ಪೋಲಿಸರು ನಾಯಿಗಳಂತೆ ಎಂಜಲು ತಿಂದು ಬದುಕುತ್ತಿದ್ದಾರೆ.

 

ಬೆಂಗಳೂರು: ‘ಪೊಲೀಸರು ಭ್ರಷ್ಟರಾಗಿದ್ದಾರೆ. ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೋಲಿಸ್ ಇಲಾಖೆಯ ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸಭೆಯಲ್ಲಿ ಗೃಹ ಸಚಿವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಜತೆ ದೂರವಾಣಿ ಮೂಲಕ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಅಕ್ರಮ ಜಾನುವಾರು, ಗೋ ಸಾಗಾಟ ವಿಚಾರದಲ್ಲಿ ಸಿಟ್ಟಾದ ಸಚಿವರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ.

‘ಇಡೀ ಚಿಕ್ಕಮಗಳೂರು ಜಿಲ್ಲೆ ನಿಮ್ಮದು. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದ್ದೇವೆ. ಯಾರಿಗೂ ಕಡಿಮೆ ಮಾಡಿಲ್ಲ. ಆದ್ರೆ ಇವರಿಗೆಲ್ಲ ಸಂಬಳದಲ್ಲಿ ಬದುಕಬೇಕೆಂದಿಲ್ಲ. ಇಂಥವರೆಲ್ಲ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಯುನಿಫಾರಂ ಬಿಚ್ಚಿಟ್ಟು ಎಲ್ಲಾದರೂ ಹೋಗಿ ಸಾಯಲಿ ಅಥವಾ ಮಣ್ಣು ಹೊರಲಿ. ಇವರನ್ನೆಲ್ಲ ನಂಬಿಕೊಂಡು ಜನ ಬದುಕುವುದು ಹೇಗೆ? ಇಲ್ಲಿ ಹಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗುತ್ತಾರೆ. ಎಲ್ಲ ಪೊಲೀಸರು ಹಾಳಾಗಿ ಹೋಗಿದ್ದಾರೆ’ ಎಂದು ಸಚಿವರು ಹೇಳುತ್ತಿರುವುದು ವಿಡಿಯೊದಲ್ಲಿಸೆ

ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು ಎಲ್ಲ ಪೊಲೀಸರನ್ನು ಉದ್ದೇಶಸಿ ಆ ಹೇಳಿಕೆ ನೀಡಿಲ್ಲ. ಅಕ್ರಮ ಗೋ ಸಾಗಾಟ ಮಾಡುವವರೊಂದಿಗೆ ಶಾಮೀಲಾದವರನ್ನು ಮಾತ್ರ ಉಲ್ಲೇಖಿಸಿ ಹಾಗೆ ಮಾತನಾಡಿದ್ದೆ’ ಎಂದು ಹೇಳಿದ್ದಾರೆ.

‘ಗೃಹಸಚಿವನಾಗಿ ನಾನು ಪೊಲೀಸರನ್ನು ಗೌರವಿಸುತ್ತೇನೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಮೊನ್ನೆಯಷ್ಟೇ ನನ್ನ ಕ್ಷೇತ್ರದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದವರ ಮೇಲೆ ಹಲ್ಲೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಕೆಲ ಪೊಲೀಸರನ್ನು ಉಲ್ಲೇಖಿಸಿದ್ದೆ’ ಎಂದು ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours