ಸಿಎಂ ಬೊಮ್ಮಾಯಿ ರಾಜ್ಯ ಪ್ರವಾಸದ ನಂತರ ದೆಹಲಿಗೆ ಡೆಟ್ ಫಿಕ್ಸ್ ಮಾಡಿಕೊಂಡಿದ್ದೇಕೆ ಗೊತ್ತೆ?

 

ಬೆಂಗಳೂರು ಏಪ್ರಿಲ್-13 : ಈ ತಿಂಗಳು  29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ   ಯಾತ್ರೆ  ಕೈಗೊಂಡಿರುವುದರಿಂದ ಹಲವು ತಿಂಗಳಿಂದ  ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ದು ಮಾಡುತ್ತಿದೆ.

ಕಳೆದ ತಿಂಗಳು  ಸಿಎಂ ದೆಹಲಿಗೆ ತೆರಳಿದ್ದರೂ ಸಂಪುಟ ವಿಸ್ತರಣೆ ಕುರಿತಾಗಿ ದೆಹಲಿ ವರಿಷ್ಠರಿಂದ ಯಾವುದೇ ಸ್ಪಷ್ಟ ಸಂದೇಶ ಸಿಕ್ಕಿರಲಿಲ್ಲ.  ಕಳೆದ ವಾರ ಹೊಸಪೇಟೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಚರ್ಚಿಸಿದ್ದಾಗ ದೆಹಲಿಗೆ ಬುಲಾವ್ ನೀಡಿದ್ದರು.

ಸ್ವಾವಲಂಬಿ ಜೀವನ ನಡೆಸಲು ವಿಕಲಚೇನರಿಗೆ ಯಂತ್ರಚಾಲಿತ ದ್ವಿಚಕ್ರ ವಿತರಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಈ ತಿಂಗಳು  29ರಂದು ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಭೆ ನಡೆಯಲಿದೆ. ಇದರಲ್ಲಿ ಬೊಮ್ಮಾಯಿ ಅವರು ಕೂಡ ಭಾಗಿಯಾಗಲಿದ್ದಾರೆ. ದೆಹಲಿಗೆ ತೆರಳಿದ ವೇಳೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯವನ್ನು ಪ್ರತಿನಿಸುವ ಕೇಂದ್ರ ಸಚಿವರನ್ನು ಸಹ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

 

ತಿಂಗಳ ಅಂತ್ಯಕ್ಕೆ ಸಂಪುಟ ಪುನಾರಚನೆಯಾಗುವುದು ಬಹುತೇಕ ಖಚಿತವಾಗಿದ್ದು, ಖಾಲಿ ಉಳಿದಿರುವ ಐದು ಸ್ಥಾನಗಳ ಜೊತೆಗೆ ಹಾಲಿ ಸಂಪುಟದಲ್ಲಿರುವ ಕೆಲವು ಹಿರಿಯರನ್ನು(6ರಿಂದ 8) ಕೈಬಿಟ್ಟು ಪಕ್ಷ ನಿಷ್ಠೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಕುರಿತು ಚರ್ಚೆ ನಡೆಯಲಿದೆ.

ವಿಧಾನಸಭಾ ಚುನಾವಣೆಗೆ ಒಂದೇ ವರ್ಷ ಇರುವುದರಿಂದ ಈ ಬಾರಿ ದೊಡ್ಡ ಮಟ್ಟದಲ್ಲಿ ಪುನಾರಚನೆಯಾಗಲಿದೆ ಎಂಬ ಮಾತಿದೆ ಎನ್ನುತ್ತದೆ ಪಕ್ಷದ ಮೂಲಗಳು.
ಕಳೆದ ಹಲವು ತಿಂಗಳಿನಿಂದ ಹಲವಾರು ಶಾಸಕರು ಸಂಪುಟ ಪುನಾರಚನೆಯಾಗಬೇಕೆಂದು ಒತ್ತಡ ಹಾಕಿದ್ದರು. ಪದೇ ಪದೇ ಅಧಿಕಾರವನ್ನು ಅನುಭವಿಸಿರುವವರಿಗೆ ಕೋಕ್ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾದೇಶಿಕತೆ, ಹಿರಿತನ, ಜಾತಿ ಆಧಾರವಾಗಿಟ್ಟುಕೊಂಡು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಕೆಲವರು ಆಗ್ರಹಿಸಿದ್ದರು.

ಇದೆಲ್ಲವನ್ನು ಸಿಎಂ ವರಿಷ್ಠರ ಗಮನಕ್ಕೆ ತಂದು ಮೇ ತಿಂಗಳ ಅಂತ್ಯದೊಳಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಿಎಂ ಬೊಮ್ಮಾಯಿ ಸಂಪುಟದಲ್ಲಿರುವ 6ರಿಂದ 8 ಹಿರಿಯ ಸಚಿವರು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಇನ್ನೊಂದು ಮೂಲದ ಪ್ರಕಾರ ಗುಜರಾತ್ ಮಾದರಿಯಲ್ಲಿ ಸಿಎಂ ಹೊರತುಪಡಿಸಿ ಇಡೀ ಸಂಪುಟವನ್ನೇ ಪುನಾರಚನೆ ಮಾಡಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆದು ಸಂಪುಟದಲ್ಲಿರುವ ಎಲ್ಲರ ಸಚಿವರಿಂದ ರಾಜೀನಾಮೆ ಪಡೆದು ಹೊಸದಾಗಿ ಪುನಾರಚನೆ ಮಾಡುವ ಸಂಭವವೂ ಹೆಚ್ಚಾಗಿದೆ.

ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದಿರುವ ವಲಸಿಗರನ್ನು ಕೈ ಬಿಡದೆ ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆಯೂ ಇದೆ. ಅವರನ್ನು ಕೈಬಿಟ್ಟರೆ ತಪ್ಪು ಸಂದೇಶ ರವಾನೆಯಾಗಲಿದ್ದು, ನಾಳೆ ರವಾನೆಯಾಗಲಿದ್ದು, ನಾಳೆ ಬಿಜೆಪಿಗೆ ಬರುವವರು ಹಿಂದೆಮುಂದೆ ನೋಡುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಹೀಗಾಗಿ ಅನಿವಾರ್ಯವಾಗಿ ವಲಸೆ ಬಂದವರನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸಿಎಂಗಿದೆ. ಸಾಧ್ಯವಾದರೆ ಮೂರ್ನಾಲ್ಕು ಜನರನ್ನು ಮಾತ್ರ ಕೈಬಿಟ್ಟು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬಹುದು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಪಡೆಯಲು ಸುಮಾರು ಮೂರು ಡಜನ್ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಅಂತಿಮವಾಗಿ ಯಾರಿಗೆ ಲಕ್ ಯಾರಿಗೆ ಅನ್ ಲಕ್ ಎಂದು ದೆಹಲಿಯಿಂದ ಬಂದ ನಂತರ ಎಲ್ಲಾವೂ ತಿಳಿಯಲಿದೆ.

[t4b-ticker]

You May Also Like

More From Author

+ There are no comments

Add yours