ಹಿರಿಯೂರು ರೋಟರಿ ವತಿಯಿಂದ ವೀಲ್ ಚೇರ್ ವಿತರಣೆ

 

ಹಿರಿಯೂರು: ಇಲ್ಲಿನ ರೋಟರಿ ಸಂಸ್ಥೆಯವರು ಮಂಗಳವಾರ ನೆಹರೂ ಮೈದಾನದಲ್ಲಿರುವ ರೋಟರಿ ಸಭಾ ಭವನದಲ್ಲಿ ನಂಜಯ್ಯನ ಕೊಟ್ಟಿಗೆ ಅನಾಥಾಶ್ರಮದ ಬುದ್ದಿ ಮಾಂದ್ಯ ವಿಕಲ ಚೇತನೋರ್ವ ಬಾಲಕನಿಗೆ ವೀಲ್ ಚೇರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸಂಸ್ಥೆಯ ಅದ್ಯಕ್ಷ ಹೆಚ್. ಕಿರಣ್ ಕುಮಾರ್,ಬಾಲಕ ಈರಣ್ಣ ಅನಾಥ ಮಗುವಾಗಿದ್ದು ನಗರದ ನಂಜಯ್ಯನ ಕೊಟ್ಟಿಗೆಯ ಅನಾಥಾಶ್ರಮದಲ್ಲಿ ಆಸರೆ ಪಡೆದಿದ್ದು ಬಾಲಕ ಬುದ್ದಿಮಾಂದ್ಯನಾಗಿದ್ದು ಕೈ ಕಾಲುಗಳು ಸ್ವಾಧೀನ ಕಳೆದು ಹೋಗಿರುತ್ತವೆ ಪ್ರತಿ ಕೆಲಸಕ್ಕೂ ಆ ಬಾಲಕನಿಗೆ ಒಬ್ಬನ ನೆರವಿನ ಅವಶ್ಯಕತೆ ಇತ್ತು ಎಂದು ಅನಾಥಾಶ್ರಮದ ನಿರ್ವಾಹಕರು ತಿಳಿಸಿದ್ದರಿಂದ ಆ ಬಾಲಕನಿಗೆ ನೆರವಾಗಲೆಂದೇ ರೋಟರಿ ಸಂಸ್ಥೆಯ ವತಿಯಿಂದ ವೀಲ್ ಚೇರ್ ನೀಡಲಾಯಿತು ” ಎಂದರು.
ನಿರಾಶ್ರಿತ,ಬುದ್ದಿ ಮಾಂದ್ಯ, ವಿಕಲಚೇತನರಿಗೆ ಬರೀ ಅನುಕಂಪ ತೋರದೇ ಅವಶ್ಯಕತೆಗೆ ಅನುಗುಣವಾಗಿ ಸಹಾಯ ಮಾಡುವ ಮನಸ್ಸು ಪ್ರತಿಯೊಬ್ಬರೂ ಬೆಳಸೆಕೊಳ್ಳಬೇಕು ” ಎಂದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಎ.ರಾಘವೇಂದ್ರ ಮಾತನಾಡಿ ” ಪ್ರಸ್ತುತ ವರ್ಷದಲ್ಲಿ ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದು ರೋಟರಿ ಪದಾಧಿಕಾರಿಗಳು ಹಾಗೂ ದಾನಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ನಡೆಸಲಾಗುವುದು ” ಎಂದರು.
” ಸಮಾಜದ ಎಲ್ಲಾ ಸ್ತರದ ಜನಗಳಿಗೂ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ರೋಟರಿ ಸಂಸ್ಥೆಯು ಸೇವೆ ಒದಗಿಸಲು ರೂಪು ರೇಷೆಗಳನ್ನು ಸಿದ್ದಪಡಿಸಲಾಗಿದೆ ” ಎಂದರು.
“ಕೊರೊನಾ ಅಂತ ವಿಷಮ ಸ್ಥಿತಿಯಲ್ಲಿಯೂ ರೋಟರಿ ಸಂಸ್ಥೆಯು ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ನಾಗರೀಕರಿಗೆ ಒದಗಿಸಲಾಗಿತ್ತು ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಎಂ.ಎಸ್ ರಾಘವೇಂದ್ರ,ಚಂದ್ರಹಾಸ್ ಪದ್ಮಸಾಲಿ,ಹೆಚ್. ವೆಂಕಟೇಶ್,ಪರಮೇಶ್, ಶಿವಕುಮಾರ್ ಮತ್ತಿರರು ಇದ್ದರು.

[t4b-ticker]

You May Also Like

More From Author

+ There are no comments

Add yours