ರೈತರಿಗೆ ಸಿಹಿ ಸುದ್ದಿ:ಶೇಂಗಾ ಬಿತ್ತನೆ ಬೀಜ ದರ ಇಳಿಕೆ .

 

ಶೇಂಗಾ ಬಿತ್ತನೆ ಬೀಜ ದರ ಇಳಿಕೆ
******
ಚಿತ್ರದುರ್ಗ,ಜುಲೈ04:
2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖಾ ಕಾರ್ಯಕ್ರಮಗಳಡಿ ರಿಯಾಯಿತಿ ದರದಲ್ಲಿ ಪ್ರಮಾಣಿತ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಲ್ಲಿ ಶೇಂಗಾ ಬಿತ್ತನೆ ಬೀಜಕ್ಕೆ ಸರ್ಕಾರ ನಿಗಧಿಪಡಿಸಿದ ಸಂಸ್ಥೆಗಳಿಂದ ಪೂರೈಸಲು ಈ ಹಿಂದೆ ನಿಗಧಿಪಡಿಸಿದ್ದ ದರಕ್ಕೆ ಅನುಗುಣವಾಗಿ ಪ್ರತಿ ಕ್ವಿಂಟಾಲ್‍ಗೆ  ರೂ.400/-ಗಳನ್ನು ದರವನ್ನು ಕಡಿತಗೊಳಿಸಲಾಗಿದೆ. ಅಲ್ಲದೆ ಮತ್ತೊಮ್ಮೆ ದರ ಪರಿಷ್ಕರಿಸಿ ಪ್ರತಿ ಕ್ವಿಂಟಾಲ್‍ಗೆ ರೂ.400/-ಗಳನ್ನು ಕಡಿತಗೊಳಿಸಿ ಒಟ್ಟಾರೆಯಾಗಿ ರೂ.800/-ಗಳನ್ನು ಕಡಿತಗೊಂಡಿರುತ್ತದೆ.
ರೈತರಿಗೆ ಸರ್ಕಾರದ ಸಹಾಯಧನದ ಜೊತೆಗೆ ಪ್ರತಿ 30 ಕೆಜಿ ಬ್ಯಾಗ್‍ಗೆ ರೂ.240/-ಗಳನ್ನು ಹೆಚ್ಚುವರಿಯಾಗಿ ಕಡಿತಗೊಳಿಸಿದೆ. ಆದ್ದರಿಂದ ಶೇಂಗಾ ಬಿತ್ತನೆ ಬೀಜ ಪಡೆಯುವ ರೈತ ಬಾಂದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕರಾದ ಡಾ.ಪಿ.ರಮೇಶ್‍ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ  ಸಮೀಪದ ರೈತಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಿದೆ.

[t4b-ticker]

You May Also Like

More From Author

+ There are no comments

Add yours