ಉಚಿತ ಬೀಜದ ಕಿಟ್ ಪಡೆಯಲು ಮುಗಿಬಿದ್ದ ಅನ್ನದಾತರು: ಕೃಷಿ ಇಲಾಖೆ ಗೋಡಮ್ ಬಾಗಿಲು ತೆಗೆದು ಅಧಿಕಾರಿಗಳು ಹೇಳಿದ್ದೇನು ನೋಡಿ.

 

 

ಚಳ್ಳಕೆರೆ : ಕಸಬಾ ಹೋಬಳಿಯ ರೈತರಿಗೆ ಆಹಾರ ಭದ್ರತಾ ಯೋಜನೆಯಡಿ ನೀಡಬೇಕಾಗಿದ್ದ 1615 ಶೇಂಗಾ ಕಿಟ್ ಹಾಗೂ 600 ತೊಗರಿ ಕಿಟ್ ಗಳನ್ನು ಕಳೆದ 10 ದಿನಗಳಿಂದ ವಿತರಣೆ ಮಾಡಿ ಕೃಷಿ ಇಲಾಖೆ ಖಾಲಿ ಮಾಡಿದೆ. ಆದರೆ ಮಂಗಳವಾರ ನಮಗೂ ಪ್ರೀ ಕಿಟ್ ಕೊಡಬೇಕು ಎಂದು ಪ್ರೀ ಕಿಟ್ ಸಿಗದ ಕಸಬಾ ಹೋಬಳಿ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಅವರಣದಲ್ಲಿ‌ ಜಮಾಯಿಸಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರೀಯಿಸಿ ಸ್ಪಷ್ಟನೆ ನೀಡಿದ ಕೃಷಿ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಕಳದೆ 10 ದಿನಗಳಿಂದ ಸರ್ಕಾರ ಕಸಬಾ ಹೋಬಳಿಯ ರೈತರಿಗೆ ನಿಗಧಿ ಪಡಿಸಿ 1615 ತೊಗರಿ ಕಿಟ್ ಹಾಗೂ 600 ಶೇಂಗಾದ ಪ್ರೀ ಬೀಜದ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಸಬ್ಸಿಡ್ ದರದಲ್ಲಿ ಬೀಜದ ಶೇಂಗಾ, ತೋಗರಿ ಬೀಜ ವಿತರಣೆ ಮಾಡಲಾಗುವುದು ಎಂದು ರೈತರಿಗೆ ಸ್ಪಷ್ಟನೆ ನೀಡಿದರು.
ಆದರೆ ಇದಕ್ಕೆ ಒಪ್ಪದ ರೈತರು ಅದೆಂಗೆ ಖಾಲಿಯಾಗುತ್ತದೆ, ಪ್ರೀ ಬೀಜದ ಕಿಟ್ ವಿತರಣೆ ಮಾಡಿದ ಮೇಲೆ ಎಲ್ಲರಿಗೂ ವಿತರಣೆ ಮಾಡಬೇಕು, ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಅಚ್ಚುವ ಕೆಲಸ ಮಾಡಬಾರದು, ಪ್ರೀ ಬೀಜದ ಕಿಟ್ ವಿತರಣೆ ಮಾಡಬೇಕಾದರೆ ಎಲ್ಲರಿಗೂ ವಿತರಣೆ ಮಾಡಬೇಕು. ಇಲ್ಲವಾದರೆ ಯಾರಿಗೂ ಕೂಡ ವಿತರಣೆ ಮಾಡಬಾರದಿತ್ತು ಎಂದರು.

ಇದಕ್ಕೆ ಸಮಂಜಸಿದ ಕೃಷಿ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ನಾವು ಸರ್ಕಾರ ನೀಡಿದ ಆದೇಶದಂತೆ ವಿತರಣೆ ಮಾಡಿದ್ದೇವೆ ನಾವು ಬೀಜದ ಕಿಟ್ ಇಟ್ಟುಕೊಂಡು ಎನು ಮಾಡಲಿ ಎಂದಾಗ ರೈತರು ಸೋಮವಾರ ಬಂದ ರೈತರಿಗೆ ಪ್ರೀ ಕಿಟ್ ವಿತರಣೆ ಮಾಡಿದರಂತೆ, ಇವತ್ತು ಖಾಲಿಯಾಗಿದವೆ ಎಂದು ಹೇಳುತ್ತೀರ ಗೋಡಂ ನಲ್ಲಿ ಶೇಂಗಾ ಹಾಗೂ ತೊಗರಿ ಕಿಟ್ ಇಟ್ಟು ಕೊಂಡು, ಮೊದಲು ಕೋಡಂ ಬೀಗ ತೆಗೆದು ತೋರಸಿ ಮನೆಗೆ ಹೋಗತ್ತೀವಿ ಎಂದು ಒತ್ತಾಯಿಸಿದರು ಆಗ ಕೃಷಿ ಸಹಾಯಕ ನಿರ್ದೇಶಕರು ಗೋಡಮ್ ಗಳ ಬೀಗ ತೆಗೆದು ತೋರಿಸಿದರು.
ಆಗ ಕಿಟ್ ಗಳು ಖಾಲಿಯಾಗಿದವೆ ಎಂದು ಮನೆ ಕಡೆಗೆ ಅನ್ನದಾತರು ರೈತರನ್ನು ಎಲ್ಲರೂ ಕಡೆಗಣಿಸುತ್ತರೆ ಎಂದು ಗೊಣಿಗಿಕೊಂಡು ಮನೆಯ ಕಡೆ ಹೆಜ್ಜೆ ಹಾಕಿದರು.

[t4b-ticker]

You May Also Like

More From Author

+ There are no comments

Add yours