ಸಿಹಿ ಸುದ್ದಿ: ಮುಖ್ಯಮಂತ್ರಿ ರೈತ ವಿದ್ಯಾನಿಧಿಯಿಂದ ರೈತರ ಮಕ್ಕಳ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ .

 

ಚಿತ್ರದುರ್ಗ, ಫೆಬ್ರವರಿ 24:
ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪೋತ್ಸಾಹಿಸಲು ಹೊಸ ಶಿಷ್ಯವೇತನ (Sಛಿhoಟoಡಿshiಠಿ) ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿರುತ್ತದೆ.
ರಾಜ್ಯದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‍ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benefit Transfer DBT)  ಪದ್ಧತಿಯ ಮೂಲಕ ರೂ.2000 ರಿಂದ ರೂ. 11000 ರವರಿಗೆ 2021-22 ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿರುತ್ತದೆ.
2021ರ ಡಿಸೆಂಬರ್ 10 ರ ಸರ್ಕಾರದ ಮಾರ್ಪಾಡು ಮಾಡಿರುವ ಆದೇಶದ ಪ್ರಕಾರ ರಾಜ್ಯದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪೂರ್ವ ಶಿಕ್ಷಣದಿಂದ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ ಸಹಾ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಪಡೆಯಲು ಅರ್ಹರಾಗಿರುತ್ತಾರೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಪ್ರೌಢ ಶಿಕ್ಷಣ (8 ರಿಂದ 10 ನೇ ತರಗತಿವರೆಗೆ) ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ 2021-22 ನೇ ಆರ್ಥಿಕ ವರ್ಷದಿಂದ ವಾರ್ಷಿಕವಾಗಿ ರೂ.2000/- ಗಳು ವಿದ್ಯಾರ್ಥಿವೇತನ ಸೌಲಭ್ಯ ವಿಸ್ತರಣೆ ಮಾಡಲಾಗಿದೆ.
2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿ ಪೂವ ಶಿಕ್ಷಣ ಕೋರ್ಸ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ SATS ID  ಮತ್ತು FID ಅನ್ವಯ ಅರ್ಹರನ್ನು ಗುರುತಿಸಿ ಪಾವತಿಸಲಾಗಿರುತ್ತದೆ.
ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ಮಾಡುತ್ತಿರುವ ಎಲ್ಲಾ ರೈತರ ಮಕ್ಕಳು ಜಾಲತಾಣದಲ್ಲಿ https://ssp.postmatric.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು.
ಶಿಷ್ಯವೇತನವನ್ನು ಪಡೆಯಲು ತಮ್ಮ ಹೆಸರಿಗೆ ಬ್ಯಾಂಕ್ ಖಾತೆ ಹೊಂದಿಲ್ಲದ ಅರ್ಹ ವಿದ್ಯಾರ್ಥಿಗಳು ತಮ್ಮ ಹೆಸರಿಗೆ ಬ್ಯಾಂಕ್ ಖಾತೆಯನ್ನು ತೆರೆಯುವುದರ ಜೊತೆಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಮಾಡಿಸಬೇಕು, ಮತ್ತುNPCI Mapping  ಮಾಡಿಸಿಕೊಳ್ಳದ ವಿದ್ಯಾರ್ಥಿಗಳು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಓPಅI ಒಚಿಠಿಠಿiಟಿg ಮಾಡಿಸಿಕೊಳ್ಳುವುದು, ಅರ್ಹ ವಿದ್ಯಾರ್ಥಿಗಳ ತಂದೆ ಅಥವಾ ತಾಯಿಯ ಹೆಸರಿಗೆ ಜಮೀನು’ ಇದ್ದು ರೈತರ ಗುರುತಿನ ಸಂಖ್ಯೆ (ಈIಆ) ಇಲ್ಲದವರು ಈIಆ ನೋಂದಣಿ ಮಾಡಲು ಹತ್ತಿರದ ಕೃಷಿ ಇಲಾಖೆಯ ರೈತರ ಸಂಪರ್ಕಕೇಂದ್ರದಲ್ಲಿ ಸಂಪರ್ಕಿಸಬೇಕು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ನೀಡಲಾಗುವ ವಾರ್ಷಿಕ ಶಿಷ್ಯ ವೇತನದ ವಿವರ ಪ್ರೌಢ ಶಿಕ್ಷಣ (8 ರಿಂದ 10ನೇ ತರಗತಿ) ವಿದ್ಯಾರ್ಥಿಗಳಿಗೆ 2000 ರೂ ಹೆಣ್ಣು ಮಕ್ಕಳಿಗೆ ಮಾತ್ರ ಹಾಗೂ ಪಿ.ಯು.ಸಿ  ಐ.ಟಿ.ಐ ಡಿಪ್ಲೋಮಾ  ವಿದ್ಯಾರ್ಥಿಗಳಿಗೆ 2500 ಹಾಗೂ ವಿದ್ಯಾರ್ಥಿನಿಯರು, ಅನ್ಯಲಿಂಗದ ವಿದ್ಯಾಥಿಗಳಿಗೆ ರೂ. 3000 ರೂ, ಮತ್ತು ಬಿ.ಎ. ಬಿ.ಎಸ್ಸಿ  ಬಿ.ಕಾಂ ಎಂ.ಬಿ.ಬಿ.ಎಸ್  ಬಿ.ಇ, ಬಿ.ಟಿಕ್ ಮತ್ತು ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ರೂ. 5000 ರೂ ಹಾಗೂ ವಿದ್ಯಾರ್ಥಿನಿಯರು, ಅನ್ಯಲಿಂಗದ ವಿದ್ಯಾರ್ಥಿಗಳಿಗೆ 5500 ಮತ್ತು ಎಲ್.ಎಲ್.ಬಿ ಪ್ಯಾರಾಮೆಡಿಕಲ್, ಬಿಫಾರ್ಮ್, ನರ್ಸ್‍ರಿ, ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ¥ ವಿದ್ಯಾರ್ಥಿಗಳಿಗೆ 7500 ರೂ ಹಾಗೂ ವಿದ್ಯಾರ್ಥಿನಿಯರು, ಅನ್ಯಲಿಂಗದವರಿಗೆ 8000 ರೂಗಳು ಮತ್ತು  ಎಂ.ಬಿ.ಬಿ.ಎಸ್, ಬಿ.ಇ, ಬಿ.ಟೆಕ್, ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳ ವಿದಾರ್ಥಿಗಳಿಗೆ 10000 ರೂ ಹಾಗೂ ವಿದ್ಯಾರ್ಥಿನಿಯರು ಅನ್ಯಲಿಂಗಸವರಿಗೆ 11000 ರೂ ವರೆಗೆ ರೈತರ ಮಕ್ಕಳಿಗೆ ವಿದ್ಯಾನಿಧಿ ವೇತನ ನೀಡಲಾಗುವುದು.
ಪುನಾರವರ್ತಿತ ವಿದ್ಯಾಥಿಗಳು  ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
=======

[t4b-ticker]

You May Also Like

More From Author

+ There are no comments

Add yours