ಸರ್ಕಾರಿ ಶಾಲೆಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿ ಮಾದರಿಯಾದ ಉಮೇಶ್ ಗೌಡ.

 

ನಾಯಕನಹಟ್ಟಿ: ಚಳ್ಳಕೆರೆ ತಾಲೂಕಿನ  ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು  ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ದತ್ತು ಪಡೆದ ಪಿಎಚ್ ಡಿ  ಪದವೀಧರ ಉಮೇಶ್ ಗೌಡ  ಸಮಸ್ಯೆಯನ್ನು ಬಗೆಹರಿಸಿ ಬೇರೆಯವರಿಗೆ ಸರ್ಕಾರಿ ಶಾಲೆ ಬಗ್ಗೆ ಪ್ರೇರಣೆ ಹೊಂದಲು ಸಹಕಾರಿಯಾಗಿದ್ದಾರೆ.

ಈ ಮೂಲಕ ಮಾತನಾಡಿದ ಅವರು ಶಾಲೆಗೆ ನೀರಿನ ಸಮಸ್ಯೆ ಬಂದು ಹಲವು ವರ್ಷಗಳು ಆಗಿದ್ದು   ಇದನ್ನು ನಾನು ಬಗೆಹರಿಸಿದ್ದೇನೆ, ಈ ಶಾಲೆಯಲ್ಲಿ ಇನ್ನು ಕೆಲವು ಕೆಲಸ ಮಾಡುವುದು ಬಾಕಿ ಇವೆ.ಶೌಚಾಲಯ ವ್ಯವಸ್ಥೆಯು ಸಹ ಇಲ್ಲ ಇದನ್ನು ಸಹ  ತರಗತಿಗಳು ಪ್ರಾರಂಭ ಆಗುವುದರೊಳಗೆ  ಮುಗಿಸಿ ಕೊಡುತ್ತೇನೆ. ಗಿಡಮರ ಎಲ್ಲಾ ಇದಾವೆ ಇನ್ನು 50 ಸಸಿ ಹಾಕುವ ಕಾರ್ಯವನ್ನು ಸಹ ಮಾಡ್ತೀವಿ. ಶಾಲೆ ಆರಂಭವಾದ ನಂತರ ವಿದ್ಯಾರ್ಥಿಗಳಿಗೆ  ಪೆನ್,ನೋಟ್ ಬುಕ್ಸ್ ಸಹ ತರಗತಿ ಪ್ರಾರಂಭ ಆದ ಮೇಲೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಒಟ್ಟಿನಲ್ಲಿ ಹೀಗೆ ಅನೇಕ ಹಳೆಯ ವಿದ್ಯಾರ್ಥಿಗಳು ಒಂದು ಹಂತಕ್ಕೆ ಬಂದಾಗ ಅನುಕೂಲಕ್ಕೆ ತಕ್ಕಂತೆ ತಮ್ಮ ಊರಿನ ಶಾಲೆಗಳ ಕಡೆ ಗಮನ ಹರಿಸಿದರೆ ಶಾಲೆಗಳ ಸಮಸ್ಯೆಗಳಿಗೆ ಒಂದಿಷ್ಟು ಅನುಕೂಲವಾಗುತ್ತದೆ ಮತ್ತು  ಇಂತಹ ಕಾರ್ಯ  ಮಾಡಿ ಉಮೇಶ್ ಗೌಡ ಮಾದರಿಯಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours