ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹಬ್ಬಕ್ಕೆ ನೀಡುತ್ತಿದ್ದ ಮುಂಗಡ ಹಣ 10 ಸಾವಿರದಿಂದ 25 ಸಾವಿರಕ್ಕೆ ಏರಿಕೆ

 

ಬೆಂಗಳೂರು : ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಹಬ್ಬಕ್ಕಾಗಿ ನೀಡುತ್ತಿದ್ದ ಮುಂಗಡವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದೆ.

ಈ ಕುರಿತು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ‘ರಾಜ್ಯ ಸಿವಿಲ್‌ ಸೇವಾ ವೃಂದದಲ್ಲಿ ಖಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ ಖಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ ಮಾತ್ರ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಬಡ್ಡಿ ರಹಿತ ಹಬ್ಬದ ಮುಂಗಡವನ್ನ ತಕ್ಷಣದಿಂದ ಜಾರಿಗೆ ಬರುವಂತೆ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿ ಆದೇಶಿಸಿದೆ’ ಎಂದು ತಿಳಿಸಿದೆ.

ಅಂದ್ಹಾಗೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಬ್ಬದ ಮುಂಗಡ ಮೊತ್ತವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವಂತೆ ಕೋರಿತ್ತು. ಸಧ್ಯ ಈ ಮನವಿಗೆ ಸ್ಪಂದಿಸಿರುವ ಸರ್ಕಾರ 10 ತಿಂಗಳ ಅವಧಿಯಲ್ಲಿ ಮರು ಪಾವತಿಸಬಹುದಾದ ಬಡ್ಡಿ ರಹಿತ ಹಬ್ಬದ ಮುಂಗಡವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದೆ. ಇದಕ್ಕಾಗಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮನವಿ ಮೇರೆಗೆ  ರಾಜ್ಯದ ಮುಖ್ಯಮಂತ್ರಿಗಳಾದ  ಬಸವರಾಜ್ ಬೊಮ್ಮಾಯಿ* ರವರಿಗೆ ಮತ್ತು ತಮ್ಮ ಚಾಣಾಕ್ಷ ನಡೆಯಿಂದ ಹಿಡಿದ ಕಾರ್ಯ ಬಿಡದೆ ಸರ್ಕಾರಿ ಆದೇಶ ಮಾಡಿಸುತ್ತಿರುವ ರಾಜ್ಯಾಧ್ಯಕ್ಷರಾದ ಸನ್ಮಾನ್ಯ  ಸಿ ಎಸ್ ಷಡಾಕ್ಷರಿ ರವರಿಗೆ* ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ, ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಹಂತದ ಅಧಿಕಾರಿ ಮತ್ತು ನೌಕರರಿಗೆ ಧನ್ಯವಾದಗಳು ಎಂದು ಚಿತ್ರದುರ್ಗ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ  ಕೆ.ಮಂಜುನಾಥ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಜಿ ಆರ್, ಗೌರವಾಧ್ಯಕ್ಷರಾದ ಶಾಂತಪ್ಪ ಎಂ.ಆರ್ಜಯ್ಯಪ್ಪ , ಕೆ.ಟಿ. ತಿಮ್ಮಾರೆಡ್ಡಿ, ವೀರೇಶ್ ಹಾಗೂ ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ತಾಲ್ಲೂಕು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours