ಡಿ.28, 29 ರಂದು ನಾಕೀಕೆರೆ ಕೋಡಿ ಆಲದಮ್ಮನ ಜಾತ್ರೆ

 

ಡಿ.೨೮, ೨೯ ರಂದು ನಾಕೀಕೆರೆ ಕೋಡಿ ಆಲದಮ್ಮನ ಜಾತ್ರೆ

ಚಿತ್ರದುರ್ಗ: ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾAಬಿಕಾ ದೇವಿಯ ಜಾತ್ರಾ ಮಹೋತ್ಸವ ಡಿ.೨೮ ಹಾಗೂ ೨೯ ರಂದು ನಡೆಯಲಿದೆ.

ನಾಕೀಕೆರೆಯ ಗಡಿ ಭಾಗದಲ್ಲಿ ವಿಶಾಲವಾಗಿ ಚಾಚಿಕೊಂಡಿರುವ ಬೃಹತ್ ಆಲದ ಮರದ ಬಳಿ ನೆಲೆಗೊಂಡಿರುವ ದೇವಿಯ ಜಾತ್ರಾ ಮಹೋತ್ಸವ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುತ್ತದೆ.

ಡಿ.೨೮ ಮಂಗಳವಾರ ರಾತ್ರಿ ೯.೩೦ಕ್ಕೆ ಮೂಲ ಸ್ಥಾನದಿಂದ ದೇವಿಯನ್ನು ನಾಕೀಕೆರೆ ಗ್ರಾಮಕ್ಕೆ ಕರೆತರಲಾಗುತ್ತದೆ. ಗ್ರಾಮದಲ್ಲಿ ಉತ್ಸವ ನಡೆಸಿ ಊರಿನ ಮಧ್ಯ ಭಾಗದಲ್ಲಿರುವ ಚಾವಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು.

ಡಿ.೨೯ ಬುಧವಾರ ಮಧ್ಯಾಹ್ನ ೧.೩೦ ರಿಂದ ಹಿಟ್ಟಿನ ಆರತಿ, ಬೇವಿನ ಸೀರೆ ಕಾರ್ಯಕ್ರಮ ನಡೆಯಲಿವೆ. ಇದೇ ದಿನ ಬೆಳಗಿನ ಜಾವ ದೇವಿಯನ್ನು ಮೂಲ ಸ್ಥಾನಕ್ಕೆ ಕರೆದೊಯ್ಯುವ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours