು ಹೇಳಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ ಇದೇ ರೀತಿಯ ಸೋಂಕು ದೇಶದಲ್ಲಿ ಹೆಚ್ಚಾದರೆ ಮೂರನೆಯ ಅಲೆ ಕಾಣಿಸಿಕೊಳ್ಳಲಿದೆ ಹೀಗಾಗಿ ದೇಶಾದ್ಯಂತ ಜನರು ಎಚ್ಚರಿಕೆ ವಹಿಸಬೇಕು ಮತ್ತು ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ‌.

ಅದರಲ್ಲಿಯೂ ಹೊಸವರ್ಷ ಆಚರಣೆ ಸಂದರ್ಭದಲ್ಲಿ ಜನರು ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಇಲ್ಲದಿದ್ದರೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಜೊತೆಗೆ ದೆಹಲಿಯಲ್ಲಿ ಕೂಡ ಸಂಖ್ಯೆ ಹೆಚ್ಚಳ ಅನಾಹುತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours