ಮಳಲಿ ಗ್ರಾಮದಲ್ಲಿರುವ ಮದ್ಯದಂಗಡಿ ತೆರವಿಗೆ ಕ್ರಮ – ಕೆ.ಎಸ್ ನವೀನ್

 

ವರದಿ: ಚಿಕ್ಕಪ್ಪನಹಳ್ಳಿ ಸೋಮು

ಹೊಸದುರ್ಗ: ಮಳಲಿ ಗ್ರಾಮದ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಮದ್ಯದಂಗಡಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು.

ತಾಲೂಕಿನ ಮಳಲಿ ಗ್ರಾಮದ ಗ್ರಾಮ ದೇವತೆ ಕರಿಯಮ್ಮ ದೇವಿ ಕೆಂಡೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ್ದ ಅವರು ಸಾರ್ವಜನಿಕರಿಂದ ಬಂದ ದೂರನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಲೆಯ ಸುತ್ತಾ 100 ಮೀಟರ್ ಅಂತರದಲ್ಲಿ ಯಾವುದೇ ಮಾದಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಷೇದವಿದ್ದರೂ ಈ ಶಾಲೆಯ ಕಾಂಪೌಂಡ್‍ಗೆ ಹೊಂದಿಕೊಂಡತೆ ಮದ್ಯದಂಗಡಿ ಇರುವುದು ವಿಪರ್ಯಾಸ ದಿನ ಪ್ರತಿ ನಮ್ಮ ಮಕ್ಕಳೇ ಶಾಲೆಗೆ ಬಂದಾಗ ಮದ್ಯದ ಬಾಟಲಿ ತೆಗೆದು ಹಾಕುವಂತಹ ಪರಿಸ್ಥಿತಿ ಇರುವುದು ಅತ್ಯಂತ ನೋವಿನ ಸಂಗತಿ ಈ ಕೂಡಲೇ ಈ ಬಗ್ಗೆ ಅಬಕಾರಿ ಡಿಸಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ತೆರವು ಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗವುದು ಎಂದರು.

ಇಲ್ಲಿಯ ಶಾಲಾ ಕಟ್ಟಡ ಹಾಲಾಗಿದ್ದು ದುರಸ್ತಿ ಮಾಡಿಸಿಕೊಡುವಂತೆ ಗ್ರಾಮಸ್ಥರು ಕೊರಿದ್ದಾರೆ ಇದೆ ತೆರೆನಾದ ಹಲವಾರು ಕಟ್ಟಡಗಳು ತಾಲೂಕಿನಲ್ಲಿವೆ ಎಂಬ ದೂರು ಕೇಳಿ ಬಂದಿದ್ದೆ ಈ ಬಗ್ಗೆ ಬಿಇಓ ಹಾಗೂ ಡಿಡಿಪಿಐ ಅವರೊಂದಿಗೆ ಚರ್ಚಿಸಿ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಕೊಡಿಸಲಾಗುವುದು ಎಂದರು.

ಪ್ರಾರಂಭದಲ್ಲಿ ಗ್ರಾಮ ದೇವತೆ ಕರಿಯಮ್ಮ ದೇವಾಲಯಕ್ಕೆ ಬೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಠ್, ತೆಂಗು ಅಭಿವೃದ್ದಿ ಮಂಡಳಿ ನಿರ್ದೇಶಕ ಗುರುಸ್ವಾಮಿ ಗ್ರಾಮ ಮುಖಂಡರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours