ರಾಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

 

ಚಳ್ಳಕೆರೆ : ಹೆಚ್ ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಬಳ್ಳಾರಿ ಕಾಲೇಜಿಗೆ ವರ್ಗವಾಣೆಯಾದ ಉಪನ್ಯಾಸಕರಾದ ಕವಿತಾ ಅವರಿಗೆ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ಮಂಗಳವಾರ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು..

ಪ್ರಾಧ್ಯಾಪಕಿ ಕವಿತಾ ಮಾತನಾಡಿ ಕಾಲೇಜು ಬಿಟ್ಟು ಹೋಗಲಿ ಇಷ್ಟವೇ ಇಲ್ಲ, ಆದರೆ ಸರ್ಕಾರ ವರ್ಗಾವಣೆ ಮಾಡಿದ ಮೇಲೆ ಸರ್ಕಾರ ನಿಗಧಿ ಪಡಿಸಿದ ಸ್ಥಳಕ್ಕೆ ಹೋಗಿ ಸೇವೆ ಸಲ್ಲಿಸುತ್ತೇನೆ, ನಾನು ಇಷ್ಟು ದಿನ ಸೇವೆ ಸಲ್ಲಿಸಿದ ಹೆಚ್ ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರೂ ಕಾಲೇಜಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.
ಪಾಂಶುಪಾಲರಾದ ಪ್ರೊ. ಶಿವಲಿಂಗಪ್ಪ ಮಾತನಾಡಿ ಮೇಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡಬೇಕು. ಸರ್ಕಾರ ಎಲ್ಲಿಗೆ ವರ್ಗವಾಣೆ ಮಾಡುತ್ತಾರೆ ಅಲ್ಲಿಗೆ ಹೋಗಬೇಕು, ಯಾರು ಕೂಡ ಇಲ್ಲೆ ಸೇವೆ ಸಲ್ಲಿಸುತ್ತೇವೆ ಅಂದುಕೊಳ್ಳುವಂತಿಲ್ಲ. ಯಾವುದೇ ಸಮಯದಲ್ಲೂ ಬೇಕಾದರೂ ಸರ್ಕಾರ ಯಾರನ್ನುಬೇಕಾದರೂ ವರ್ಗಾವಣೆ ಮಾಡಬಹುದು ಎಂದು ಹೇಳಿದ ಅವರು ಉಪನ್ಯಾಸಕರಾದ ಕವಿತಾ ಅವರು ಕಾಲೇಜಿನಲ್ಲಿ ಉತ್ತಮವಾದ ಸೇವೆ ಸಲ್ಲಿಸಿದ್ದಾರೆ, ಈಗ ಬಳ್ಳಾರಿ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ ಮುಂದಿನ ದಿನಗಳಲ್ಲಿ ಮತ್ತೆ ಇಲ್ಲಿಗೆ ವರ್ಗವಾಣೆಯಾಗಿ ಬಂದು ಇಲ್ಲಿಯೇ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೋ. ಚಿತ್ತಯ್ಯ, ನಾಗಭೂಷಣ್, ರಾಜೇಶ್ವರಿ, ರಘುನಾಥ್, ಗ್ರಂಥಾಪಾಲಕ ಎಸ್ . ಪಾಪಣ್ಣ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳಿ ಇದ್ದರು.

[t4b-ticker]

You May Also Like

More From Author

+ There are no comments

Add yours