ರೈತರೆ ಗ್ರಾಮದ ಜಮೀನಿನ ಬೋರ್ ವೇಲ್ ನ ವಿದ್ಯತ್ ಉಪಕರಣ ಕಳವು

 

ನಾಗತೀಹಳ್ಳಿ ಗ್ರಾಮದ ಜಮೀನಿನ‌ ಬೋರ್ ವೇಲ್ ಗೆ ಆಳವಡಿಸಿದ್ದ ವಿದ್ಯುತ್ ಉಪಕರಣ ಕಳವು

ಹೊಸದುರ್ಗದ ಮಾಡದಕೆರೆ ಸಮೀಪದ ನಾಗತೀಹಳ್ಖಿ ಗ್ರಾಮದಲ್ಲಿ ಬೋರ್ ವೆಲ್ ಗೆ ಅಳವಡಿಸಲಾಗಿದ್ದ ಸುಮಾರು 5ರಿಂದ 6 ಸಾವಿರ ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳರು ಕದ್ದೊಯ್ದದಿರುವ ಪ್ರಕರಣ ಮಂಗಳವಾರ ತಡರಾತ್ರಿ ನಡೆದಿದೆ…..

ಇನ್ನೂ ನಾಗತಿಹಳ್ಳಿ ಗ್ರಾಮದ ಹೊರವಲಯದಲ್ಲಿ ಎನ್.ಕೆ ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ದಾಳಿಂಬೆ ಬೆಳೆ ಹಾಕಿದ್ದರಿಂದ ಬೋರ್ ವೆಲ್ ಕೊರೆಯಿಸಲಾಗಿತ್ತು. ದಾಳಿಂಬೆಯಿಂದ ನಷ್ಟ ಅನುಭವಿಸಿದ ರೈತ ಅಡಿಕೆ ಹಾಗೂ ತೆಂಗು ಹಾಕಿದ್ದರು. ಇವುಗಳಿಗೆ ನೀರು ಎತ್ತುವ ಸಲುವಾಗಿ ಬೋರ್ ವೆಲ್ ಗೆ ಹೊಂದಿಕೊಂಡಂತೆ ಕಬ್ಬಿಣದ ಪೆಟ್ಟಿಗೆಯೊಳಗಿದ್ದ ಸ್ಟಾರ್ಟಬೋರ್ಡ್ (stater board) ಗಳನ್ನು ಕಳವು ಮಾಡಿದ್ದು, ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*

[t4b-ticker]

You May Also Like

More From Author

+ There are no comments

Add yours