ಉದ್ಯೋಗ ಮಾಹಿತಿ: 72 ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಸ್ಟೇಬಲ್ ಮತ್ತು ಕಾನ್ಸ್‌ಸ್ಟೇಬಲ್ ಉದ್ಯೋಗಕ್ಕಾಗಿ ಅರ್ಜಿ

 

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ಸೇನೆ ಸೇರಲು ಯೋಚಿಸುತ್ತಿರುವವರಿಗೆ ಶುಭ ಸುದ್ದಿ. ಹೌದು, ಗಡಿ ಭದ್ರತಾ ಪಡೆ ನಿಮ್ಮನ್ನ ಆಹ್ವಾನಿಸುತ್ತಿದೆ. 72 ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಸ್ಟೇಬಲ್ ಮತ್ತು ಕಾನ್ಸ್‌ಸ್ಟೇಬಲ್ ಉದ್ಯೋಗಕ್ಕಾಗಿ ಅರ್ಜಿಗಳನ್ನ ಸ್ವೀಕರಿಸುತ್ತಿದ್ದಾರೆ .

ಅರ್ಜಿ ಸ್ವೀಕಾರ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದ್ದು, ಡಿಸೆಂಬರ್ 29ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದಂತೆ ತ್ವರಿತವಾಗಿ ಅರ್ಜಿ ಸಲ್ಲಿಸಬಹುದು. ಇನ್ನು ಆಯ್ಕೆಯಾದವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಮತ್ತು ನಂತ್ರ ದೈಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕೃತಿ ಪ್ರಾರಂಭ ದಿನಾಂಕ : ನವೆಂಬರ್ 15
ಅರ್ಜಿ ಸ್ವೀಕೃತಿಯ ಕೊನೆಯ ದಿನಾಂಕ : ಡಿಸೆಂಬರ್ 29
ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಡಿಸೆಂಬರ್ 29
ಪರೀಕ್ಷಾ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಅರ್ಹತೆ, ವಯೋಮಿತಿ : ಬಿಎಸ್‌ಎಫ್ ಬಿಡುಗಡೆ ಮಾಡಿರುವ ಈ ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳು ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಇನ್ನು ಹೆಚ್ಚುವರಿಯಾಗಿ ಅಭ್ಯರ್ಥಿಗಳು ಐಟಿಐ ಪ್ರಮಾಣಪತ್ರವನ್ನ ಹೊಂದಿರಬೇಕು. ವಯಸ್ಸಿನ ವಿಚಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟವರಾಗಿದ್ದು, 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಇನ್ನು ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಇದೆ.

ಅರ್ಜಿ ಶುಲ್ಕ..!
ಸಾಮಾನ್ಯ, OBC, EWS ವರ್ಗದ ಅಭ್ಯರ್ಥಿಗಳು ರೂ.100 ಪಾವತಿಸಬೇಕು. SC, ST, ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ. ಇನ್ನು ಅರ್ಜಿ ಶುಲ್ಕವನ್ನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.

[t4b-ticker]

You May Also Like

More From Author

+ There are no comments

Add yours