ವಿಧಾನ ಪರಿಷತ್ ಚುನಾವಣೆ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಬಿಜೆಪಿಯ ಕೆ.ಎಸ್. ನವೀನ್‍ಗೆ ಗೆಲವು,

 

ಚಿತ್ರದುರ್ಗ, ಡಿಸೆಂಬರ್14:
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಎಸ್. ನವೀನ್ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲೆ ಗೆಲವು ಸಾಧಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಮಂಗಳವಾರ ನಡೆದ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ನವೀನ್ ನವೀನ್ ಕೆ.ಎಸ್ ಅವರು 2629 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು 358 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಭಾರತೀಯ ಜನತಾ ಪಕ್ಷದ ನವೀನ್ ಕೆ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಸೇರಿದಂತೆ ಒಟ್ಟು ಮೂವರು ಅಭ್ಯರ್ಥಿಗಳು ಸ್ಪರ್ಧಾ ಕಣದಲಿದ್ದರು. ಇದರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನವೀನ್ ಕೆ.ಎಸ್ ಅವರಿಗೆ 2629 ಮತಗಳು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಅವರು 2271 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಅವರು 16 ಮತಗಳನ್ನು ಪಡೆದಿದ್ದಾರೆ ಎಂದರು.
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ಒಂದು ಸ್ಥಾನ ಇದ್ದು, ಚಲಾವಣೆಯಾದ ಒಟ್ಟು ಸಿಂಧುತ್ವ ಮತಗಳ ಪೈಕಿ ಶೇ.50+1 ಮತಗಳನ್ನು ಪಡೆಯಬೇಕು. ಒಟ್ಟು 5060 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 144 ಮತಗಳ ತಿರಸ್ಕøತಗೊಂಡು 4916 ಮತಗಳು ವ್ಯಾಲಿಡ್ ಆಗಿದ್ದವು. ವ್ಯಾಲಿಡ್ ಮತಗಳನ್ನು ಮಾತ್ರ ಗೆಲುವಿಗೆ ಪರಿಗಣಿಸಿ ನಮ್ಮ ಕೋಟಾ ಪ್ರಕಾರ 2459 ಮತಗಳು ಬರಬೇಕಿತ್ತು. ಆದರೆ ಗೆದ್ದ ಅಭ್ಯರ್ಥಿ ನವೀನ್ ಕೆ.ಎಸ್. ಅವರು 2629 ಮತಗಳನ್ನು ಪಡೆದಿದ್ದಾರೆ. ಹಾಗಾಗಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡುವ ಅವಶ್ಯಕತೆ ಬರಲಿಲ್ಲ ಎಂದು ಮಾಹಿತಿ ನೀಡಿದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯಯನ್ನು ಚುನಾವಣಾ ವೀಕ್ಷಕರಾದ ನವೀನ್ ರಾಜ್ ಸಿಂಗ್ ಉಪಸ್ಥಿತಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯವನ್ನು ಪ್ರಾರಂಭ ಮಾಡಲಾಯಿತು. ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಮತಗಟ್ಟೆಗಳ ಮತಪೆಟ್ಟಿಗೆ ತೆರೆದು ಮತಗಳ ಜೋಡಣೆ ಮಾಡಿಕೊಂಡು ಒಂದು ಬಂಡಲ್‍ಗೆ 25 ಮತಪತ್ರಗಳಿರುವ 202 ಬಂಡಲ್‍ಗಳನ್ನಾಗಿ ವಿಂಗಡಣೆ ಮಾಡಿ ಮತ ಎಣಿಕೆ ಕಾರ್ಯ ಮಾಡಲಾಯಿತು ಎಂದು ಹೇಳಿದರು.
144 ಮತಗಳ ತಿರಸ್ಕøತ: ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ಮತದಾನದಲ್ಲಿ ಚಲಾವಣೆಯಾದ 5060 ಮತಗಳಲ್ಲಿ 144 ಮತಗಳು ತಿರಸ್ಕøತಗೊಂಡಿವೆ.
ವಿಧಾನ ಪರಿಷತ್ ಚುನಾವಣೆಗೆ ಪ್ರಾಶಸ್ತ್ಯ ಪದ್ಧತಿಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೂ ಮೊದಲ ಪ್ರಾಶಸ್ತ್ಯದ ಮತ ಹಾಕಿರುವುದು, ಮೊದಲ ಪ್ರಾಶಸ್ತ್ಯ ನೀಡದೇ ಎರಡನೇ ಪ್ರಾಶಸ್ತ್ಯದ ಮತ ನೀಡಿರುವುದು, ಅಡ್ಡಗೆರೆ, ಮಾರ್ಕ್ ಹಾಕಿರುವುದು ಹಾಗೂ ಯಾರಿಗೂ ಸಹ ಪ್ರಾಶಸ್ತ್ಯ ಮತ ನೀಡಿಲ್ಲದೇ ಇರುವುದರಿಂದ 144 ಮತಗಳು ತಿರಸ್ಕøತಗೊಂಡಿವೆ.
18 ಮೇಲ್ವಿಚಾರಕರು ಹಾಗೂ 36 ಸಹಾಯಕರು ಮತ ಎಣಿಕೆ ಕಾರ್ಯವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಡಾ; ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪರಶುರಾಮ್ ಶಿನ್ನೋಳಕರ್, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಉಪಸ್ಥಿತರಿದ್ದರು.
=======

[t4b-ticker]

You May Also Like

More From Author

+ There are no comments

Add yours