ನಾಯಕನಹಟ್ಟಿ ಪಟ್ಟಣದ ಬೀದಿ ವ್ಯಾಪಾರಸ್ಥರಿಂದ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ.

 

ನಾಯಕನಹಟ್ಟಿ ಪಟ್ಟಣದ ಬೀದಿ ವ್ಯಾಪಾರಸ್ಥರಿಂದ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
******
ಚಿತ್ರದುರ್ಗ,ಜುಲೈ04:
ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ  ಆತ್ಮ ನಿರ್ಭರ್ ನಿಧಿಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯಡಿ  ರೂ10,000/- ಸಾಲ ಪಡೆದ ಫಲಾನುಭವಿಗಳಿಗೆ 2ನೇ ಅವಧಿಗೆ  ಬ್ಯಾಂಕ್‍ಗಳಿಂದ ಪ್ರತಿ ಫಲಾನುಭವಿಗಳಿಗೆ ರೂ.20,000/- ಗಳವರೆಗೆ ಸಾಲ ನೀಡಲು  ಸರ್ಕಾರವು ಉದ್ದೇಶಿಸಿರುವಂತೆ, ನಾಯಕನಹಟ್ಟಿ ಪಟ್ಟಣದ ಬೀದಿ ವ್ಯಾಪಾರಸ್ಥರಿಂದ ಸಾಲ ಸೌಲಭ್ಯ ಪಡೆಯಲು  ಅರ್ಜಿ ಆಹ್ವಾನಿಸಿದೆ. ಆಗಸ್ಟ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ಆಕರ್ಷಕ ಬಡ್ಡಿದರದಲ್ಲಿ ಬ್ಯಾಂಕುಗಳ ಮೂಲಕ 2ನೇ ಅವಧಿಗೆ ರೂ.20,000/- (ಇಪ್ಪತ್ತು ಸಾವಿರ) ವರೆಗೆ ಸಾಲಸೌಲಭ್ಯ ನೀಡಲಾಗುವುದು ಹಾಗೂ ನಿಗಧಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಶೇ.7 ರಷ್ಟು ಬಡ್ಡಿ ದರದಲ್ಲಿ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ  ನೀಡಲಾಗುವುದು. ಈ ಯೋಜನೆಯ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶಗಳನ್ನು ಹೊಂದಿರುತ್ತದೆ.
2020-2021ನೇ ಸಾಲಿನಲ್ಲಿ  ಈಗಾಗಲೇ ಬ್ಯಾಂಕ್‍ನಲ್ಲಿ ರೂ10,000/- ಸಾಲಸೌಲಭ್ಯ ಪಡೆದ ಫಲಾನುಭವಿಗಳು ಪುನಃ ಬ್ಯಾಂಕಿನಲ್ಲಿ ರೂ.20,000/- ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿಯನ್ನು ಆಗಸ್ಟ್ 10 ರೊಳಗಾಗಿ ಸಲ್ಲಿಸಬಹುದಾಗಿದೆ.
ಆಸಕ್ತರು ಬಿ.ಪಿ.ಎಲ್ ಕಾರ್ಡ್, ಆಧಾರಕಾರ್ಡ್, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ವ್ಯಾಪಾರ ಮಾಡುತ್ತಿರುವ ಸ್ಥಳದ ಫೋಟೋ, ಪಾಸ್‍ಪೋರ್ಟ್ ಸೈಜ್ ಫೋಟೋ-2, ಜಾತಿ  ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಈಗಾಗಲೇ ನಿಗಧಿತ ಬ್ಯಾಂಕ್‍ಗಳಲ್ಲಿ ಪಡೆದ ರೂ.10,000/- ಸಾಲದ  ತಿರುವಳಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ರೂ.20,000/- ಗಳ  ಸಾಲವನ್ನು ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ  ಯೋಜನೆಯಡಿ ಅರ್ಹ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ನಾಯಕಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours