ವಲಸೆ ಕುರಿಗಾರರಿಂದ ಅರ್ಜಿ ಆಹ್ವಾನ

 

ವಲಸೆ ಕುರಿಗಾರರಿಂದ ಅರ್ಜಿ ಆಹ್ವಾನ
****
ಚಿತ್ರದುರ್ಗ, ಜೂನ್16:
2021-22ನೇ ಸಾಲಿನಡಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಸಾಮಾನ್ಯ ಯೋಜನೆಯಡಿ ನಿಗಮದಲ್ಲಿ ನೋಂದಾಣಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ವಲಸೆ (ಅರೆ ಸಂಚಾರಿ ಮತ್ತು ವಲಸೆ ಕುರಿಗಾರರು) ಕುರಿಗಾರರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಕುರಿಗಾರರು ಕುರಿ, ಮೇಕೆಗಳಿಗೆ ಮೇವನ್ನರಿಸಿ ಸಂಚರಿಸುತ್ತಿರುತ್ತಾರೆ. ಆದ್ದರಿಂದ ನೈಸರ್ಗಿಕ ವಿಕೋಪಗಳಿಂದ ಕುರಿಗಾರರಿಗೆ ರಕ್ಷಣೆ ನೀಡಲು ಪರಿಕರ ಕಿಟ್‍ಗಳನ್ನು (ಸಂಚಾರಿ ಟೆಂಟ್ 9*12, ಸೋಲಾರ್ ಟಾರ್ಚ್, ರಬ್ಬರ್ ಪ್ಲೋರ್ ಮ್ಯಾಟ್ (9*10), ರೈನ್ ಕೋಟ್) ಒದಗಿಸಲು ಉದ್ದೇಶಿಸಲಾಗಿದೆ.
ಪರಿಶಿಷ್ಟ ಜಾತಿ-03, ಪರಿಶಿಷ್ಟ ಪಂಗಡ-01, ಸಾಮಾನ್ಯ-10 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಆವರಣ, ಚಿತ್ರದುರ್ಗ ಇಲ್ಲಿ ಪಡೆದು ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 27ರೊಳಗೆ ಸಲ್ಲಿಸಬಹುದಾಗಿದೆ.
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿದ 20ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ಹೊಂದಿರುವ ಕುರಿಗಾರರಿಗೆ ಅದ್ಯತೆ ನೀಡಲಾಗುವುದು. ಸಂಚಾರಿ, ವಲಸೆ ಕುರಿಗಾರರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸ್ಥಳೀಯ ಪಶುವೈದ್ಯರಿಂದ ಸಂಚಾರಿ, ವಲಸೆ ಕುರಿಗಾರರೆಂದು ದೃಢೀಕರಿಸಲ್ಪಟ್ಟಿರಬೇಕು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours