ಕೋವಿಡ್ ಗೆ ಬಲಿಯಾದ ಪರಿಶಿಷ್ಟ ಪಂಗಡ ಕುಟುಂಬಕ್ಕೆ ಸಹಾಯಧನ ಮತ್ತು ಸಾಲ ನೀಡಿ ಸರ್ಕಾರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದೆ: ಮಹಂತೇಶ್ ನಾಯಕ.

 

ಚಿತ್ರದುರ್ಗ: ಕೋವಿಡ್ ನಿಂದ ಮೃತಪಟ್ಟ  ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಕೋವಿಡ್ 19 ರೋಗಿಗಳಿಗೆ 5 ಲಕ್ಷದವರೆಗೆ ನೇರಸಾಲ ಹಾಗೂ ಸಹಾಯಧನ ಮಂಜೂರು ಮಾಡಿ ಕಷ್ಟದಲ್ಲಿರುವ ಕುಟುಂಬವನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡಿದೆ  ಎಂದು  ರಾಜ್ಯ ಎಸ್.ಟಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಂತೇಶ್ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಮಹಾಮಾರಿಯು ದೇಶವ್ಯಾಪಿ ಜನರನ್ನು ಪೀಡಿಸುತ್ತಿದ್ದು ಅನೇಕ ಸಾವು-ನೋವುಗಳು ಸಂಭವಿಸಿದೆ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಕೋವಿಡ್ ಮೃತಪಟ್ಟ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ರೋಗಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ರೋಗಿಯ ಕುಟುಂಬದಲ್ಲಿ ನಿಯಮಾನುಸಾರ ಅರ್ಹರಿರುವ ವ್ಯಕ್ತಿಗೆ ಸ್ವಯಂ ಉದ್ಯೋಗ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಂದ ತರಬೇತಿ ಪಡೆದ ಪರೀಕ್ಷೆಗೆ ಸಣ್ಣ ಮತ್ತು ಮಧ್ಯಮ ಹಾಗೂ ಉದ್ಯಮ ಹಾಗೂ ಲಾಭದಾಯಕ ಹಾರ್ದಿಕ ಚಟುವಟಿಕೆಯನ್ನು ಕೈಗೊಂಡು ಕುಟುಂಬ ನಿರ್ವಹಣೆ ಮಾಡುವ ಸಂಬಂಧ ವಿಶೇಷ ಪ್ಯಾಕೇಜನ್ನು ಘೋಷಿಸಲಾಗಿದ್ದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಮಂತ್ರಾಲಯ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡ ಹಣಕಾಸು ಅಭಿವೃದ್ಧಿ ನಿಗಮ ದಿಂದ ಸೇರಿ ಒಟ್ಟು 5 ಲಕ್ಷದವರೆಗೆ ನಿಗಮ ದಿಂದಲೇ ನೇರವಾಗಿ ಸಾಲ ಹಾಗೂ ಸಹಾಯಧನ ಮಂಜೂರು ಮಾಡುವ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಿ ರುವುದು ಸಂತೋಷದ ಸಂಗತಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಈ ರೀತಿಯ ನೇರ ಸಾಲ ಮತ್ತು ಸಹಾಯಧನ ದೊರಕಿಸಿಕೊಡಲು ಕಾರಣೀಕರ್ತರಾದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ರಾಮಚಂದ್ರಪ್ಪ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours