ಸಿಹಿ ಸುದ್ದಿ : ಒಮಿಕ್ರಾನ್ ಕುರಿತು ವಿಜ್ಞಾನಿಗಳು ಹೇಳಿದ್ದೇನು.

 

ನವದೆಹಲಿ,ಡಿ.12 : ವಿಶ್ವದ ಹಲವೆಡೆ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಭಾರಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಈ ಸೋಂಕು ತಗುಲಿರುವುದನ್ನು ಕೇವಲ 2 ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್‌ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಆರ್) ಅಭಿವೃದ್ಧಿಪಡಿಸಿದೆ.
ಸೋಂಕಿತರ ಮಾದರಿಗಳಿಂದಲೇ ಕೆಲವೇ ಗಂಟೆಗಳಲ್ಲಿ ಒಮಿಕ್ರಾನ್ ಪತ್ತೆ ಮಾಡುವ ಕಿಟ್ ಇದಾಗಿದೆ. ಈಶಾನ್ಯ ಪ್ರಾಂತ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಈ ಕಿಟ್‌ನ್ನು ಅವಿಷ್ಕಾರಗೊಳಿಸಿದೆ.
ಸಂಗ್ರಹಿಸಿದ ಮಾದರಿಯಲ್ಲೇ ಒಮಿಕ್ರಾನ್ ವೈರಾಣು ತಳಿ ಇರುವುದನ್ನು ಪತ್ತೆ ಮಾಡಬಹುದಾಗಿದೆ. ವಿಜ್ಞಾನಿ ಡಾ. ಬಿಸ್ವಜ್ಯೋತಿ ಬೊರ್ಕಕೋತಿ ಅವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ ದೇಶದಲ್ಲಿ 33 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.
ಒಮಿಕ್ರಾನ್ ತಳಿಯ ಪತ್ತೆಗಾಗಿ ದಿಬ್ರೂಘಡದ ಐಸಿಎಂಆರ್ – ಆರ್‌ಎಂಆರ್‌ಸಿ ಒಮಿಕ್ರಾನ್ ತಳಿಯ ಪತ್ತೆಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಯ ಕಿಟ್‌ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿಜ್ಞಾನಿ ಡಾ. ಬಿಸ್ವಜ್ಯೋತಿ ತಿಳಿಸಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೊಲ್ಕತ್ತ ಮೂಲದ ಜಿಸಿಸಿ ಬಯೋಟೆಕ್ ಕಂಪನಿಯು ಈ ಕಿಟ್‌ನ್ನು ಉತ್ಪಾದಿಸುತ್ತಿದೆ. ಶೇ. 100 ರಷ್ಟು ಫಲಿತಾಂಶ ನಿಖರವಾಗಿ ದೊರೆತಿರುವುದು ಪರಿಶೀಲನೆಗಳಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಈ ವಿಜ್ಞಾನಿಗಳ ತಂಡ ಕಳೆದ ವರ್ಷ ಜುಲೈನಲ್ಲಿ ಕೊರೊನಾ ವೈರಸ್‌ನ್ನು ಅತ್ಯಂತ ಯಶಸ್ವಿಯಾಗಿ ಪ್ರತ್ಯೇಕ ಮಾಡಿತ್ತು. ಈ ವಿನೂತನ ಸಾಧನೆ ಮಾಡಿದ ದೇಶದ 3ನೇ ಪ್ರಯೋಗಾಲಯ ಎಂಬ ಕೀರ್ತಿಗೆ ದಿಬ್ರೂಘಡದ ಐಸಿಎಂಆರ್ – ಆರ್‌ಎಂಆರ್‌ಸಿ ಭಾಜನವಾಗಿತ್ತು.

[t4b-ticker]

You May Also Like

More From Author

+ There are no comments

Add yours