ಹೆಚ್‍ಎಎಲ್‍ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ, ಡಿಸೆಂಬರ್14:
ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‍ನಲ್ಲಿ ಫಿಟ್ಟರ್, ಮಿಷನಿಸ್ಟ್, ಟರ್ನರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕೊಪಾ, ಫೌಂಡ್ರಿಮೆನ್ ಹಾಗೂ ಶೀಟ್ ಮೆಟಲ್ ವರ್ಕರ್ ಟ್ರೇಡ್‍ಗಳಿಗೆ ಸಂಬಂಧಪಟ್ಟ ಒಂದು ವರ್ಷ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣ ಮತ್ತು ಸಂಬಂಧಪಟ್ಟ ಟ್ರೇಡ್‍ಗಳಲ್ಲಿ ಪಡೆದ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.
ನಿಗದಿತ ಅರ್ಜಿ ನಮೂನೆಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಐಟಿಐ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ಆರ್ಮಡ್ ಪರ್ಸನಲ್ ಪ್ರಮಾಣ, ಆಧಾರ ಕಾರ್ಡ್ ಜೆರಾಕ್ಸ್, ಎನ್‍ಟಿಸಿ ಪ್ರಮಾಣ ಪತ್ರ, ಎನ್‍ಸಿವಿಟಿ ಎಂಐಎಸ್ ಫೋರ್ಟ್‍ಲ್ ರಿಜಿಟ್ರೇಶನ್ ನಂಬರ್ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಚಿತ್ರದುರ್ಗ ಇಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ  ವಿನಿಮಯ ಕಚೇರಿ ಚಿತ್ರದುರ್ಗ ಹಾಗೂ ದೂರವಾಣಿ ಸಂಖ್ಯೆ 8073037905, 8105619020, 7022459064 ಅನ್ನು ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours