ನಿತ್ಯ ಕನ್ನಡದ ಆರಾಧನೆಯಾಗಲಿ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: ನಿತ್ಯ ಕನ್ನಡದ ಉತ್ಸವ ನಡೆಯಬೇಕು, ಒಂದು ದಿನಕ್ಕೆ ಮಾತ್ರ  ಕನ್ನಡ ಸಿಮೀತವಾಗಬಾರದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ನಗರ ಆಟೋ ಡ್ರೈವರ್ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ  ಕನ್ನಡದ ಈ ಮಣ್ಣಿನಲ್ಲಿ ನಾವು ಹುಟ್ಟಿರುವುದೇ ಪುಣ್ಯ ಪಂಪ ಮಹಾಕಾವಿ ಅಂದೇ ಹೇಳಿದ್ದರು ಚಾಗದ ಬೊಗದಕ್ಕರೆಯ ಗೇಯದ ಗೊಟ್ಟಿ ಲಿಂಪುರದ ಮಾಳ್ಗೆ ಮಾಗಿಸರಾಂತಗಿಯೂ ತುರ್ದಪುದೆ ತೀರ ದೊಡಮ್ ಆರ್ ಅಂಕುಶ ವಿಠ್ಠಡಂ ಮಾರಿದುಂಬಿಯಾಗಿ ಮೇಣ ಕೋಗಿಲೆಯಾಗಿ ಪುಟ್ಟುವುದು ಮನಂ ಬನವಾಸಿ ದೇಶವಮ್ ಎಂದಿದ್ದಾರೆ ಗಡಿ ಭಾಗದ ಈ ಜಿಲ್ಲೆಯ ಹಲವು ಬಾಗಗಳಲ್ಲಿ ಕನ್ನಡ ಕಣ್ಮರೆ ಯಾಗುತ್ತಿದೆ ಈ ಭಾಷೆಯನ್ನು ಉಳಿಸಿ ಬೆಳಿಸಿ ವೈಭವಕರಿಸುವ ಕೆಲಸ ನಮ್ಮಿಂದಾಗಬೇಕಿದೆ ಈ ನಿಟ್ಟಿನಲ್ಲಿ ಕನ್ನಡದ ಆತ್ಮಭಿಮಾನವನ್ನು ತಾವೆಲ್ಲರೂ ಬೆಳಿಸಿಕೊಳ್ಳುವ ಅನಿವಾರ್ಯತೆ ಇದೆಯೆಂದು ಹೇಳಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದವರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours