ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆ ಜಾರಿ.

 

ಚಿತ್ರದುರ್ಗ,ಸೆಪ್ಟೆಂಬರ್02:
ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ರಾಜ್ಯ ಸರ್ಕಾರ ಒಂದು ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚದಲ್ಲಿ ಒಂದು ಹೊಸ  ಶಿಷ್ಯ ವೇತನ  ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯಲ್ಲಿ ಪಾಲ್ಗೊಳ್ಳಲು ಎಸ್‍ಎಸ್‍ಎಲ್‍ಸಿ ಅಥವಾ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ ಅಧೀಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶ ಪಡೆದಿರುವ ರಾಜ್ಯದ ಎಲ್ಲಾ ರೈತ ಮಕ್ಕಳ ಬ್ಯಾಂಕುಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಹೊಸ ವಾರ್ಷಿಕ ಶಿಷ್ಯವೇತನ ಪಾವತಿಸಲಾಗುತ್ತದೆ.
ರೈತರ ಮಕ್ಕಳು ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯ ವೇತನಕ್ಕೆ ಮಾತ್ರ ಆರ್ಹರಾಗಿದ್ದು, ಮೆರಿಟ್, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯವೇತನ ಪಡೆದಿದ್ದರೂ ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯನ್ನು ಮುಖ್ಯಮಂತ್ರಿಗಳು ಸೆಪ್ಟೆಂಬರ್ 05 ರಂದು ವಿಧಾನಸೌಧದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಜಿಲ್ಲೆಯ ಆಸಕ್ತ ರೈತ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಜಂಟಿ ಕೃಷಿ ನಿರ್ದೇಶಕರು ಡಾ.ಪಿ ರಮೇಶ್‍ಕುಮಾರ್ ತಿಳಿಸಿದ್ದಾರೆ.
ಕೋರ್ಸ್ ಹೆಸರು, ಶಿಷ್ಯ ವೇತನ ವಿವರ: ಪಿಯುಸಿ, ಐಟಿಐ, ಡಿಪ್ಲೋಮಾಗೆ ಹುಡುಗರಿಗೆ ರೂ. 2500/-, ಹುಡುಗಿಯರು, ಅನ್ಯ ಲಿಂಗದವರಿಗೆ ರೂ. 3000/-, ಎಲ್ಲಾ ಬಿ.ಎ, ಬಿಎಸ್‍ಸಿ, ಬಿಕಾಂ, ಇತ್ಯಾದಿ ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ವೃತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ ಹುಡುಗರಿಗೆ ರೂ. 5000/-,  ಹುಡುಗಿಯರು, ಅನ್ಯ ಲಿಂಗದವರಿಗೆ ರೂ. 5500/-, ಎಲ್‍ಎಲ್‍ಬಿ, ಪ್ಯಾರ ಮೆಡಿಕಲ್, ಬಿಫಾರ್ಮ್, ನರ್ಸಿಂಗ್ ಇತ್ಯಾದಿ ವೃತಿಪರ ಕೋರ್ಸ್‍ಗಳ ಹುಡುಗರಿಗೆ ರೂ. 7500/-,  ಹುಡುಗಿಯರು, ಅನ್ಯ ಲಿಂಗದವರಿಗೆ ರೂ. 8000/-, ಎಂಬಿಬಿಎಸ್, ಬಿಇ, ಬಿಟೆಕ್, ಮತ್ತು ಇಲ್ಲಾ ಸ್ನಾತಕೋತ್ತರ ಕೋರ್ಸ್‍ಗಳು ಹುಡುಗರಿಗೆ ರೂ. 10000/-,  ಹುಡುಗಿಯರು, ಅನ್ಯ ಲಿಂಗದವರಿಗೆ ರೂ. 11000/- ಶಿಷ್ಯ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಕಿಸಬಹುದು ಎಂದು ಜಂಟಿ  ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours