ವಿಧಾನಸಭೆಗೆ ಹೋದರೆ ಬರೀ ಲಂಚದ ವಾಸನೆ: ಮಾಜಿ ಸಿಎಂ ಸಿದ್ದರಾಮಯ್ಯ

 

ಚಿತ್ರದುರ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಇಂದು  ಬಿಗ್ ಬಾಸ್ ಹೋಟೆಲ್ ನಲ್ಲಿ  ನಡೆದ  ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಅಭ್ಯರ್ಥಿ ಸೋಮಶೇಖರ್ ಪರ ಪ್ರಚಾರ ಸಭೆಯಲ್ಲಿ ಮಾತಯಾಚಿಸಿದರು.

ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ನೇರವಾಗಿ ಬಿಜೆಪಿಯಲ್ಲಿ ಈಶ್ವರಪ್ಪ ಎನ್ನುವ ಒಬ್ಬ ಪೆದ್ದ ಇದ್ದಾನೆ ಎಂದು ವಾಗ್ದಾಳಿ ನಡೆಸಿದರು.ಸೋಮಶೇಖರ್ ಗೆ ಗಂಧ ಗಾಳಿ ಏನೂ ಗೊತ್ತಿಲ್ಲ ಕಾಂಗ್ರೆಸ್ ಅಂತರವನ್ನು ಅಭ್ಯರ್ಥಿಯಾಗಿ ಮಾಡಿದೆ ಎಂದಿದ್ದಾನೆ. ಸೋಮಶೇಖರ್, ಗ್ರಾ.ಪಂ ಸದಸ್ಯ, ಅಧ್ಯಕ್ಷ‌ ಹಾಗೂ ನಾನು ಸಿಎಂ ಆಗಿದ್ದಾಗ ರಾಜ್ಯಮಟ್ಟದ ನಿಗಮ ಮಂಡಳಿಗೆ ಅಧ್ಯಕ್ಷನಾಗಿ ಮಾಡಿದ್ದೆ. ಇವೆಲ್ಲಾ ಈಶ್ವರಪ್ಪ ಅವರಿಗೆ ಗೊತ್ತಿರಬೇಕಲ್ಲ.  ಏನೋ‌ ಬಾಯಿಗೆ ಬಂದಂಗೆ ಮಾತನಾಡಿಬಿಡೋದು. ಅಭ್ಯರ್ಥಿ ಆಯ್ಕೆ ಬಗ್ಗೆ ಈಶ್ವರಪ್ಪ ಯಾರು ನಮಗೆ ಹೇಳೋಕೆ ಎಂದರು.

ನಮ್ಮ ಪಕ್ಷದವರು ಒಪ್ಪಿಗೆ, ಹೈಕಮಾಂಡ್ ತೀರ್ಮಾನ ಮಾಡಿರೋದು. Who is this ಈಶ್ವರಪ್ಪ ಆರೋಪ‌ ಮಾಡೋದಕ್ಕೆ.

Eshwarappa is a show man

ಈಶ್ವರಪ್ಪ ನಿಮ್ಮ‌ ಕೆಲಸ ನೀವು ನೋಡಿಕೊಳ್ರಿ ನಮ್ಮ ಕತೆ ಯಾಕೆ ನಿಂಗೆ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಾಚಿಕೆ ಆಗಲ್ವಾ ನಿಂಗೆ.  ಈಶ್ವರಪ್ಪ ವಿರುದ್ದ ಏಕವಚನ ದಲ್ಲೇ ಕಿಡಿಕಾರಿದರು.

ಈಶ್ವರಪ್ಪ ರಾಜಕೀಯ ಗಂಧ ಗಾಳಿ ಗೊತ್ತಿಲ್ಲ ಅಂತ ಇವನಿಗೆ ಹೇಳಿದ್ನಲ್ಲ.ಅವನಿಗೆ ರಾಜಕೀಯ ಗಂಧ ಗಾಳಿ ಗೊತ್ತಿದ್ಯಾ?

ಸಚಿವ ಈಶ್ವರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಸಿದರು. ಮಂತ್ರಿ ಆಗಿದ್ದೀನಿ ಅಂತ ಬಾಯಿಗೆ‌ ಬಂದಂಗೆಲ್ಲಾ ಮತನಾಡೋದು ಅಷ್ಟೆ ಗೊತ್ತಿರೋದು.

NREG ಯೋಜನೆ ಮಾಡಿದವರು ಕಾಂಗ್ರೆಸ್ ನಿಂದೇನಪ್ಪ ಈಶ್ವರಪ್ಪ. 40% ಪರ್ಸೆಂಟೆಜ್ ಲಂಚ ವಿಚಾರ.ಇಷ್ಟೊಂದು ಭ್ರಷ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲೇ ಬಂದಿಲ್ಲ.ವಿಧಾನಸಭೆಗೆ ಹೋದ್ರೆ ಬರೀ ಲಂಚದ ವಾಸನೆ ಬರ್ತಿದೆ.ಲಂಚ ಲಂಚ ಅಂತ ಹೇಳಿ ವಾಸನೆ ಹೊಡಿತಿದೆ.ಇಂತಹ ಭ್ರಷ್ಟ ಸರ್ಕಾರವನ್ನು ದಯಮಾಡಿ ಕಿತ್ತು ಹೊಗೆಯಬೇಕು. ಇಲ್ಲದಿದ್ರೆ  ರಾಜ್ಯ ಉಳಿಯಲ್ಲ, ಸಂವಿಧಾನವೂ ಉಳಿಯಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ‌ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಸುಧಾಕರ್, ಗೋವಿಂದಪ್ಪ, ಹನುಮಲಿ ಷಣ್ಮುಖಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಇದ್ದರು.

 

[t4b-ticker]

You May Also Like

More From Author

+ There are no comments

Add yours