ನಾಲ್ಕು ವಿದ್ಯಾರ್ಥಿಗಳಿಗೆ ಕೋವಿಡ್ ದೃಢ, ಶಾಲೆ ಸಿಲ್ ಡೌನ್

 

ದಾವಣಗೆರೆ,ಡಿ.12- ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಳಿಯ ಜವಾಹರ್ ನವೋದಯ ವಿದ್ಯಾನಿಲಯದ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ 4882 ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ  3667 ವಿದ್ಯಾರ್ಥಿಗಳಿಗೆ ನೆಗೆಟೀವ್ ವರದಿ ಬಂದಿದೆ. ಉಳಿದ 1,215 ವಿದ್ಯಾರ್ಥಿಗಳ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ವಿವರಿಸಿದ್ದಾರೆ.ನವೋದಯ ಶಾಲೆಯ 25 ಮಂದಿ ಸಿಬ್ಬಂದಿ ಸೇರಿ 539 ಜನರ ಗಂಟಲದ್ರವವನ್ನು ಸಂಗ್ರಹಿಸಲಾಗಿದೆ. ಸೋಂಕು ತಗುಲಿರುವ ನಾಲ್ವರು ವಿದ್ಯಾರ್ಥಿಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ. ಉಳಿದ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ವರದಿ ಸಂಜೆಯ ವೇಳೆಗೆ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.ರಾಜ್ಯದಲ್ಲಿ ನಿನ್ನೆ 320 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷ ಗಡಿ ದಾಟಿದೆ. 29,54,513 ಜನರು ಗುಣಮುಖರಾಗಿದ್ದಾರೆ. ನಿನ್ನೆ ಇಬ್ಬರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 38,257ಕ್ಕೆ ಏರಿಕೆಯಾಗಿದೆ.

[t4b-ticker]

You May Also Like

More From Author

+ There are no comments

Add yours