ಬಿ.ಇಡಿ. ದಾಖಲಾತಿ: ಮೂಲ ದಾಖಲೆಗಳ ಪರಿಶೀಲನೆ

 

ಚಿತ್ರದುರ್ಗ, ಡಿಸೆಂಬರ್04:

2021-22ನೇ ಸಾಲಿನ 2 ವರ್ಷದ ಬಿ.ಇಡಿ ಕೋರ್ಸ್ ದಾಖಲಾತಿಗೆ ಸಂಬಂಧಿಸಿದಂತೆ, ಕೇಂದ್ರಿಕೃತ ದಾಖಲಾತಿ ಘಟಕದಿಂದ ಸೀಟು ಹಂಚಿಕೆಯಾದ ಅಭ್ಯರ್ಥಿಗಳು, ಆಯ್ಕೆ ಪಟ್ಟಿಯಲ್ಲಿ ಸೂಚಿಸಿದ ಸಂಸ್ಥೆಗೆ ದಾಖಲಾಗಲು, ನೋಡಲ್ ಕೇಂದ್ರವಾದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ ಇಲ್ಲಿ ಮೂಲ ದಾಖಲೆಗಳ ಪರಿಶೀಲನೆಗಾಗಿ ಹಾಗೂ ಅರ್ಹರಲ್ಲದ ತಿರಸ್ಕøತ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 02 ರಿಂದ 10 ರವರೆಗೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳಾದ ಎಂ.ಆರ್.ಮಂಜುನಾಥ್ ಇವರನ್ನು ನೇರವಾಗಿ ಅಥವಾ ಮೊಬೈಲ್ ಸಂಖ್ಯೆ 9535325421 ಮೂಲಕ ಸಂಪರ್ಕಿಸುವುದು ಎಂದು ಸಿಟಿಇ ಪ್ರಾಂಶುಪಾಲರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours